Saturday, November 7, 2026
spot_img
More
    spot_img
    HomeLatest newsಸಾಲು ಸಾಲು ಹಬ್ಬಗಳು, ರಜೆ: ವಿಶೇಷ ರೈಲುಗಳಲ್ಲಿ 1 ಕೋಟಿ ಜನರ ಪ್ರಯಾಣ!

    ಸಾಲು ಸಾಲು ಹಬ್ಬಗಳು, ರಜೆ: ವಿಶೇಷ ರೈಲುಗಳಲ್ಲಿ 1 ಕೋಟಿ ಜನರ ಪ್ರಯಾಣ!

    ದಸರಾ, ದೀಪಾವಳಿ, ಛತ್ ಪೂಜೆ ಹೀಗೆ ಈ ಬಾರಿ ಸಾಲು ಸಾಲು ಹಬ್ಬಗಳು, ಸರಣಿ ರಜೆಗಳು ಒಟ್ಟಿಗೆ ಬಂದಿವೆ. ಹಬ್ಬದ ಸಮಯದಲ್ಲಿ ಸಂಚಾರ ನಡೆಸುವ ಜನರ ಸಂಖ್ಯೆಯೂ ಹೆಚ್ಚಾಗಿರುತ್ತದೆ. ಆದ್ದರಿಂದ ಭಾರತೀಯ ರೈಲ್ವೆ ಪ್ರಯಾಣಿಕರ ದಟ್ಟಣೆ ಕಡಿಮೆ ಮಾಡಲು ಪ್ರತಿ ರೈಲ್ವೆ ವಲಯದಿಂದಲೂ ವಿಶೇಷ ರೈಲುಗಳನ್ನು ಓಡಿಸುತ್ತಿದೆ.

    ಭಾರತೀಯ ರೈಲ್ವೆ ವಿಶೇಷ ರೈಲುಗಳಲ್ಲಿ 19 ದಿನಗಳಲ್ಲಿ 1 ಕೋಟಿ ಜನರು ಸಂಚಾರ ನಡೆಸಿದ್ದಾರೆ ಎಂದು ರೈಲ್ವೆ ಇಲಾಖೆ ಹೇಳಿದೆ. 12,000 ವಿಶೇಷ ರೈಲುಗಳನ್ನು ದೇಶಾದ್ಯಂತ ಓಡಿಸಲಾಗುತ್ತಿದೆ ಎಂದು ಇಲಾಖೆ ತಿಳಿಸಿದೆ.

    ಸುಮಾರು 1 ಕೋಟಿ ಪ್ರಯಾಣಿಕರು ವಿಶೇಷ ರೈಲುಗಳಲ್ಲಿ ಕಳೆದ 19 ದಿನಗಳಲ್ಲಿ ಸಂಚಾರ ನಡೆಸಿದ್ದಾರೆ. ಹಬ್ಬದ ಸಮಯದಲ್ಲಿ 12 ಲಕ್ಷ ರೈಲ್ವೆ ಸಿಬ್ಬಂದಿ 24*7 ಕೆಲಸ ಮಾಡುವ ಮೂಲಕ ಪ್ರತಿ ಪ್ರಯಾಣದ ಸುರಕ್ಷತೆ, ಪ್ರಯಾಣಿಕರ ಅಗತ್ಯ ಸೌಲಭ್ಯದ ಕುರಿತು ಕಾಳಜಿ ವಹಿಸಿದ್ದಾರೆ ಎಂದು ರೈಲ್ವೆ ಇಲಾಖೆ ಎಕ್ಸ್‌ ಖಾತೆಯಲ್ಲಿ ಮಾಹಿತಿ ನೀಡಿದೆ.

    ಕಳೆದ ವರ್ಷಕ್ಕಿಂತ ಅಧಿಕ ರೈಲು: ಭಾರತೀಯ ರೈಲ್ವೆ ಮಾಹಿತಿ ಪ್ರಕಾರ ಈ ವರ್ಷ 2024ಕ್ಕಿಂತ ಹೆಚ್ಚು ರೈಲು ಓಡಿಸಲಾಗಿದೆ. ದೀಪಾವಳಿ, ಛತ್ ಪೂಜೆ ಎಂದು ಈ ಬಾರಿ 12,000 ವಿಶೇಷ ರೈಲು ಓಡಿಸಲಾಗಿದೆ. ಕಳೆದ ವರ್ಷ 7,724 ರೈಲುಗಳನ್ನು ಓಡಿಸಲಾಗಿತ್ತು.

    ಯಾವ ವಲಯದಿಂದ ಎಷ್ಟು ರೈಲು ಓಡಿಸಲಾಗಿದೆ ಎಂದು ರೈಲ್ವೆ ಇಲಾಖೆ ಹೇಳಿದೆ. ನೈಋತ್ಯ ರೈಲ್ವೆ ವಲಯದಿಂದ 325, ಎನ್‌ಸಿಆರ್ 438, ಸಿಆರ್ 1998, ಇಸಿಆರ್ 1217, ಎನ್‌ಆರ್‌ 1919, ಎನ್‌ಡಬ್ಲ್ಯುಆರ್ 1217, ಡಬ್ಲ್ಯುಆರ್ 1501 ಸೇರಿದಂತೆ ಒಟ್ಟು 12,011 ರೈಲುಗಳು ಇಲ್ಲಿಯ ತನಕ ಸಂಚಾರವನ್ನು ನಡೆಸಿವೆ.

    ಹಬ್ಬಗಳ ಸಂದರ್ಭದಲ್ಲಿ (ಅಕ್ಟೋಬರ್ 1 ರಿಂದ 19) ಕೇವಲ 19 ದಿನಗಳಲ್ಲಿ 1 ಕೋಟಿಗೂ ಹೆಚ್ಚು ಪ್ರಯಾಣಿಕರು ವಿಶೇಷ ರೈಲುಗಳ ಮೂಲಕ ಪ್ರಯಾಣಿಸಿದ್ದಾರೆ. ಭಾರತೀಯ ರೈಲ್ವೆಯೂ ಎಲ್ಲಾ ನಿಲ್ದಾಣಗಳಲ್ಲಿಯೂ ಪ್ರಯಾಣಿಕರ ನಿರ್ವಹಣೆಗೆ ಹೆಚ್ಚಿನ ಸಮನ ನೀಡಿತ್ತು. ನಿರೀಕ್ಷಣಾ ಕೊಠಡಿ, ಹೆಚ್ಚಿನ ಸಂಖ್ಯೆಯ ಟಿಕೆಟ್ ಕೌಂಟರ್‌ಗಳು, ಕುಡಿಯುವ ನೀರು ಹಾಗೂ ಶುದ್ಧ ಶೌಚಾಲಯಗಳ ಸೌಲಭ್ಯಗಳನ್ನು ಒದಗಿಸಿತ್ತು. ಪ್ರಯಾಣಿಕರ ಸುಗಮ ಮತ್ತು ಆರಾಮದಾಯಕ ಸಂಚಾರಕ್ಕಾಗಿ ಭಾರತೀಯ ರೈಲ್ವೆ ಎಲ್ಲಾ ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ.

    ನವದೆಹಲಿಯಿಂದ ಹೊರಡುವ ವಿಶೇಷ ರೈಲುಗಳ ಮೂಲಕ (ನವದೆಹಲಿ, ದೆಹಲಿ, ಆನಂದ್ ವಿಹಾರ್, ಹಜ್ರತ್ ನಿಜಾಮುದ್ದೀನ್ ಮತ್ತು ಶಕೂರ್ ಬಸ್ತೀ ನಿಲ್ದಾಣಗಳಿಂದ) ಪ್ರಯಾಣಿಸಿದ ಪ್ರಯಾಣಿಕರ ಸಂಖ್ಯೆ ಅಕ್ಟೋಬರ್ 16 ರಿಂದ 19ರವರೆಗೆ ನಾಲ್ಕು ದಿನಗಳಲ್ಲಿ 15.17 ಲಕ್ಷವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 13.66 ಲಕ್ಷ ಜನರು ಪ್ರಯಾಣಿಸಿದ್ದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search