Saturday, September 19, 2026
spot_img
More
    spot_img
    HomeTop Storyಬಹುನಿರೀಕ್ಷಿತ ಯುಐ ರಿಲೀಸ್;‌ ಹೇಗಿದೆ ಸಿನಿಮಾ? ಫಸ್ಟ್‌ ಶೋ ಚಿತ್ರ ನೋಡಿದವರ ರಿವ್ಯೂ ಇಲ್ಲಿದೆ

    ಬಹುನಿರೀಕ್ಷಿತ ಯುಐ ರಿಲೀಸ್;‌ ಹೇಗಿದೆ ಸಿನಿಮಾ? ಫಸ್ಟ್‌ ಶೋ ಚಿತ್ರ ನೋಡಿದವರ ರಿವ್ಯೂ ಇಲ್ಲಿದೆ

    ರಿಯಲ್‌ ಸ್ಟಾರ್‌ ಉಪೇಂದ್ರ ನಿರ್ದೇಶನದ ಬಹು ನಿರೀಕ್ಷಿತ ಚಿತ್ರ ಯುಐ ಇಂದು (ಡಿಸೆಂಬರ್‌ 20) ಬಿಡುಗಡೆಯಾಗಿದ್ದು, ಮುಂಜಾನೆಯಿಂದಲೇ ಪ್ರದರ್ಶನಗಳು ಆರಂಭಗೊಂಡಿವೆ. ಹಲವೆಡೆ ಬೆಳಗ್ಗೆ 7 ಗಂಟೆಗೆ ಪ್ರದರ್ಶನ ನಡೆದಿದೆ.

    Advertisement

    ಇನ್ನು ಉಪ್ಪಿ 2 ಬಳಿಕ ಉಪೇಂದ್ರ ಮತ್ತೊಮ್ಮೆ ನಿರ್ದೇಶಕನ ಕ್ಯಾಪ್‌ ಧರಿಸಿದ್ದು ಈ ಚಿತ್ರದ ಮೇಲೆ ಬೆಟ್ಟದಷ್ಟೇ ನಿರೀಕ್ಷೆ ಇತ್ತು. ಹೀಗೆ ಉಪ್ಪಿ ಸಿನಿಮಾ ಗುರೂ ಎಂದು ಚಿತ್ರಮಂದಿರಕ್ಕೆ ಹೋದ ಸಿನಿ ರಸಿಕರಿಗೆ ಚಿತ್ರ ಇಷ್ಟವಾಯ್ತಾ? ಚಿತ್ರ ಯಾವ ವಿಷಯದ ಕುರಿತು ಇದೆ? ಚಿತ್ರದ ಪ್ಲಸ್‌ ಹಾಗೂ ಮೈನಸ್‌ ಪಾಯಿಂಟ್‌ಗಳೇನು ಎಂಬುದನ್ನು ಮೊದಲ ಪ್ರದರ್ಶನದಲ್ಲಿ ಸಿನಿಮಾ ವೀಕ್ಷಿಸಿದ ಸಿನಿ ರಸಿಕರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

    ತೆಲುಗು ಪ್ರೇಕ್ಷಕನ ರಿವ್ಯೂ
    ಅವಿ ಗೋನುಗುಂಟ್ಲ ಎಂಬ ತೆಲುಗು ಸಿನಿ ರಸಿಕರ ಯುಐ ಸಿನಿಮಾವನ್ನು ಮುಂಜಾನೆ ಪ್ರದರ್ಶನದಲ್ಲೇ ವೀಕ್ಷಿಸಿದ್ದು “ಉಪೇಂದ್ರ ನಟನೆ ಚೆನ್ನಾಗಿದೆ ಹಾಗೂ ನಿರ್ದೇಶನವೂ ಚೆನ್ನಾಗಿದೆ. ರೀಷ್ಮಾ ನಾಣಯ್ಯ ಸಂಪೂರ್ಣವಾಗಿ ವೇಸ್ಟ್.‌ ಬ್ಯಾಕ್‌ಗ್ರೌಂಡ್‌ ಮ್ಯೂಸಿಕ್‌ ಚೆನ್ನಾಗಿದೆ. ಚಿತ್ರದ ಕೆಲ ವಿಷ್ಯುಯಲ್ಸ್‌ ಸಖತ್ತಾಗಿವೆ. ಚಿತ್ರ ಆರಂಭವಾದ 15 ನಿಮಿಷಗಳ ಬಳಿಕ ಉಪೇಂದ್ರ ಅವರ ಕ್ರೇಜಿ ಸ್ಟಫ್‌ ಮಿಸ್‌ ಆಗಿದೆ. ಕಥೆ ಹಿಂದಿನ ಐಡಿಯಾಲಜಿ ಚೆನ್ನಾಗಿದೆ. ಚಿತ್ರದ ಮೇಲೆ ತುಂಬಾ ನಿರೀಕ್ಷೆ ಇದ್ದ ಕಾರಣ ಸಿನಿಮಾ ದೊಡ್ಡ ಮಟ್ಟದಲ್ಲಿಲ್ಲ ಎನಿಸುತ್ತಿದೆ. ಒಂದೊಮ್ಮೆ ನೋಡಬಹುದು” ಎಂದು ಬರೆದುಕೊಂಡು 5ಕ್ಕೆ 3 ರೇಟಿಂಗ್‌ ಕೊಟ್ಟಿದ್ದಾರೆ.

    ನಾವು ರಿವ್ಯೂ ಮಾಡೋಕಾಗಲ್ಲ, ಸಿನಿಮಾನೇ ನಮ್ಮನ್ನು ರಿವ್ಯೂ ಮಾಡುತ್ತೆ
    ಪ್ರೇಕ್ಷಕನೋರ್ವ ಯುಐ ನೋಡಿದ ಬಳಿಕ ಚಿತ್ರದ ಬಗ್ಗೆ ತನ್ನ ವಿಮರ್ಶೆಯನ್ನು ಎಕ್ಸ್‌ ಖಾತೆಯಲ್ಲಿ ಪ್ರಕಟಿಸಿದ್ದು, “ಈ ಸಿನಿಮಾವನ್ನು ನೋಡಿ ನಾವು ರಿವ್ಯೂ ಮಾಡೋದಲ್ಲ, ಈ ಸಿನಿಮಾ ನಮ್ಮನ್ನು ನೋಡಿ ರಿವ್ಯೂ ಮಾಡುತ್ತೆ. ಯುಐ ಒಂದು ಸಿನಿಮಾವಲ್ಲ ಮಾನವರ ಆಲೋಚನೆ. ಚಿತ್ರದಲ್ಲಿನ ಪ್ರತಿಯೊಂದು ಅಂಶವನ್ನು ಡಿಕೋಡ್‌ ಮಾಡಬೇಕೆಂದರೆ ಯೂನಿವರ್ಸಲ್‌ ಇಂಟೆಲಿಜೆನ್ಸ್‌ ಬೇಕು” ಎಂದು ಬರೆದುಕೊಂಡಿದ್ದಾರೆ.

    ರಿವ್ಯೂ ಹೇಳೋಕಾಗದೇ ಇರೋ ಮೂವಿ
    “ರಿಯಲ್‌ ಸ್ಟಾರ್‌ ಈಸ್‌ ಬ್ಯಾಕ್..‌ ಮಾಸಿವ್‌ ಕಂಟೆಂಟ್‌ ಇರುವ ಚಿತ್ರ. ರಿವ್ಯೂ ಹೇಳೋಕೆ ಆಗ್ದೇ ಇರೊ ಅಂತ ಮೂವಿ ಅಂದ್ರೆ ರಿವ್ಯೂ ಗಿಂತ ರಿಯಾಲಿಟಿ ಮುಖ್ಯ ಅದುನ್ನ ಅರ್ಥ ಮಾಡಿಕೊಳ್ಳಬೇಕು ಒಂದು ಸಲಿ ಮೂವಿ ನೋಡಿ ನಿಮಗೆ ಗೊತ್ತಾಗುತ್ತೆ, ಈ ಮೂವಿ ಸೋಲೊಕೆ ಸಾಧ್ಯನೆ ಇಲ್ಲ ಸೋಲ್ತು ಅಂದ್ರೆ ಸೋತಿದ್ದು ಮೂವಿ ಅಲ್ಲ ನಾವು” ಎಂದು ಮತ್ತೋರ್ವ ಪ್ರೇಕ್ಷಕ ಬರೆದುಕೊಂಡಿದ್ದಾರೆ.

    ಎಲ್ಲೆಡೆ ಪಾಸಿಟಿವ್‌ ರಿವ್ಯೂ, ಇನ್ನೊಂದ್‌ ಸಲ ನೋಡೋ ಟಾಕ್!‌
    ಇನ್ನು ಯುಐ ಕುರಿತು ಈಗಾಗಲೇ ನೂರಾರು ರಿವ್ಯೂಗಳು ಹೊರಬಿದ್ದಿದ್ದು, ಬಹುತೇಕ ಮಂದಿಗೆ ಚಿತ್ರ ಇಷ್ಟವಾಗಿದೆ. ಇನ್ನು ಚಿತ್ರ ಒಮ್ಮೆ ನೋಡಿದರೆ ಅರ್ಥವಾಗಲ್ಲ, ಮತ್ತೊಮ್ಮೆ ಫೋಕಸ್‌ ಮಾಡಿ ನೋಡಬೇಕು ಎಂದೇ ಬಹುತೇಕ ಮಂದಿ ಹೇಳುತ್ತಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading