ದುಬೈ: ನಿನ್ನೆ (ಫೆಬ್ರವರಿ 20) ದುಬೈ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಎರಡನೇ ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಭಾರತ 6 ವಿಕೆಟ್‌ಗಳ ಗೆಲುವನ್ನು ಕಂಡಿದೆ.
ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶ 49.4 ಓವರ್‌ಗಳಲ್ಲಿ ವಿಕೆಟ್ ನಷ್ಟಕ್ಕೆ 228 ರನ್ ಕಲೆಹಾಕಿ 229 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಭಾರತ 46.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 231 ರನ್ ಕಲೆಹಾಕಿತು. ಈ ಮೂಲಕ ಭಾರತ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ಇನ್ನು ಬ್ಯಾಟಿಂಗ್ ವಿಭಾಗದಲ್ಲಿ ಶುಬ್‌ಮನ್ ಗಿಲ್ ಶತಕ ಬಾರಿಸಿದರೆ, ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಜವಾಬ್ದಾರಿಯುತ ಆಟವನ್ನಾಡಿದರು. ಮೊದಲು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶವನ್ನು 9 ಓವರ್‌ಗೆ 5 ವಿಕೆಟ್ ಪಡೆಯುವ ಮೂಲಕ ಭಾರತದ ಬೌಲರ್‌ಗಳು ಕಟ್ಟಿಹಾಕಿದ್ದರು.
ಒಂಬತ್ತನೇ ಓವರ್ ಮಾಡಿದ ಅಕ್ಷರ್ ಪಟೇಲ್‌ಎರಡನೇ ಎಸೆತದಲ್ಲಿ ತನ್ಜಿದ್ ಹಸನ್ ಕೆಎಲ್ ರಾಹುಲ್‌ಗೆ ಕ್ಯಾಚ್ ನೀಡಿ ಔಟ್ ಆದರೆ, ಮೂರನೇ ಎಸೆತದಲ್ಲಿ ಮುಸ್ಫಿಕರ್ ರಹೀಮ್ ವಿಕೆಟ್ ಒಪ್ಪಿಸಿದರು. ಹೀಗೆ ಬ್ಯಾಕ್ ಟು ಬ್ಯಾಕ್ ಎರಡು ವಿಕೆಟ್ ಪಡೆದು ಹ್ಯಾಟ್ರಿಕ್ ಸನಿಹದಲ್ಲಿದ್ದ ಅಕ್ಷರ್ ಪಟೇಲ್ ಎಸೆದ ಮುಂದಿನ ಎಸೆತಕ್ಕೆ ಜೇಕರ್ ಅಲಿ ಸಹ ಸ್ಲಿಪ್‌ಗೆ ಕ್ಯಾಚ್ ನೀಡಿದ್ದರು. ಆದರೆ ಸ್ಲಿಪ್‌ನಲ್ಲಿದ್ದ ರೋಹಿತ್ ಶರ್ಮಾ ಚೆಂಡಿನ ವೇಗವನ್ನು ಗ್ರಹಿಸಲಾಗದೇ ಕ್ಯಾಚ್ ಕೈ ಚೆಲ್ಲಿದರು.
ಹೀಗೆ ಕೈಗೆ ಬಂದ ಸುಲಭವಾದ ಕ್ಯಾಚ್ ಬಿಟ್ಟ ಬಳಿಕ ರೋಹಿತ್ ನೆಲಕ್ಕೆ ಕೈನಿಂದ ಹೊಡೆಯುವ ಮೂಲಕ ಬೇಸರ ಹೊರಹಾಕಿದರು. ಅಲ್ಲದೇ ಅಕ್ಷರ್ ಪಟೇಲ್‌ಗೆ ಕೈಮುಗಿದು ಆ ಕ್ಷಣವೇ ಕ್ಷಮೆಯಾಚಿಸಿದರು.
ಈ ಕುರಿತು ಪಂದ್ಯ ಮುಗಿದ ಬಳಿಕ ಮಾತನಾಡಿರುವ ಅಕ್ಷರ್ ಪಟೇಲ್ ” ನನಗೆ ಎರಡನೇ ವಿಕೆಟ್ ಔಟ್ ಅಥವಾ ಇಲ್ಲವಾ ಎನ್ನುವುದು ಗೊತ್ತಿರಲಿಲ್ಲ. ಕೆಎಲ್ ಔಟ್‌ಗಾಗಿ ಅಪೀಲ್ ಮಾಡಿದ್ರು. ಎರಡನೇ ವಿಕೆಟ್ ಸಿಕ್ಕಿತು. ಬಳಿಕ ಚೆಂಡು ಬ್ಯಾಟ್ ಎಡ್ಜ್‌ಗೆ ಬಡಿದ ಕೂಡಲೇ ನನಗೆ ಹ್ಯಾಟ್ರಿಕ್ ವಿಕೆಟ್ ಸಿಕ್ಕಿತು ಎಂದುಕೊಂಡೆ. ನಾನು ಸಂಭ್ರಮಿಸಲು ಆರಂಭಿಸಿದ್ದೆ. ಆದರೆ ರೋಹಿತ್ ಕ್ಯಾಚ್ ಚೈಲ್ಲಿದ್ದು ನೋಡಿದೆ, ಏನೂ ಪ್ರತಿಕ್ರಿಯಿಸದೇ ವಾಪಸ್ ಬಂದೆ. ಅದೆಲ್ಲಾ ಆಟದ ಒಂದು ಭಾಗ” ಎಂದು ಉತ್ತರ ನೀಡಿದ್ದಾರೆ.
ಅತ್ತ ರೋಹಿತ್ ಶರ್ಮಾ ಸಹ ಈ ಬಗ್ಗೆ ಮಾತನಾಡಿದ್ದು, “ನಾನು ಅಕ್ಷರ್‌ನನ್ನು ಊಟಕ್ಕೆ ಕರೆದೊಯ್ಯುತ್ತೇನೆ. ಅದು ಸುಲಭದ ಕ್ಯಾಚ್ ಆಗಿತ್ತು. ನಾನು ನನಗೆ ಹಾಕಿಕೊಂಡಿರುವ ಗುಣಮಟ್ಟಕ್ಕೆ ತಕ್ಕಂತೆ ಆ ಕ್ಯಾಚ್ ಅನ್ನು ಪಡೆದುಕೊಳ್ಳಬೇಕಿತ್ತು. ಆದರೆ ಇಂತಹ ಸನ್ನಿವೇಶಗಳು ನಡೆಯುವುದು ಸಾಮಾನ್ಯ” ಎಂದು ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


