Tuesday, November 10, 2026
spot_img
More
    spot_img
    HomeStateಹೇರ್‌ಡ್ರೈಯರ್‌ ಬ್ಲಾಸ್ಟ್‌; ಹುತಾತ್ಮ ಯೋಧನ ಪತ್ನಿಯ ಎರಡೂ ಕೈ ಕಟ್!‌

    ಹೇರ್‌ಡ್ರೈಯರ್‌ ಬ್ಲಾಸ್ಟ್‌; ಹುತಾತ್ಮ ಯೋಧನ ಪತ್ನಿಯ ಎರಡೂ ಕೈ ಕಟ್!‌

    ಬಾಲಗಕೋಟೆ: ಆನ್‌ಲೈನ್‌ನಲ್ಲಿ ಆರ್ಡರ್‌ ಮಾಡಿದ್ದ ಹೇರ್​ ಡ್ರೈಯರ್ ಬಳಸುವಾಗ ಸ್ಫೋಟಗೊಂಡು ಹುತಾತ್ಮ ಯೋಧನ ಪತ್ನಿಯ ಎರಡೂ ಹಸ್ತಗಳು ಛಿದ್ರಗೊಂಡಿರುವ ಘಟನೆ ಇಳಕಲ್‌ ನಗರದಲ್ಲಿ ನಡೆದಿದೆ.

    ಹೇರ್‌ಡ್ರೈಯರ್ ಸ್ಫೋಟಗೊಂಡ ತೀವ್ರತೆಗೆ ಬಸಮ್ಮ ಯರನಾಳ ಎಂಬುವವರ ಎರಡು ಕೈಗಳ ಮುಂಗೈ ಛಿದ್ರ ಛಿದ್ರವಾಗಿದ್ದು, ಬೆರಳುಗಳೆಲ್ಲ ಗುರುತೇ ಸಿಗದಂತೆ ಚೆಲ್ಲಾಪಿಲ್ಲಿಯಾಗಿವೆ. ಬಸಮ್ಮ ಯರನಾಳ ಅವರು ಹುತಾತ್ಮ ಯೋಧನ ಪತ್ನಿಯಾಗಿದ್ದು, ಬಸಮ್ಮ ಅವರ ಪತಿ ಪಾಪಣ್ಣ ಮಾಜಿ ಯೋಧರಾಗಿದ್ದಾರೆ. 2028ರಲ್ಲಿ ಜಮ್ಮು ಕಾಶ್ಮೀರದಲ್ಲಿ ಸಂಭವಿಸಿದ ಶಾರ್ಟ್ ಸರ್ಕ್ಯೂಟ್‌ನಿಂದ ಪಾಪಣ್ಣ ಮೃತಪಟ್ಟಿದ್ದರು. ಗಂಡನನ್ನು ಕಳೆದುಕೊಂಡಿದ್ದ ಬಸಮ್ಮ ಅವರು ಬಾಗಲಕೋಟೆಯ ಇಳಕಲ್ ನಗರದಲ್ಲಿ ವಾಸಿಸುತ್ತಿದ್ದರು. ಇದೀಗ ಈ ಘಟನೆಯಿಂದ ಅವರು ತಮ್ಮ ಕೈಗಳನ್ನು ಕಳೆದುಕೊಂಡಿದ್ದಾರೆ.

    ಸ್ನೇಹಿತೆಗೆ ಬಂದಿದ್ದ ಪಾರ್ಸಲ್‌ ತೆರೆದಿದ್ದ ಬಸಮ್ಮ

    ಆನ್‌ಲೈನ್‌ನಲ್ಲಿ ಬಂದಿದ್ದ ಈ ಹೇರ್‌ಡ್ರೈಯರ್ ಬಸಮ್ಮ ಅವರ ಸ್ನೇಹಿತೆ ಶಶಿಕಲಾ ಎಂಬುವವರಿಗೆ ಬಂದಿತ್ತು. ಶಶಿಕಲಾ ಪತಿ ಕೂಡ ಮೃತ ಯೋಧರಾಗಿದ್ದಾರೆ. ಪಾರ್ಸಲ್‌ನಲ್ಲಿ ಶಶಿಕಲಾ ಹೆಸರು ಮೊಬೈಲ್ ನಂಬರ್ ಇದ್ದ ಕಾರಣ ಕೊರಿಯರ್‌ನವರು ಶಶಿಕಲಾ ಅವರಿಗೆ ಕರೆ ಮಾಡಿದ್ದರು. ಆದರೆ ಶಶಿಕಲಾ ಬೇರೆ ಊರಲ್ಲಿ ಇದ್ದ ಕಾರಣ ಬಸಮ್ಮ ಅವರಿಗೆ ಕೊರಿಯರ್ ಪಡೆದು ಓಪನ್ ಮಾಡಲು ಹೇಳಿದ್ದರು. ಇನ್ನು ಪಕ್ಕದ ಮನೆಯವರು ಆನ್‌ ಮಾಡಿ ತೋರಿಸಿ ಎಂದಾಗ ಬಸಮ್ಮ ಹೇರ್‌ ಡ್ರೈಯರ್‌ ಅನ್ನು ಬಳಸಲು ಮುಂದಾಗಿದ್ದಾರೆ. ಸ್ವಿಚ್‌ ಆನ್‌ ಮಾಡುತ್ತಿದ್ದಂತೆ ದೊಡ್ಡ ಶಬ್ದ ಕೇಳಿಬಂದಿದೆ. ಹೇರ್‌ಡ್ರೈಯರ್‌ ಸಿಡಿದಿದೆ. ಕೂಡಲೇ ಬಸಮ್ಮ ಅವರನ್ನು ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಸದ್ಯ ಚಿಕಿತ್ಸೆ ಜರುಗುತ್ತಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search