ನಿನ್ನೆ ( ಏಪ್ರಿಲ್ 20 ) ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿ ನಡೆದ ಭೀಕರ ಕೊಲೆ ಸಿಲಿಕಾನ್ ಸಿಟಿಯನ್ನೇ ಒಮ್ಮೆ ಬೆಚ್ಚಿ ಬೀಳಿಸಿದೆ. ಪೊಲೀಸ್ ಮಹಾನಿರ್ದೇಶಕನಾಗಿ ಕೆಲಸ ನಿರ್ವಹಿಸಿದ್ದ ಓಂ ಪ್ರಕಾಶ್ ಈ ರೀತಿ ಮನೆಯೊಳಗೆ ಬರ್ಬರವಾಗಿ ಹತ್ಯೆಯಾಗಿದ್ದು ಮನೆಯವರೇ ಕೊಲೆ ಮಾಡಿದ್ದಾರೆ ಎಂಬ ಶಂಕೆ ವ್ಯಕ್ತವಾಗಿದೆ.
ಕೊಲೆ ನಡೆದ ಸಮಯದಲ್ಲಿ ಮನೆಯಲ್ಲಿದ್ದ ಪತ್ನಿ ಪಲ್ಲವಿ ಹಾಗೂ ಕೃತಿಯನ್ನು ಪೊಲೀಸರು ಬಂಧಿಸಲಾಗಿದ್ದು, ವಿಚಾರಣೆ ಆರಂಭಿಸಿದ್ದಾರೆ. ಇನ್ನೂ ಸಹ ಪೋಸ್ಟ್ ಮಾರ್ಟಂ ವರದಿ ಬರಬೇಕಿದ್ದು ಕೊಲೆ ಮಾಡಿರುವ ಸಂಶಯವಿರುವ ತಾಯಿ ಹಾಗೂ ಮಗಳನ್ನು ಪೊಲೀಸರು ಬಂಧಿಸಿ ನಿನ್ನೆ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇಟ್ಟಿದ್ದರು.
ಇಂದು ವಿಚಾರಣೆಗೆಂದು ಪೊಲೀಸ್ ಠಾಣೆಗೆ ಈ ಇಬ್ಬರನ್ನು ಕರೆ ತರಲಾಗಿದ್ದು, ಓಂ ಪ್ರಕಾಶ್ ಪುತ್ರಿ ಕಾರು ಇಳಿಯದೇ ಕಿರಿಕ್ ಮಾಡಿಕೊಂಡಿದ್ದು, ಇಳಿಸಲು ಬಂದ ಪೊಲೀಸರಿಗೆ ಡೋಂಟ್ ಟಚ್ ಮೀ ಎಂದು ಅವಾಜ್ ಹಾಕಿದ್ದಾರೆ.
ಇನ್ನು ಕೊಲೆ ನಡೆದ ಸಮಯದಲ್ಲಿ ತಾಯಿ ಪಲ್ಲವಿ ಹಾಗೂ ಪುತ್ರಿ ಕೃತಿ ಒಂದೇ ಕೋಣೆಯಲ್ಲಿದ್ದರು ಎನ್ನಲಾಗಿದೆ. ಪಲ್ಲವಿ ಅಡುಗೆ ಮನೆಯಲ್ಲಿದ್ದ ಚಾಕುವಿನಿಂದ ಕೈಗೆ, ಎದೆಗೆ ಹಾಗೂ ಕುತ್ತಿಗೆ ಭಾಗಕ್ಕೆ ಸುಮಾರು ಎಂಟರಿಂದ ಹತ್ತು ಬಾರಿ ಚುಚ್ಚಿದ್ದಾರೆ ಎನ್ನಲಾಗಿದ್ದು, ರಕ್ತದ ಮಡುವಿನಲ್ಲಿ ಓಂ ಪ್ರಕಾಶ್ ಅವರ ಮೃತದೇಹ ದೊರೆತಿದೆ. ಅಲ್ಲದೇ ಕೊಲೆ ಮಾಡುವುದಕ್ಕೂ ಮುನ್ನ ಖಾರದ ಪುಡಿ ಹಾಗೂ ಅಡುಗೆ ಎಣ್ಣೆ ಬಳಸಿ ಹಲ್ಲೆ ಮಾಡಿದ್ದಾಗಿಯೂ ಪೊಲೀಸ್ ವಿಚಾರಣೆ ವೇಳೆ ಹೇಳಿಕೊಂಡಿದ್ದಾರೆ ಎನ್ನಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


