ರಾಗಿ ಅಂಬಲಿ‘ ಸರಳ, ತ್ವರಿತ ಮತ್ತು ಪೌಷ್ಟಿಕ ಉಪಹಾರ ಆಯ್ಕೆಯಾಗಿದೆ. ರಾಗಿ ಒಂದು ಸಣ್ಣ ಕೆಂಪು ಬಣ್ಣದ ಧಾನ್ಯವಾಗಿದೆ ಆದರೆ ಪೋಷಕಾಂಶಗಳಿಂದ ಕೂಡಿದೆ ಮತ್ತು ಅಂಟು ಮುಕ್ತವಾಗಿದೆ, ಆದ್ದರಿಂದ ಇದನ್ನು ‘ಸೂಪರ್‌ಫುಡ್’ ಎಂದು ಕರೆಯಲಾಗುತ್ತದೆ.ಮೂಳೆಗಳ ಬಲಕ್ಕಾಗಿ ಖನಿಜಗಳ ರಚನೆಗೆ ರಾಗಿ ಮಾಲ್ಟ್ ಉತ್ತಮ ಕೊಡುಗೆ ನೀಡುತ್ತದೆ. ರಾಗಿ ಮಾಲ್ಟ್ ಕುಡಿದರೆ ನಮ್ಮ ದೇಹಕ್ಕೆ ಶಕ್ತಿ ಬರುತ್ತದೆ. ರಾಗಿಯಲ್ಲಿರುವ ಪೋಷಕಾಂಶಗಳು ವಿಶೇಷವಾಗಿ ಪ್ರೋಟೀನ್ಗಳು, A, B, C ಜೀವಸತ್ವಗಳು ಮತ್ತು ಖನಿಜಗಳು ನಮ್ಮ ದೇಹಕ್ಕೆ ಬಲ ನೀಡುತ್ತವೆ. ಇದರಿಂದ ಜೀರ್ಣ ಶಕ್ತಿ ಹೆಚ್ಚುತ್ತದೆ. ಬೇಸಿಗೆಯ ಸಮಯದಲ್ಲಿ ರಾಗಿಯನ್ನು ಹೆಚ್ಚಾಗಿ ಬಳಸುವುದು ಆರೋಗ್ಯದ ದೃಷ್ಠಿಯಿಂದ ತುಂಬಾ ಒಳ್ಳೆಯದು. ರಾಗಿಯನ್ನು ಮುದ್ದೆ, ರಾಗಿ ರೊಟ್ಟಿ, ರಾಗಿ ದೋಸೆ, ರಾಗಿ ಹಾಲು, ಅಂಬಲಿ, ರಾಗಿ ಸಿಹಿ ಉಂಡೆ ಸೇರಿದಂತೆ ಹಲವು ರೀತಿಯಲ್ಲಿ ಬಳಸಲಾಗುತ್ತದೆ. ಈ ಬೇಸಿಗೆಯಲ್ಲಿ ರಾಗಿ ಅಂಬಲಿ ಅಥವಾ ರಾಗಿ ಗಂಜಿಯನ್ನು ಸೇವಿಸುವುದು ತುಂಬಾ ಒಳ್ಳೆಯದು.ಈ ಅಂಬಲಿಯನ್ನು ತಯಾರಿಸುವುದು ಕೂಡ ತುಂಬಾ ಸುಲಭ.

ರಾಗಿ ಮಾಲ್ಟ್ ತಯಾರಿಸಲು ಬೇಕಾಗುವ ಪದಾರ್ಥಗಳು (Ragi Malt Ingredients):
ರಾಗಿ ಹಿಟ್ಟು 3-4 ಚಮಚ
ಉಪ್ಪು (Salt)
ನೀರು
2 ಟೀಸ್ಪೂನ್ ಮೊಸರು
1/2 ಟೀಸ್ಪೂನ್ ನಿಂಬೆ ರಸ
ಸಣ್ಣದಾಗಿ ಹಚ್ಚಿದ ಈರುಳ್ಳಿ ಅರ್ಧ
- 4 ರಿಂದ 5 ಕರಿಬೇವಿನ ಎಲೆಗಳು
ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು (optional)
- ಚಿಕ್ಕ ತುಂಡು ಶುಂಠಿ (optional)
ರಾಗಿ ಮಾಲ್ಟ್ ರೆಸಿಪಿ :
ಒಂದು ಬಟ್ಟಲಿನಲ್ಲಿ ರಾಗಿಹಿಟ್ಟನ್ನು ತೆಗೆದುಕೊಳ್ಳಿ. ಅರ್ಧ ಕಪ್ ನೀರು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಯಾವುದೇ ಗಂಟು ಇರದಂತೆ ನೋಡಿಕೊಳ್ಳಿ. ಕುದಿಯಲು ಉಳಿದ ಒಂದೂವರೆ ಕಪ್‌ಗಳಷ್ಟು ನೀರನ್ನು ಇಟ್ಟುಕೊಳ್ಳಿ. ನೀರು ಕುದಿಯಲು ಪ್ರಾರಂಭಿಸಿದಾಗ ಮಿಕ್ಸ್ ಮಾಡಿರುವ ರಾಗಿ ಹಿಟ್ಟನ್ನು ನಿಧಾನಕ್ಕೆ ಸೇರಿಸಿ, ಉಪ್ಪು ಹಾಕಿ ಐದು ನಿಮಿಷ ಬೇಯಿಸಿಕೊಳ್ಳಿ. ನಂತರ ಸ್ಟವ್ ಆಫ್ ಮಾಡಿ ಮತ್ತು ಸಂಪೂರ್ಣವಾಗಿ ತಣ್ಣಗಾಗುವವರೆಗೆ ಕಾಯಿರಿ. ಅದಕ್ಕೆ ಮೊಸರು ಮಜ್ಜಿಗೆ ಜೊತೆಗೆ ಸೇರಿಸಿ ಕುಡಿಯಲು ಕೊಡಿ. ಬೇಕಿದ್ದರೇ ಸಣ್ಣಗೆ ಹೆಚ್ಚಿದ ಈರುಳ್ಳಿ, ನುಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಮತ್ತು ಕತ್ತರಿಸಿದ ಕರಿಬೇವಿನ ಎಲೆ ಹಾಕಿ ಕೊಡಬಹುದು.
ರಾಗಿ ಅಂಬಲಿ ಕುಡಿಯುವುದರಿಂದ ಆಗುವ ಪ್ರಯೋಜನಗಳೇನು
1.ರಾಗಿ ಅಂಬಲಿಯು ದೇಹದ ತಾಪಮಾನವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ. ಬೇಸಿಗೆ ಸಮಯದಲ್ಲಿ ಇದನ್ನು ಕುಡಿಯುವುದು ದೇಹವನ್ನು ತಂಪಾಗಿ ಇಡುತ್ತದೆ.
2.ರಾಗಿ ಅಂಬಲಿ ಶಕ್ತಿ ತುಂಬುವ ಪಾನೀಯವಾಗಿದೆ. ಇದರಲ್ಲಿ ಕಾರ್ಬೋಹೈಡ್ರೇಟ್ಸ್ ಮತ್ತು ನೈಸರ್ಗಿಕ ಶಕ್ತಿ ತುಂಬಿರುವ ಪರಿಣಾಮ ದಿನವಿಡೀ ಶಕ್ತಿವಂತನಾಗಿರಲು ಸಹಾಯ ಮಾಡುತ್ತದೆ.
3.ರಾಗಿ ಅಂಬಲಿಯಲ್ಲಿ ನಾರಿನಂಶ ಹೆಚ್ಚಿರುವುದರಿಂದ, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಮಲಬದ್ಧತೆಯನ್ನು ನಿವಾರಿಸುತ್ತದೆ.
4.ರಾಗಿ ಮಾಲ್ಟ್ ಅನ್ನು ನೀವು ನಿಯಮಿತವಾಗಿ ಸೇವಿಸಿದರೆ ಮಧುಮೇಹದ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
5.ರಾಗಿ ಅಂಬಲಿಯಲ್ಲಿನ ಪೋಷಕಾಂಶಗಳು, ದೇಹದ ರೋಗ ನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


