ಬಿಗ್‌ಬಾಸ್ ಕನ್ನಡ ಸೀಸನ್ 11 ಮುಕ್ತಾಯದ ಹಂತಕ್ಕೆ ಬಂದಿದ್ದು, ಸದ್ಯ ಕೊನೆಯ ವಾರದ ಪ್ರಸಾರ ಜರುಗುತ್ತಿದೆ. ಅಂತಿಮವಾಗಿ ಫಿನಾಲೆ ವಾರದಲ್ಲಿ ಬಿಗ್‌ಬಾಸ್ ಮನೆಯಲ್ಲಿ ಹನುಮಂತು, ರಜತ್, ತ್ರಿವಿಕ್ರಮ್, ಭವ್ಯ ಗೌಡ, ಉಗ್ರಂ ಮಂಜು ಹಾಗೂ ಮೋಕ್ಷಿತಾ ಉಳಿದುಕೊಂಡಿದ್ದು, ಈ ಪೈಕಿ ಯಾರು ವಿನ್ನರ್ ಆಗಿ ಹೊರಹೊಮ್ಮಲಿದ್ದಾರೆ ಎಂಬುದು ಸದ್ಯ ಪ್ರೇಕ್ಷಕರ ಪ್ರಶ್ನೆಯಾಗಿದೆ.
ಹೀಗಿರುವಾಗಲೇ ಸಾಮಾಜಿಕ ಜಾಲತಾಣದಲ್ಲಿ ಬಿಗ್‌ಬಾಸ್ ಸ್ಪರ್ಧಿ ರಜತ್ ಹಾಗೂ ಅವರ ಮಾಜಿ ಲವರ್ ಫೋಟೊಗಳು ವೈರಲ್ ಆಗಿದ್ದು, ಈ ಫೋಟೊಗಳನ್ನು ಹಂಚಿಕೊಂಡ ಹತ್ತು ಟ್ರೋಲ್ ಪೇಜ್‌ಗಳ ವಿರುದ್ಧ ರಜತ್ ಪತ್ನಿ ಅಕ್ಷತಾ ದೂರನ್ನು ಸಹ ನೀಡಿದ್ದಾರಂತೆ.
ಹೌದು, ಟ್ರೋಲ್ ಪೇಜ್‌ಗಳು ರಜತ್ ಹಾಗೂ ಮಾಜಿ ಪ್ರಿಯತಮೆಯ ಫೋಟೊಗಳನ್ನು ಹಂಚಿಕೊಂಡಿದ್ದು, ಹಣಕ್ಕೆ ಬೇಡಿಕೆ ಇಟ್ಟಿವೆ ಎಂದು ರಜತ್ ಪತ್ನಿ ಅಕ್ಷತಾ ದೂರು ನೀಡಿದ್ದಾರೆ. ಇನ್ನು ರಜತ್ ಅವರ ಈ ಫೋಟೊ ಹಿಂದಿನ ಕೈ ಯಾರದ್ದೇ ಇರಲಿ. ಕೊನೆಯ ವಾರದಲ್ಲಿ ಈ ಫೋಟೊ ವೈರಲ್ ಆಗಿರುವುದು ಎಂಥವರಿಗೂ ಇದು ಪ್ರಚಾರದ ಗಿಮಿಕ್ ಎಂದೆನಿಸದೇ ಇರಲಾರದು. ಒಟ್ಟಿನಲ್ಲಿ ಯಾರೋ ಇಲ್ಲಿ ಚೀಕ್ ಟ್ರಿಕ್ಸ್ ಮಾಡಿದಂತಿದೆ.
ಹೌದು, ಇಂತಹ ಸಮಯದಲ್ಲಿ ಸಾಮಾಜಿಕ ಜಾಲತಾಣದಲ್ಲಿ ರಜತ್ ಹಾಗೂ ಮಾಜಿ ಪ್ರೇಯಸಿಯ ಫೋಟೊಗಳು ವೈರಲ್ ಆಗಿವೆ ಎಂದರೆ ಅದರ ಹಿಂದೆ ಕಾಣದ ಕೈಯೊಂದು ಇರಲೇಬೇಕಲ್ಲ. ಹೀಗೆ ಫೋಟೊ ಲೀಕ್ ಮಾಡಿಸುವುದರಿಂದ ಲಾಭ ಸಿಗುವುದಾದರೂ ಯಾರಿಗೆ ಎಂಬ ಪ್ರಶ್ನೆ ಇಲ್ಲಿ ಮೂಡುತ್ತಿದೆ. ಒಟ್ಟಿನಲ್ಲಿ ಈ ಫೋಟೊಗಳು ಇಂತಹ ಪ್ರಮುಖ ಘಟ್ಟದಲ್ಲಿ ಲೀಕ್ ಆಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದ್ದು, ಸದ್ಯ ಈ ಚೀಪ್ ಟ್ರಿಕ್ಸ್ ಮಾಡಿದ್ದು ರಜತ್ ವಿರೋಧಿಗಳಾ ಅಥವಾ ಇತರೆ ಸ್ಪರ್ಧಿಗಳ ಪ್ರಚಾರಕಾರರಾ ಎಂಬ ಪ್ರಶ್ನೆಯೂ ಸಹ ಮೂಡಿದೆ.
ರಜತ್ ಪತ್ನಿ ಅಕ್ಷತಾ ಈ ಕುರಿತು ದೂರು ನೀಡಿದ್ದು, ಪೊಲೀಸರು ಆರೋಪಿ ಯಾರೆಂದು ಪತ್ತೆ ಹಚ್ಚುತ್ತಾರಾ ಅಥವಾ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಪ್ರಕಾರ ಇದೊಂದು ʼಪಬ್ಲಿಸಿಟಿ ಸ್ಟಂಟಾʼ ಎಂಬುದನ್ನು ಕಾದು ನೋಡಬೇಕಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


