ಡ್ರಗ್ಸ್ (Drugs)ಮಾರಾಟ ಎಗ್ಗಿಲ್ಲದೇ ಸಾಗುತ್ತಿದೆ. ಖಾಕಿ ಪಡೆ ಎಷ್ಟೇ ಕಣ್ಣಿಟ್ಟರು ಡ್ರಗ್ಸ್ ಪೆಡ್ಲರ್ಗಳ ಆಟ ಮುಂದುವರಿದಿದೆ. ಒಂದಲ್ಲ ಎರಡಲ್ಲ ಬರೋಬ್ಬರಿ ಐದು ಕೋಟಿ ರೂ. ಡ್ರಗ್ಸ್ ಸೀಜ್ ಮಾಡಿದ್ದಾರೆ.
ಡ್ರಗ್ಸ್ ವಿಷಯದಲ್ಲಿ ವಿದೇಶಿಗರ ಹಾವಳಿ ಮಿತಿಮೀರಿದ್ದು, ವೀಸಾ ಅವಧಿ ಮುಗಿದಿದರೂ ಬೆಂಗಳೂರಲ್ಲಿ ವಾಸಿಸುತ್ತಿದ್ದಾರೆ. ಆಫ್ರಿಕಾ ಮೂಲದ ಜೊಯಲ್ ಕಾಬೊಂಗ್, ಜೊಯ್ ಸಂಡೇ ಬಂಧಿತ ಪ್ರಜೆಗಳು. ಜೊಯಲ್ ಕಾಬೊಂಗ್ 12 ವರ್ಷಗಳ ಹಿಂದೆ ವಿದ್ಯಾರ್ಥಿ ವೀಸಾದಡಿ ಭಾರತಕ್ಕೆ ಬಂದಿದ್ದ. ಅದೇ ರೀತಿಯಾಗಿ ಜೊಯ್ ಸಂಡೇ ಸಹ ಮೂರ ವರ್ಷಗಳ ಹಿಂದೆ ಭಾರತಕ್ಕೆ ಬಂದಿದ್ದಳು. ವೀಸಾ ಅವಧಿ ಮುಗಿದಿದರೂ ಬೆಂಗಳೂರಲ್ಲಿ ವಾಸವಾಗಿದ್ದರು. ಈ ಇಬ್ಬರು ಮತ್ತೊಬ್ಬನಿಂದ ಡ್ರಗ್ಸ್ ಖರೀದಿ ಮಾಡಿ ಮಾರಾಟ ಮಾಡುತ್ತಿದ್ದರು. ಆದರೆ ಆ.15ರ ಸಂಜೆ ಬೆಟ್ಟದಾಮಸಪುರದಲ್ಲಿ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಸದ್ಯ ಬಂಧಿತರಿಂದ 2.150 ಕೆಜಿ ಎಂಡಿಎಂಎ ವಶಕ್ಕೆ ಪಡೆದು ಬಂಧಿಸಲಾಗಿದೆ ಎಂದು ಪೊಲೀಸ್ ಆಯುಕ್ತರುಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ಸಿಸಿಬಿ ಪೊಲೀಸರು ಡ್ರಗ್ಸ್ ಪೆಡ್ಲಿಂಗ್ ಮಾಡುತ್ತಿದ್ದ ಆಫ್ರಿಕನ್ ಮೂಲದ ಜಾನ್ ಡಿಕೊಸ್ಟೋ ಎಂಬಾತನನ್ನ ಬಂಧಿಸಿದ್ದು, 40 ಲಕ್ಷ ರೂ ಮೌಲ್ಯದ 255 ಗ್ರಾಂ. ತೂಕದ ಎಂಡಿಎಂಎ ಕ್ರಿಸ್ಟೆಲ್ ವಶಕ್ಕೆ ಪಡೆಯಲಾಗಿದೆ. ಟೂರಿಸ್ಟ್ ವೀಸಾದಡಿಯಲ್ಲಿ ಬಂದು ಆವಲಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಿದ್ದ ಜಾನ್, ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ. ಆದರೆ ಪರಿಚಯಸ್ಥರು ಹಾಗೂ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


