ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ ಆವೃತ್ತಿ ಈ ವರ್ಷವೇ ಸದ್ದು ಮಾಡಲಾರಂಭಿಸಿದೆ. ಹೌದು, ಮುಂಬರುವ ಟೂರ್ನಿಯ ಸಲುವಾಗಿ ಇದೇ ಡಿಸೆಂಬರ್‌ನಲ್ಲಿ ಮಿನಿ ಹರಾಜು ಪ್ರಕ್ರಿಯೆ ನಡೆಯಲಿದ್ದು, ಇದರ ಸಲುವಾಗಿ ಬಿಸಿಸಿಐ ನಿಯಮದಂತೆ ಇತ್ತೀಚೆಗೆ ಆಟಗಾರರ ರಿಟೆನ್ಷನ್ ಪ್ರಕ್ರಿಯೆ ಸಹ ನಡೆದಿದೆ.
ಈ ಪ್ರಕ್ರಿಯೆಯಲ್ಲಿ ವಿವಿಧ ಫ್ರಾಂಚೈಸಿಗಳು ತಮಗೆ ಬೇಕಾದ ಆಟಗಾರರನ್ನು ಉಳಿಸಿಕೊಂಡು ಬೇಡವಾದ ಆಟಗಾರರನ್ನು ಕೈಬಿಟ್ಟಿದೆ. ಅದೇ ರೀತಿ ಕೊಲ್ಕತ್ತಾ ನೈಟ್ ರೈಡರ್ಸ್ ತನ್ನ 24 ಕೋಟಿ ರೂಪಾಯಿಯ ಆಟಗಾರ ವೆಂಕಟೇಶ್ ಐಯ್ಯರ್‌ನನ್ನೂ ಸಹ ಹೊರಹಾಕಿದೆ. ಕಳೆದ ಆವೃತ್ತಿಯಲ್ಲಿ ನೀಡಿದ ಕಳಪೆ ಪ್ರದರ್ಶನವೇ ಇದಕ್ಕೆ ಕಾರಣ ಎಂಬುದು ಎಲ್ಲರಿಗೂ ತಿಳಿದಿರುವ ವಿಷಯವೇ.
ಇನ್ನು ತಂಡದಿಂದ ಹೊರಬಿದ್ದಿರುವ ವೆಂಕಟೇಶ್ ಐಯ್ಯರ್ ಕ್ರಿಕೆಟ್ ವೆಬ್‌ತಾಣ ಕ್ರಿಕ್‌ಟ್ರ್ಯಾಕರ್ ನಡೆಸಿದ ಸಂದರ್ಶನದಲ್ಲಿ ಭಾಗಿಯಾಗಿ ತಮ್ಮ ಪ್ರಕಾರ ಟಿ20 ಕ್ರಿಕೆಟ್ ಸಾರ್ವಕಾಲಿಕ ಅತ್ಯುತ್ತಮ ತಂಡವನ್ನು ಪ್ರಕಟಿಸಿದ್ದಾರೆ. ಆದರೆ ವೆಂಕಟೇಶ್ ಐಯ್ಯರ್ ಆರಿಸಿದ ಆಟಗಾರರ ಪಟ್ಟಿಯನ್ನು ಕಂಡು ನೆಟ್ಟಿಗರು ಎದ್ದುಬಿದ್ದು ನಕ್ಕು ಇದ್ಯಾವ ಕ್ರಿಕೆಟ್ ಜ್ಞಾನ ಗುರು, ನೀನೊಬ್ಬ ಅಂತಾರಾಷ್ಟ್ರೀಯ ಕ್ರಿಕೆಟಿಗ ಎಂದರೆ ನಂಬಲಾಗುತ್ತಿಲ್ಲ ಎಂದು ಕಾಲೆಳೆದಿದ್ದಾರೆ.
ವೆಂಕಟೇಶ್ ಐಯ್ಯರ್ ಪ್ರಕಟಿಸಿದ ಆಲ್‌ಟೈಮ್ ಟಿ20 ತಂಡ: ವೀರೇಂದ್ರ ಸೆಹ್ವಾಗ್, ಅಭಿಷೇಕ್ ಶರ್ಮಾ, ಬೆನ್ ಸ್ಟೋಕ್ಸ್, ಎಬಿ ಡಿವಿಲಿಯರ್ಸ್, ಸುರೇಶ್ ರೈನಾ, ಹಾರ್ದಿಕ್ ಪಾಂಡ್ಯ, ಎಂಎಸ್ ಧೋನಿ (ನಾಯಕ ಮತ್ತು ವಿಕೆಟ್ ಕೀಪರ್), ಲಸಿತ್ ಮಲಿಂಗಾ, ರಶೀದ್ ಖಾನ್, ಸುನೀಲ್ ನರೈನ್, ಜಸ್‌ಪ್ರೀತ್ ಬುಮ್ರಾ, ಮತ್ತು ಮ್ಯಾಥ್ಯೂ ಹೇಡೆನ್ (12ನೇ ಆಟಗಾರ, ಇಂಪ್ಯಾಕ್ಟ್ ಪ್ಲೇಯರ್).
ಹೀಗೆ ವೆಂಕಟೇಶ್ ಐಯ್ಯರ್ ಪ್ರಕಟಿಸಿದ ತಂಡದಲ್ಲಿ ವಿರೇಂದ್ರ ಸೆಹ್ವಾಗ್, ಬೆನ್ ಸ್ಟೋಕ್ಸ್ ಹಾಗೂ ಅಭಿಷೇಕ್ ಶರ್ಮಾರನ್ನು ಸೇರಿಸಿರುವುದನ್ನು ಕಂಡು ನೆಟ್ಟಿಗರು ನಕ್ಕಿದ್ದಾರೆ. ಇವರು ಯಾರೂ ಟಿ20 ಸ್ಪೆಷಲಿಸ್ಟ್‌ಗಳಲ್ಲ, ಹಾಗೆಯೇ ತಂಡದಲ್ಲಿ ಕ್ರಿಸ್ ಗೇಲ್, ಡೇವಿಡ್ ವಾರ್ನರ್, ಜೋಸ್ ಬಟ್ಲರ್ ಹಾಗೂ ಶೇನ್ ವಾಟ್ಸನ್ ಇಲ್ಲದಿರುವುದನ್ನು ಪ್ರಶ್ನಿಸಿದ್ದಾರೆ. ಅಲ್ಲದೇ ವಿರಾಟ್ ಕೊಹ್ಲಿಯನ್ನೂ ಸಹ ತಂಡದಿಂದ ಕೈಬಿಟ್ಟಿರುವುದಕ್ಕೆ ದೊಡ್ಡ ಮಟ್ಟದಲ್ಲಿ ಟೀಕೆಗಳು ಎದುರಾಗಿವೆ. ಹೀಗೆ ಯಾವ ಮಾದರಿಯಲ್ಲಿ ಯಾವ ಆಟಗಾರ ಚೆನ್ನಾಗಿ ಆಡಬಲ್ಲ ಎಂಬ ಕನಿಷ್ಟ ಕ್ರಿಕೆಟ್ ಜ್ಞಾನವಿಲ್ಲದೇ ವೆಂಕಟೇಶ್ ಐಯ್ಯರ್ ನಗೆಪಾಟಲಿಗೀಡಾಗಿದ್ದಾರೆ.
ಧರ್ಮಸ್ಥಳ: ಮತ್ತೆ ಯಾಮಾರಬೇಡಿ ಚಾರ್ಜ್‌ಶೀಟ್ ಅಲ್ಲ ಕೇವಲ ದೂರು ವರದಿ ಸಲ್ಲಿಸಲಿದೆ ಎಸ್‌ಐಟಿ; ತನಿಖೆ ಇನ್ನೂ ಬಾಕಿ ಇದೆ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


