Monday, November 2, 2026
spot_img
More
    spot_img
    HomeLatest newsಹೊಸೂರು ಏರ್‌ಪೋರ್ಟ್ ಯೋಜನೆ ಕರ್ನಾಟಕಕ್ಕಿಂತ ತಮಿಳುನಾಡು ಫಾಸ್ಟ್‌!

    ಹೊಸೂರು ಏರ್‌ಪೋರ್ಟ್ ಯೋಜನೆ ಕರ್ನಾಟಕಕ್ಕಿಂತ ತಮಿಳುನಾಡು ಫಾಸ್ಟ್‌!

    ಬೆಂಗಳೂರಲ್ಲಿ ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿರ್ಮಾಣ ಮತ್ತು ತಮಿಳುನಾಡಿನ ಹೊಸೂರು ವಿಮಾನ ನಿಲ್ದಾಣ ಯೋಜನೆಯ ಚರ್ಚೆಗಳು ಒಟ್ಟಿಗೆ ಆರಂಭಗೊಂಡವು. ಆದರೆ ಕರ್ನಾಟಕಕ್ಕಿಂತ ತಮಿಳುನಾಡು ಈ ವಿಚಾರದಲ್ಲಿ ಸೂಪರ್ ಫಾಸ್ಟ್ ಆಗಿದೆ. ವಿಮಾನ ನಿಲ್ದಾಣದ ಸೈಟ್ ಕ್ಲಿಯರೆನ್ಸ್‌ ಪಡೆಯಲು ಅದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದೆ.

    ತಮಿಳುನಾಡು ಸರ್ಕಾರ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಹೊಸೂರು ವಿಮಾನ ನಿಲ್ದಾಣ ಯೋಜನೆಗೆ ಪ್ರಾಥಮಿಕವಾಗಿ ಸ್ಥಳ ಅಂತಿಮಗೊಳಿಸುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿದೆ. 30 ಲಕ್ಷ ಪ್ರಯಾಣಿಕರನ್ನು ನಿರ್ವಹಣೆ ಮಾಡುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಶೂಲಗಿರಿ ತಾಲೂಕಿನಲ್ಲಿ ನಿರ್ಮಾಣ ಮಾಡುವುದು ಪ್ರಸ್ತಾವನೆಯಾಗಿದೆ.

    ಹೊಸೂರು ವಿಮಾನ ನಿಲ್ದಾಣದ ವಿಚಾರದಲ್ಲಿ ತಮಿಳುನಾಡು ಕೇಂದ್ರ ರಕ್ಷಣಾ ಸಚಿವಾಲಯಕ್ಕೆ ಮತ್ತೊಂದು ಪತ್ರವನ್ನು ಬರೆದಿದೆ. ಹೊಸೂರು ವಿಮಾನ ನಿಲ್ದಾಣದ ವಿಚಾರದಲ್ಲಿ ಇರುವ ವಾಯುಪ್ರದೇಶದ ನಿರ್ಬಂಧಗಳನ್ನು ಸಡಿಲಗೊಳಿಸಬೇಕು ಎಂದು ಮನವಿ ಮಾಡಿದೆ. ಇದೇ ವಿಚಾರದಲ್ಲಿ ಜೂನ್‌ನಲ್ಲಿ ಮೊದಲ ಬಾರಿಗೆ ರಕ್ಷಣಾ ಸಚಿವಾಲಯಕ್ಕೆ ಮನವಿ ಮಾಡಲಾಗಿತ್ತು. ಈ ಹಿಂದೆ ಮನವಿ ಸಲ್ಲಿಕೆ ಮಾಡಿದ್ದಾಗ ಕೇಂದ್ರ ರಕ್ಷಣಾ ಸಚಿವಾಲಯ ಈ ವಿಚಾರದಲ್ಲಿ ಹಲವಾರು ಒಪ್ಪಂದಗಳಿದ್ದು, ಅದನ್ನು ಮುರಿಯಲು ಸಾಧ್ಯವಿಲ್ಲ. ಹೊಸೂರು ಏರೋಸ್ಪೇಸ್‌ ವಿಭಾಗ ಹೆಚ್‌ಎಎಲ್ ನಿಯಂತ್ರಣದಲ್ಲಿದೆ ಎಂದು ಹೇಳಿತ್ತು ಎಂಬ ಮಾಹಿತಿ ಇದೆ.

    ಬೆಂಗಳೂರು ವಿಮಾನ ನಿಲ್ದಾಣದ ವಾಯುಪ್ರದೇಶ ಮತ್ತು ತನೇಜಾ ಏರೋಸ್ಪೇಸ್ ಮತ್ತು ಏವಿಯೇಷನ್ ಲಿಮಿಟೆಡ್ (ಟಿಎಎಎಲ್) ಈಗಾಗಲೇ ಎಚ್‌ಎಎಲ್ ವಾಯುಪ್ರದೇಶದೊಂದಿಗೆ ಒಡನಾಟ ಹೊಂದಿದೆ. ಆದರೆ ತಮಿಳುನಾಡು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಎಲ್ಲಾ ತಾಂತ್ರಿಕ ಮಾಹಿತಿಯನ್ನು ಉಲ್ಲೇಖಿಸಿ ಈ ಮಾದರಿಯಲ್ಲೇ ಹೊಸೂರು ವಿಮಾನ ನಿಲ್ದಾಣಕ್ಕೂ ಅನುಮತಿ ಸಾಧ್ಯವೆಂದು ಉಲ್ಲೇಖಿಸಿ ಪ್ರಸ್ತಾವನೆ ಸಲ್ಲಿಸಿದ್ದಾರೆ.

    ಸುಮಾರು 6 ತಿಂಗಳು ಬೇಕಿದೆ: ಮಾಹಿತಿಗಳ ಪ್ರಕಾರ ಯಾವುದೇ ವಿಮಾನ ನಿಲ್ದಾಣ ಯೋಜನೆಗೆ ಸ್ಥಳ ನಿಗದಿ ಒಪ್ಪಿಗೆ ಕೊಡಲು ಕೇಂದ್ರ ಸರ್ಕಾರಕ್ಕೆ ಸುಮಾರು 6 ತಿಂಗಳು ಬೇಕಿದೆ. ಆದ್ದರಿಂದ ತಕ್ಷಣಕ್ಕೆ ತಮಿಳುನಾಡು ಸರ್ಕಾರಕ್ಕೆ ಒಪ್ಪಿಗೆಯಂತೂ ಸಿಗುವುದಿಲ್ಲ. ಕೇಂದ್ರ ಸರ್ಕಾರದಿಂದ ಸ್ಥಳ ನಿಗದಿಗೆ ಅಂತಿಮ ಒಪ್ಪಿಗೆ ಸಿಕ್ಕಿದರೆ ರಾಜ್ಯ ಸರ್ಕಾರ ಪ್ರಾಥಮಿಕ ಅನುಮೋದನೆಯನ್ನು ಪಡೆಯಬೇಕಿದೆ.

    ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣ ಮಾಡುವಾಗ ಬಿಐಎಎಲ್ ಮತ್ತು ಕೇಂದ್ರ ಸರ್ಕಾರ ಮಾಡಿಕೊಂಡ ಒಪ್ಪಂದದ ಅನ್ವಯ ವಿಮಾನ ನಿಲ್ದಾಣದ 150 ಕಿ.ಮೀ. ವ್ಯಾಪ್ತಿಯೊಳಗೆ ಹೊಸ ವಿಮಾನ ನಿಲ್ದಾಣಕ್ಕೆ ಅವಕಾಶವಿಲ್ಲ. ಈ ಒಪ್ಪಂದ ಇನ್ನು 8 ವರ್ಷಗಳ ಕಾಲ ಇದ್ದು, ಹೊಸೂರು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಕಾರ್ಯಾಚರಣೆ ಆರಂಭಿಸಲು ತಮಿಳುನಾಡು ಸರ್ಕಾರ ಇನ್ನೂ 8 ವರ್ಷ ಕಾಯಬೇಕಾಗಬಹುದು ಎಂದು ಅಂದಾಜಿಸಲಾಗಿದೆ.

    ಹೊಸೂರು ಈಗಾಗಲೇ ಎಲೆಕ್ಟ್ರಾನಿಕ್ಸ್ ಮತ್ತು ವಿವಿಧ ಕೈಗಾರಿಕೆಗಳ ಹಬ್ ಆಗಿ ಪರಿವರ್ತನೆಗೊಂಡಿದೆ. ಸಾವಿರಾರು ಕೋಟಿ ರೂಪಾಯಿಗಳ ಬಂಡವಾಳವನ್ನು ಆಕರ್ಷಿಸುತ್ತಿದೆ. ಹೊಸ ಪ್ರಯಾಣಿಕರ ವಿಮಾನ ನಿಲ್ದಾಣ ಮತ್ತು ಕಾರ್ಗೋ ಹಬ್ ಮಾಡುವ ಮೂಲಕ ಬೆಂಗಳೂರು ವಿಮಾನ ನಿಲ್ದಾಣದ ಮೇಲಿನ ಅವಲಂಬನೆ ಕಡಿಮೆ ಮಾಡುವುದು ತಮಿಳುನಾಡು ರಾಜ್ಯ ಸರ್ಕಾರದ ಯೋಜನೆಯಾಗಿದೆ.

    ವಿಮಾನ ನಿಲ್ದಾಣದಿಂದ ಹೊಸೂರು ಭಾಗಕ್ಕೆ ಇನ್ನಷ್ಟು ಬಂಡವಾಳ ಹರಿದುಬರಲಿದೆ. ರಾಜ್ಯದ ಅಭಿವೃದ್ಧಿಗೆ ಸಹ ಸಹಾಯಕವಾಗಲಿದೆ ಎಂಬುದು ಲೆಕ್ಕಾಚಾರವಾಗಿದೆ. ಯೋಜನೆಯ ಪ್ರಸ್ತಾವನೆಯಂತೆ ಹೊಸೂರು ವಿಮಾನ ನಿಲ್ದಾಣ ಒಂದು ಟರ್ಮಿನಲ್, ಎರಡು ರನ್‌ ವೇ ಹೊಂದಿರಲಿದೆ. ಭವಿಷ್ಯದಲ್ಲಿ ವಿಮಾನ ನಿಲ್ದಾಣ ವಿಸ್ತರಣೆ ಮಾಡುವಂತೆ ಅದನ್ನು ವಿನ್ಯಾಸಗೊಳಿಸಲಾಗುತ್ತಿದೆ. ವಿಮಾನ ನಿಲ್ದಾಣವನ್ನು 2,300 ಎಕರೆಯಲ್ಲಿ ನಿರ್ಮಾಣ ಮಾಡುವುದು ರಾಜ್ಯ ಸರ್ಕಾರದ ಯೋಜನೆಯಾಗಿದ್ದು, ಸರ್ಕಾರ ಇಲ್ಲಿ 650 ಎಕರೆ ಪ್ರದೇಶವನ್ನು ಹೊಂದಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search