Tuesday, November 3, 2026
spot_img
More
    spot_img
    HomeChampions Trophy 2025Champions Trophy 2025: ರೋಹಿತ್‌ ಬಿಟ್ಟ ಕ್ಯಾಚ್‌ನಿಂದ ಅಕ್ಷರ್‌ ಪಟೇಲ್‌ ಕೈತಪ್ಪಿದ 4 ದಾಖಲೆಗಳಿವು!

    Champions Trophy 2025: ರೋಹಿತ್‌ ಬಿಟ್ಟ ಕ್ಯಾಚ್‌ನಿಂದ ಅಕ್ಷರ್‌ ಪಟೇಲ್‌ ಕೈತಪ್ಪಿದ 4 ದಾಖಲೆಗಳಿವು!

    ದುಬೈ: ನಿನ್ನೆ (ಫೆಬ್ರವರಿ 20) ದುಬೈ ಅಂತರ್‌ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತ ಹಾಗೂ ಬಾಂಗ್ಲಾದೇಶ ತಂಡಗಳು 2025ರ ಐಸಿಸಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಮುಖಾಮುಖಿಯಾಗಿದ್ದವು. ಪಂದ್ಯದಲ್ಲಿ ಭಾರತ 6 ವಿಕೆಟ್‌ಗಳ ಅಂತರದ ಗೆಲುವನ್ನು ದಾಖಲಿಸಿತು.

    ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 49.4 ಓವರ್‌ಗಳಲ್ಲಿ ವಿಕೆಟ್‌ ನಷ್ಟಕ್ಕೆ 228 ರನ್‌ ಕಲೆಹಾಕಿ 229 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 46.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 231 ರನ್‌ ಕಲೆಹಾಕಿತು. ಈ ಮೂಲಕ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.

    ಇತ್ತ ಭಾರತವೇನೋ ಮೊದಲ ಪಂದ್ಯ ಗೆದ್ದಿದೆ. ಆದರೆ ಪಂದ್ಯದಲ್ಲಿ ಅಕ್ಷರ್‌ ಪಟೇಲ್‌ ಹ್ಯಾಟ್ರಿಕ್‌ ವಿಕೆಟ್‌ ಪಡೆದುಕೊಳ್ಳುವ ಅವಕಾಶವಿದ್ದರೂ ಸಹ ರೋಹಿತ್‌ ಶರ್ಮಾ ಕ್ಯಾಚ್‌ ಕೈಬಿಟ್ಟ ಕಾರಣ ಅವಕಾಶ ವಂಚಿತರಾಗಿದ್ದಾರೆ.

    ಒಂಬತ್ತನೇ ಓವರ್‌ ಮಾಡಿದ ಅಕ್ಷರ್‌ ಪಟೇಲ್‌ಎರಡನೇ ಎಸೆತದಲ್ಲಿ ತನ್ಜಿದ್‌ ಹಸನ್‌ ಕೆಎಲ್‌ ರಾಹುಲ್‌ಗೆ ಕ್ಯಾಚ್‌ ನೀಡಿ ಔಟ್‌ ಆದರೆ, ಮೂರನೇ ಎಸೆತದಲ್ಲಿ ಮುಸ್ಫಿಕರ್‌ ರಹೀಮ್ ವಿಕೆಟ್‌ ಒಪ್ಪಿಸಿದರು. ಹೀಗೆ ಬ್ಯಾಕ್‌ ಟು ಬ್ಯಾಕ್‌ ಎರಡು ವಿಕೆಟ್‌ ಪಡೆದು ಹ್ಯಾಟ್ರಿಕ್‌ ಸನಿಹದಲ್ಲಿದ್ದ ಅಕ್ಷರ್‌ ಪಟೇಲ್‌ ಎಸೆದ ಮುಂದಿನ ಎಸೆತಕ್ಕೆ ಜೇಕರ್‌ ಅಲಿ ಸಹ ಸ್ಲಿಪ್‌ಗೆ ಕ್ಯಾಚ್‌ ನೀಡಿದ್ದರು. ಆದರೆ ಸ್ಲಿಪ್‌ನಲ್ಲಿದ್ದ ರೋಹಿತ್‌ ಶರ್ಮಾ ಚೆಂಡಿನ ವೇಗವನ್ನು ಗ್ರಹಿಸಲಾಗದೇ ಕ್ಯಾಚ್‌ ಕೈ ಚೆಲ್ಲಿದರು.‌

    ಹೀಗೆ ರೋಹಿತ್‌ ಶರ್ಮಾ ಬಿಟ್ಟಿರುವ ಕ್ಯಾಚ್‌ನಿಂದಾಗಿ ಅಕ್ಷರ್‌ ಪಟೇಲ್‌ ಹ್ಯಾಟ್ರಿಕ್‌ ಕೈತಪ್ಪಿದ್ದು, ಈ ಕೆಳಕಂಡ ನಾಲ್ಕು ದಾಖಲೆಗಳೂ ಸಹ ಅಕ್ಷರ್‌ ಕೈತಪ್ಪಿವೆ.

    1. ಆಡಿದ ಮೊದಲ ಐಸಿಸಿ ಟೂರ್ನಮೆಂಟ್‌ ಪಂದ್ಯದಲ್ಲಿಯೇ ಹ್ಯಾಟ್ರಿಕ್ ಸಾಧನೆ ಮಾಡಿದ ವಿಶ್ವ ದಾಖಲೆ.
    2. ಐಸಿಸಿ ಟೂರ್ನಿಗಳಲ್ಲಿ ಹ್ಯಾಟ್ರಿಕ್‌ ಪಡೆದ ಭಾರತದ ಮೊದಲ ಪುರುಷ ಕ್ರಿಕೆಟರ್‌ ಎಂಬ ದಾಖಲೆ.
    3. ವೆಸ್ಟ್‌ ಇಂಡೀಸ್‌ನ ಜೆರೊಮ್‌ ಟೇಲರ್‌ 2006ರಲ್ಲಿ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಹ್ಯಾಟ್ರಿಕ್‌ ಪಡೆದಿದ್ದರು. ಈಗ ಅಕ್ಷರ್‌ ಪಡೆದಿದ್ದರೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಹ್ಯಾಟ್ರಿಕ್‌ ವಿಕೆಟ್‌ ಪಡೆದ ಏಷ್ಯಾದ ಮೊದಲ ಆಟಗಾರ ಹಾಗೂ ವಿಶ್ವದ ಎರಡನೇ ಆಟಗಾರ ಎನಿಸಿಕೊಳ್ಳುತ್ತಿದ್ದರು.
    4. ಕುಲ್‌ದೀಪ್‌ ಯಾದವ್‌ ಹೊರತುಪಡಿಸಿ ಭಾರತದ ಮತ್ಯಾವುದೇ ಸ್ಪಿನ್ನರ್‌ ಸಹ ಏಕದಿನ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್‌ ಪಡೆಯದೇ ಇದ್ದು, ಅಕ್ಷರ್‌ ಪಟೇಲ್‌ ಹ್ಯಾಟ್ರಿಕ್‌ ಸಾಧನೆ ಮಾಡಿದ್ದರೆ ಏಕದಿನ ಕ್ರಿಕೆಟ್‌ನಲ್ಲಿ ಹ್ಯಾಟ್ರಿಕ್‌ ಪಡೆದ ಭಾರತದ ಎರಡನೇ ಸ್ಪಿನ್ನರ್‌ ಎನಿಸಿಕೊಳ್ಳುತ್ತಿದ್ದರು.

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search