Wednesday, November 4, 2026
spot_img
More
    spot_img
    HomeLatest newsಸೈಬರ್ ವಂಚನೆ ತಡೆಗೆ TRAI ಮಹತ್ವದ ಕ್ರಮ: ಹಣಕಾಸು ಸಂಸ್ಥೆಗಳಿಗೆ '1600' ಸರಣಿ ನಂಬರ್‌ ಕಡ್ಡಾಯ

    ಸೈಬರ್ ವಂಚನೆ ತಡೆಗೆ TRAI ಮಹತ್ವದ ಕ್ರಮ: ಹಣಕಾಸು ಸಂಸ್ಥೆಗಳಿಗೆ ‘1600’ ಸರಣಿ ನಂಬರ್‌ ಕಡ್ಡಾಯ

    ನವದೆಹಲಿ: ಸೈಬರ್ ವಂಚನೆ (Cyber Crime) ಪ್ರಕರಣಗಳು ಭಯಾನಕವಾಗಿ ಏರುತ್ತಿರುವ ಬೆನ್ನಲ್ಲೇ, ವಂಚಕರನ್ನು ನಿಯಂತ್ರಿಸಲು ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ (TRAI) ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

    ಇನ್ಮುಂದೆ ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ (BFSI) ವಲಯದ ಸಂಸ್ಥೆಗಳು ಗ್ರಾಹಕರಿಗೆ ಕರೆ ಮಾಡಲು ಒಂದು ನಿರ್ದಿಷ್ಟ ‘ಸೇವಾ ನಂಬರ್‌’ನನ್ನೇ ಬಳಸಬೇಕು ಎಂದು ಕಡ್ಡಾಯಗೊಳಿಸಿದೆ. ಧ್ವನಿ ಕರೆಗಳ ಮೂಲಕ ನಡೆಯುವ ಸ್ಪ್ಯಾಮ್ ಮತ್ತು ಆರ್ಥಿಕ ವಂಚನೆಗಳನ್ನು ತಡೆಯುವ ಉದ್ದೇಶದಿಂದ TRAI ಈ ಮಹತ್ವದ ನಿರ್ದೇಶನ ನೀಡಿದೆ.

    RBI, SEBI, ಮತ್ತು PFRDA ನಿಯಂತ್ರಣದಲ್ಲಿರುವ BFSI ಸಂಸ್ಥೆಗಳು ಹಾಗೂ ಸರ್ಕಾರಿ ಸಂಸ್ಥೆಗಳು ಕಡ್ಡಾಯವಾಗಿ ‘1600’ ಸಂಖ್ಯೆಯ ಸರಣಿಯನ್ನು ಅಳವಡಿಸಿಕೊಳ್ಳಲು ಅಂತಿಮ ಗಡುವುಗಳನ್ನು ನಿಗದಿಪಡಿಸಲಾಗಿದೆ.ಈ ಹೊಸ ನಿಯಮ ಮಾರ್ಚ್ 2026 ರೊಳಗೆ ಹಂತ ಹಂತವಾಗಿ ಜಾರಿಯಾಗಲಿದೆ.

    ದೂರಸಂಪರ್ಕ ಇಲಾಖೆಯಿಂದ (DoT) ಹಂಚಿಕೆಯಾದ ಈ ‘1600’ ಸರಣಿಯಿಂದ ಕರೆ ಬಂದರೆ, ಅದು ವಿಶ್ವಾಸಾರ್ಹ ಹಣಕಾಸು ಸಂಸ್ಥೆಯಿಂದ ಬಂದ ಕರೆ ಎಂದು ಸಾರ್ವಜನಿಕರು ಸುಲಭವಾಗಿ ಗುರುತಿಸಬಹುದು. ಇದರಿಂದ ವಂಚಕರು ನಿಮ್ಮನ್ನು ಸುಲಭವಾಗಿ ಮೋಸಗೊಳಿಸಲು ಸಾಧ್ಯವಾಗುವುದಿಲ್ಲ.

    1600′ ಸರಣಿಯೇ ಏಕೆ?

    ಇಲ್ಲಿಯವರೆಗಿನ ವ್ಯವಸ್ಥೆಯಲ್ಲಿ, ಬ್ಯಾಂಕ್‌ನಿಂದ ಬಂದ ಕರೆ ಯಾವುದು ಎಂದು ಗ್ರಾಹಕರು ಗುರುತಿಸಲು ಸಾಧ್ಯವಾಗುತ್ತಿರಲಿಲ್ಲ. ಸೈಬರ್ ಕಳ್ಳರು ಈ ಲೋಪದ ಲಾಭ ಪಡೆದು, ಬೇರೆ ಬೇರೆ ನಂಬರ್‌ಗಳಿಂದ ಕರೆ ಮಾಡಿ ನಾವು ಬ್ಯಾಂಕ್ ಸಿಬ್ಬಂದಿ ಎಂದು ನಂಬಿಸಿ ವೈಯಕ್ತಿಕ ವಿವರ ಪಡೆದು ಹಣ ದೋಚುತ್ತಿದ್ದರು.

    ಹೊಸ ‘1600’ ಸರಣಿಯ ಸಂಖ್ಯೆಗಳು ಹೇಗಿರುತ್ತವೆ?

    ಸೈಬರ್ ವಂಚನೆ ತಡೆಯುವ ಸಲುವಾಗಿ, ಹಣಕಾಸು ಮತ್ತು ಸರ್ಕಾರಿ ಸಂಸ್ಥೆಗಳಿಗೆ ಹಂಚಿಕೆಯಾದ ‘1600’ ಸರಣಿಯ ಸಂಖ್ಯೆಗಳ ಸ್ವರೂಪವು ಈ ರೀತಿ ಇರಲಿದೆ

    ಸಂಸ್ಥೆಗಳಿಂದ ಬರುವ ಕರೆಗಳು +91-1600 ಸಂಖ್ಯೆಯೊಂದಿಗೆ ಆರಂಭವಾಗುತ್ತವೆ.

    ಇಲ್ಲಿರುವ +91 ಕೋಡ್ ಭಾರತವನ್ನು ಪ್ರತಿನಿಧಿಸುತ್ತದೆ ಮತ್ತು ಈ ಸಂಖ್ಯೆ ಕರೆಗಳ ಪ್ರಾರಂಭದಲ್ಲಿ ಇರುತ್ತದೆ.

    ಉದಾಹರಣೆ: ಉದಾಹರಣೆಗೆ, ಎಸ್‌ಬಿಐ (SBI) ನಂತಹ ಬ್ಯಾಂಕ್‌ಗಳ ಅಧಿಕೃತ ಕರೆಗಳು +91-1600-01-8000 ಅಥವಾ +91-1600-01-8002 ಮುಂತಾದ ಸರಣಿಯಿಂದ ಆರಂಭಗೊಳ್ಳುವ ಸಾಧ್ಯತೆ ಇರುತ್ತದೆ.

    ಈ ವಂಚನೆ ತಂತ್ರವನ್ನು ಗಮನದಲ್ಲಿಟ್ಟುಕೊಂಡು ಈಗ ‘1600’ ಸರಣಿಯ ನಂಬರ್‌ನಿಂದಲೇ ಕರೆ ಮಾಡಲು ಹಣಕಾಸು ಸಂಸ್ಥೆಗಳಿಗೆ ಸೂಚಿಸಲಾಗಿದೆ. ಇದರಿಂದ ನಾಗರಿಕರು ವಿಶ್ವಾಸಾರ್ಹ ಹಣಕಾಸು ಕರೆಗಳನ್ನು ಸುಲಭವಾಗಿ ಗುರುತಿಸಲು ಸಾಧ್ಯವಾಗುತ್ತದೆ.ಈಗಾಗಲೇ ಸುಮಾರು 485 ಹಣಕಾಸು ಸಂಸ್ಥೆಗಳು ಈ 1600 ಸರಣಿಯನ್ನು ಬಳಸಲು ಪ್ರಾರಂಭಿಸಿದ್ದು, 2,800 ಕ್ಕೂ ಹೆಚ್ಚು ಸಂಖ್ಯೆಗಳನ್ನು ಒಳಗೊಂಡಿವೆ.

    ಸಂಸ್ಥೆಗಳು ಈ ಹೊಸ ನಿಯಮವನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಲು ಟ್ರಾಯ್ ನೀಡಿರುವ ಅಂತಿಮ ದಿನಾಂಕಗಳು ಇಲ್ಲಿವೆ:

    ವಾಣಿಜ್ಯ ಬ್ಯಾಂಕುಗಳು ಜನವರಿ 1, 2026

    ದೊಡ್ಡ ಎನ್‌ಬಿಎಫ್‌ಸಿಗಳು, ಪಾವತಿ ಮತ್ತು ಸಣ್ಣ ಹಣಕಾಸು ಬ್ಯಾಂಕುಗಳುಫೆಬ್ರವರಿ 1, 2026

    ಮ್ಯೂಚುವಲ್ ಫಂಡ್‌ಗಳು (AMC) & ಅರ್ಹ ಸ್ಟಾಕ್‌ಬ್ರೋಕರ್‌ಗಳು ಫೆಬ್ರವರಿ 15, 2026

    ಇತರ ಚಿಕ್ಕ ಬ್ಯಾಂಕ್‌ಗಳು & NBFC ಗಳುಮಾರ್ಚ್ 1, 2026


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search