Saturday, August 8, 2026
spot_img
More
    spot_img
    HomeStateರಾಜ್ಯಾದ್ಯಂತ 2.46 ಲಕ್ಷ ಕಾರ್ಮಿಕರ ಬಿಪಿಎಲ್‌ ಕಾರ್ಡ್‌ ರದ್ದು

    ರಾಜ್ಯಾದ್ಯಂತ 2.46 ಲಕ್ಷ ಕಾರ್ಮಿಕರ ಬಿಪಿಎಲ್‌ ಕಾರ್ಡ್‌ ರದ್ದು

    ಬೆಂಗಳೂರು: ಆದಾಯದ ಮಿತಿ ನೆಪವೊಡ್ಡಿ ಬಡತನದ ರೇಖಿಗಿಂತ ಕೆಳಗಿರುವ ( ಬಿಪಿಎಲ್ ) ಪಡಿತರ ಚೀಟಿಗಳನ್ನು ರದ್ದುಪಡಿಸುವ ಸರ್ಕಾರದ ತೀರ್ಮಾನಕ್ಕೆ ರಾಜ್ಯದೆಲ್ಲೆಡೆ ಸಾರ್ವಜನಿಕರಿಂದ ಭಾರೀ ಆಕ್ರೋಶ ವ್ಯಕ್ತವಾಗುತ್ತಿರುವ ಬೆನ್ನಲ್ಲೇ,. ಸರ್ಕಾರ ಈಗ 2.46 ಲಕ್ಷ ಕಾರ್ಮಿಕರ ಕಾರ್ಡ್‍ಗಳನ್ನು ಅಮಾನತು ಮಾಡಿದೆ.

    Advertisement

    ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಕಲ್ಯಾಣ ಮಂಡಳಿಯಲ್ಲಿ ಬರೋಬ್ಬರಿ 38.42 ಲಕ್ಷ ಕಾರ್ಮಿಕರು ನೋಂದಣಿ ಮಾಡಿದ್ದಾರೆ. ಈ ಪೈಕಿ 2,46,951 ಕಾರ್ಡನ್ನು ನಕಲಿ ಎಂದು ಲಿಸ್ಟ್ ಮಾಡಿದ ಕಾರ್ಮಿಕ ಇಲಾಖೆ ಅಮಾನತು ಮಾಡಲು ಆದೇಶಿಸಿದೆ.

    ಕಾರ್ಮಿಕ ಇಲಾಖೆಯು ಈಗಾಗಲೇ 2,46,951 ಕಾರ್ಡಗಳನ್ನು ನಕಲಿ ಎಂದು ಪಟ್ಟಿ ಮಾಡಿದೆ.ನಕಲಿ ಕಾರ್ಡ್ ಗಳನ್ನು ಮಾಡಿಸಿ ಸರ್ಕಾರದ ಯೋಜನೆಗಳ ಲಾಭವನ್ನು ಪಡೆಯುತ್ತಿದ್ದ ಹಿನ್ನೆಲೆಯಲ್ಲಿ ಕಾರ್ಮಿಕ ಇಲಾಖೆ ನಕಲಿ ಕಾರ್ಡ್‍ಗಳ ಪತ್ತೆಗೆ ಮುಂದಾಗಿತ್ತು. ಈ ಪೈಕಿ ಹಾವೇರಿ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚು 1,69,180 ಕಾರ್ಡ್‍ಗಳನ್ನು ಅಮಾನತು ಮಾಡಿದೆ. ನಕಲಿ ಕಾರ್ಮಿಕರ ಕಾರ್ಡ್‍ಗಳನ್ನು ಅಮಾನತು ಮಾಡಿದ್ದರಿಂದ ಸರ್ಕಾರಕ್ಕೆ ಕೋಟ್ಯಂತರ ರೂ. ಉಳಿತಾಯವಾಗಲಿದೆ.

    ಕೇಂದ್ರ ಸರ್ಕಾರದ ಇ-ಶ್ರಮ ಪೋರ್ಟಲ್ ಸಂಯೋಜಿಸಿ, ಆಧಾರ್ ಕಾರ್ಡ್ ಆಧಾರಿತ ನೋಂದಣಿ ಮಾಡುವ ಮೂಲಕ ಅರ್ಹರಿಗೆ ಮಾತ್ರ ಸೌಲಭ್ಯ ಕಲ್ಪಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.
    ಕಟ್ಟಡ, ಇತರೆ ನಿರ್ಮಾಣ ಕಾರ್ಮಿಕಲ ಕಲ್ಯಾಣ ಮಂಡಳಿಯಲ್ಲಿ ಬರೋಬ್ಬರಿ 38 ಲಕ್ಷದ 42 ಸಾವಿರ ಕಾರ್ಮಿಕರ ಹೆಸರು ನೋಂದಣಿಯಾಗಿದೆ. 38.42 ಲಕ್ಷದ ಪೈಕಿ 2.46 ಸಾವಿರ ಕಾರ್ಡ್ ಅಮಾನತು ಮಾಡಲಾಗುತ್ತಿದೆ. ಹಾವೇರಿಯಲ್ಲಿ ಅತೀ ಹೆಚ್ಚು 1,69,180 ಕಾರ್ಡ್ ಗಳು ರದ್ದಾಗಲಿವೆ.

    ಮದುವೆ, ಮರಣ, ಹೆರಿಗೆ, ಅಪಘಾತ ಸಂದರ್ಭದಲ್ಲಿ ದೊಡ್ಡ ಮೊತ್ತದ ಆರ್ಥಿಕ ನೆರವು ದೊರೆಯುತ್ತದೆ. ಈ ಹಿನ್ನೆಲೆಯಲ್ಲಿ ನಕಲಿ ಜಾಬ್ ಕಾರ್ಡ್‍ಗಳ ಸೃಷ್ಟಿಯಾಗಿವೆ. ಆನ್ ಲೈನ್‍ನಲ್ಲೇ ಅರ್ಜಿ ಸಲ್ಲಿಸಿ ಕಾರ್ಡ್ ಪಡೆಯುವ ಅವಕಾಶ ಇದ್ದು, ಲಕ್ಷಾಂತರ ಜನ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವುದರಿಂದ ಕಾರ್ಮಿಕ ಇಲಾಖೆಗೆ ದಾಖಲೆ ಪರಿಶೀಲನೆ ಕಷ್ಟವಾಗ್ತಿದೆ. ಇದು ನಕಲಿ ಕಾರ್ಡ್ ಪಡೆಯುವವರಿಗೆ ಅನುಕೂಲವಾಗಿದೆ.

    ಮೊಬೈಲ್ ಆಪ್ ಮೂಲಕ ಇ-ಹಾಜರಾತಿ ಸವಲತ್ತು ಕಲ್ಪಿಸಲು ಪ್ಲ್ಯಾನ್, ಮಾಡಲಾಗಿದೆ. ಕಟ್ಟಡ & ಇತರೆ ನಿರ್ಮಾಣ ಕಾಮಗಾರಿ ನಡೆಯುವ ಸ್ಥಳಕ್ಕೆ ಮೊಬೈಲ್ ವ್ಯಾನ್ ತೆರಳಿ, ಖುದ್ದು ಕಾರ್ಮಿಕರ ನೋಂದಣಿ ಮಾಡಲು ಯೋಜನೆ ರೂಪಿಸಲಾಗಿದೆ. ಸ್ಥಳದಲ್ಲೇ ಇ-ಕಾರ್ಡ್ ಕೊಡುವ ವ್ಯವಸ್ಥೆಯನ್ನೂ ಜಾರಿಗೆ ತರಲು ತಯಾರಿ ನಡೆಸಲಾಗುತ್ತಿದೆ.

    ಕಾರ್ಮಿಕ ಇಲಾಖೆ ಡಾ.ಬಿ.ಆರ್.ಅಂಬೇಡ್ಕರ್ ಸೇವಾ ಕೇಂದ್ರ ಸ್ಥಾಪಿಸಿ, ನೈಜ ಕಟ್ಟಡ ಕಾರ್ಮಿಕರಿಗೆ ಸವಲತ್ತು ದೊರಕಿಸಿಕೊಡುವುದರ ಜೊತೆಗೆ ನಕಲಿ ಕಾರ್ಡ್ ಪತ್ತೆಗೂ ಹೆಜ್ಜೆ ಸರ್ಕಾರ ಇದೀಗ ಇಟ್ಟಿದೆ. ವಲಸಿಗರಾಗಿರುವುದರಿಂದ ಕೆಲಸಕ್ಕಾಗಿ ಒಂದು ಊರಿನಿಂದ ಇನ್ನೊಂದು ಊರಿಗೆ ತೆರಳುತ್ತಾರೆ. ಹೋದಲ್ಲೆಲ್ಲ ನೋಂದಣಿ ಮಾಡುವ ಬದಲು ಪೋರ್ಟ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ಬಾರಿ ಪಡೆದ ಕಾರ್ಡ್ ಎಲ್ಲೇ ಕೆಲಸ ಮಾಡಿದರೂ, ಅದರಲ್ಲಿ ಮಾಹಿತಿ ಅಡಕವಾಗುವ ಏರ್ಪಾಡು ಮಾಡಲಾಗುತ್ತದೆ.

    ಏನು ಲಾಭ?
    ಕಾರ್ಡ್ ಹೊಂದಿದವರಿಗೆ ಹಲವು ಸೌಲಭ್ಯ ಸಿಗುತ್ತಿವೆ. ವಯೋ ನಿವೃತ್ತಿ ಪಿಂಚಣಿ, ಅಂಗವಿಕಲ ಪಿಂಚಣಿ, ಟೂಲ್ ಕಿಟ್, ವಸತಿ ಸೌಲಭ್ಯ, ಹೆರಿಗೆ, ಶೈಕ್ಷಣಿಕ ಸಹಾಯಧನ, ವೈದ್ಯಕೀಯ ಸಹಾಯಧನ ಸೌಲಭ್ಯ, ಅಪಘಾತ ಪರಿಹಾರ, ಮದುವೆ ಸಹಾಯಧನ, ಅಂತ್ಯಕ್ರಿಯೆ ವೆಚ್ಚ ಹೀಗೆ 15ಕ್ಕೂ ಹೆಚ್ಚು ಸೌಲಭ್ಯಗಳಿಗೆ ಆರ್ಥಿಕ ನೆರವನ್ನು ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ನೀಡುತ್ತಿದೆ.
    ಕಾರ್ಮಿಕ ಕಾರ್ಡ್ ಎಂದರೆ ಅಸಂಘಟಿತ ವಲಯದ ಕಾರ್ಮಿಕರಿಗೆ ಸರ್ಕಾರ ನೀಡುವ ಗುರುತಿನ ಚೀಟಿ. ಆರೋಗ್ಯ, ವಿಮೆ ಮತ್ತು ಸಾಮಾಜಿಕ ಭದ್ರತಾ ಯೋಜನೆಗಳಂತಹ ವಿವಿಧ ಪ್ರಯೋಜನಗಳು ಮತ್ತು ಯೋಜನೆಗಳನ್ನು ಪಡೆಯಲು ಈ ಕಾರ್ಡ್ ಅವರಿಗೆ ಸಹಾಯ ಮಾಡುತ್ತದೆ. ಗ್ರಾಹಕ ಸೇವಾ ಕೇಂದ್ರದಲ್ಲಿ ಚಿಲ್ಲರೆ ವ್ಯಾಪಾರಿಯಾಗಿ, ಗ್ರಾಹಕರಿಗೆ ಈ ಸೇವೆಯನ್ನು ಒದಗಿಸಲು ಈಗ ಸಾಧ್ಯವಿದೆ.

    ಮಾನದಂಡಗಳು
    ನಿರ್ಮಾಣಕ್ಕೆ ಸಂಬಂಧಿಸಿದ ವೃತ್ತಿಯಲ್ಲಿರಬೇಕು.
    ಪ್ಲಂಬರ್,ಪೇಂಟಿಂಗ್, ರಸ್ತೆ ನಿರ್ಮಾಣ, ಇಟ್ಟಿಗೆ ನಿರ್ಮಾಣ ಸೇರಿ 56 ವೃತ್ತಿ ಮಾಡುವವರು
    ನಿರ್ಮಾಣಕ್ಕೆ ಸಂಬಂಧಪಟ್ಟಂತೆ 90 ದಿನ ಕೆಲಸ ಮಾಡಿರಬೇಕು.

    ಜಿಲ್ಲಾವಾರು ಪಟ್ಟಿ
    ಮೈಸೂರು- 1316
    ಚಾಮರಾಜನಗರ- 743
    ಬಾಗಲಕೋಟೆ- 2039
    ಬೆಂ.ಗ್ರಾಮಾಂತರ-402
    ಬೆಂ.ನಗರ- 2967
    ಬೆಳಗಾವಿ- 1136
    ಬಳ್ಳಾರಿ- 1498
    ಬೀದರ್- 25,759
    ವಿಜಯಪುರ- 2097
    ಚಿಕ್ಕಬಳ್ಳಾಪುರ- 1242
    ಚಿಕ್ಕಮಗಳೂರು- 1173
    ಚಿತ್ರದುರ್ಗ- 859
    ದಕ್ಷಿಣ ಕನ್ನಡ- 1076
    ದಾವಣಗೆರೆ- 3659
    ಧಾರವಾಡ- 3503
    ಗದಗ- 3051
    ಕಲಬುರಗಿ- 2280
    ಹಾಸನ-2266
    ಹಾವೇರಿ- 1,69,180
    ಕೊಡಗು- 175
    ಕೋಲಾರ- 1988
    ಕೊಪ್ಪಳ- 2083
    ಮಂಡ್ಯ- 396
    ರಾಯಚೂರು- 383
    ರಾಮನಗರ- 2748
    ಶಿವಮೊಗ್ಗ- 6900
    ತುಮಕೂರು- 1210
    ಉಡುಪಿ- 210
    ಉತ್ತರ ಕನ್ನಡ-4155
    ಯಾದಗಿರಿ- 457


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading