ʼಕಿಂಗ್ ಆಫ್ ಕ್ಲೇʼ ಎಂದೇ ಹೆಸರು ಮಾಡಿರುವ ವಿಶ್ವವಿಖ್ಯಾತ ಟೆನಿಸ್ ಆಟಗಾರ ರಾಫೆಲ್ ನಡಾಲ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.
ಮಂಗಳವಾರ ( ನವೆಂಬರ್ 19 ) ನಡೆದ ಡೇವಿಡ್ ಕಪ್ ಟೂರ್ನಿಯ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಸ್ಪೇನ್ ಸೋಲನುಭವಿಸಿದ್ದು, ಇದರೊಂದಿಗೆ ನಡಾಲ್ ಅವರ ವೃತ್ತಿ ಜೀವನ ಕೂಡ ಅಂತ್ಯಗೊಂಡಿದೆ. ಅಂತಿಮ ಪಂದ್ಯದಲ್ಲಿ ನೆದರ್ಲೆಂಡ್ಸ್ನ ಬೊಟಿಕ್ ವ್ಯಾನ್ ಡಿ ಝಾಂಡ್‌ಸ್ಚುಲ್ಪ್ ಅವರನ್ನು ಎದುರಿಸಿದ ನಡಾಲ್ 6-4, 6-4 ಅಂತರದಿಂದ ಸೋಲುಂಡರು.
ಈ ಸೋಲಿನೊಂದಿಗೆ ರಾಫೆಲ್ ನಡಾಲ್ ತಮ್ಮ 20 ವರ್ಷಗಳ ಟೆನಿಸ್ ಕೆರಿಯರ್ ಅನ್ನು ಅಂತ್ಯಗೊಳಿಸಿದರು. ನಡಾಲ್ ತಮ್ಮ ವೃತ್ತಿ ಜೀವನದಲ್ಲಿ ಮಾಡಿದ ಸಾಧನೆಗಳ ಪಟ್ಟಿ ಕೆಳಕಂಡಂತಿದೆ…
1080 ಸಿಂಗಲ್ಸ್ ಜಯ
92 ಸಿಂಗಲ್ಸ್ ಪ್ರಶಸ್ತಿಗಳು
63 ಸಿಂಗಲ್ಸ್ ಪ್ರಶಸ್ತಿಗಳು (ಕ್ಲೇ ಕೋರ್ಟ್)
36 ಮಾಸ್ಟರ್ಸ್ ಪ್ರಶಸ್ತಿಗಳು (1000 30s)
30 ಗ್ರ್ಯಾಂಡ್ ಸ್ಲ್ಯಾಮ್ ಫೈನಲ್‌ಗಳು
22 ಗ್ರ್ಯಾಂಡ್ ಸ್ಲ್ಯಾಮ್ ಪ್ರಶಸ್ತಿಗಳು
14 ರೋಲ್ಯಾಂಡ್ ಗ್ಯಾರೋಸ್ ಪ್ರಶಸ್ತಿಗಳು
2 ಒಲಿಂಪಿಕ್ಸ್ ಚಿನ್ನದ ಪದಕಗಳು
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


