ಬೆಂಗಳೂರು: ಕಳೆದ ಶುಕ್ರವಾರ ( ಜುಲೈ 18 ) ಯುವ ರಾಜ್ಕುಮಾರ್ ನಟನೆಯ ಎಕ್ಕ ಚಿತ್ರ ಬಿಡುಗಡೆಯಾಗಿದೆ. ಹಾಡುಗಳಿಂದಲೇ ಪ್ರೇಕ್ಷಕರ ಮನ ಗೆದ್ದಿದ್ದ ಎಕ್ಕ ಚಿತ್ರಮಂದಿರದಲ್ಲೂ ಸಹ ಗೆದ್ದಿದ್ದು, ಎಲ್ಲೆಡೆ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಇನ್ನು ಎಕ್ಕ ಚಿತ್ರತಂಡ ಶನಿವಾರ ಹಾಗೂ ಭಾನುವಾರ ಹಳೇ ಮೈಸೂರು ಭಾಗದ ಹಲವು ಊರುಗಳಿಗೆ ಭೇಟಿ ನೀಡಿ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದರು.
ಹೀಗೆ ಎಲ್ಲೆಡೆ ಅಬ್ಬರಿಸುತ್ತಿರುವ ಎಕ್ಕ ಚಿತ್ರ ಈ ಮ್ಯಾಕ್ಸ್ ಚಿತ್ರದ ಬಳಿಕ ಮತ್ತೆ ಚಿತ್ರಮಂದಿರಗಳಲ್ಲಿ ದಿನಕ್ಕೆ ಕೋಟಿ ಗಳಿಕೆಯನ್ನು ಕಂಡಿದೆ. ಅದೆಷ್ಟೋ ದಿನಗಳಿಂದ ಥಿಯೇಟರ್ ಕಡೆ ಮುಖ ಮಾಡದ ಪ್ರೇಕ್ಷಕರು ಚಿತ್ರ ವೀಕ್ಷಿಸಿದ್ದಾರೆ. ಒಟ್ಟಿನಲ್ಲಿ ಎಕ್ಕ ಚಿತ್ರದ ಮೂಲಕ ಸ್ಯಾಂಡಲ್ವುಡ್ ಮತ್ತೆ ತುಸು ಚಿಗುರಿದ್ದು, ಚಿತ್ರ ಚೆನ್ನಾಗಿದ್ದರೆ ಜನ ಚಿತ್ರಮಂದಿರದ ಕಡೆ ಬಂದೇ ಬರುತ್ತಾರೆ ಎಂಬುದು ಸಾಬೀತಾಗಿದೆ.
ಇಷ್ಟರ ಮಟ್ಟಕ್ಕೆ ಒಳ್ಳೆಯ ಪ್ರತಿಕ್ರಿಯೆ ಪಡೆದುಕೊಳ್ಳುತ್ತಿರುವ ಎಕ್ಕ ಚಿತ್ರ ಮೊದಲ 3 ದಿನಗಳಲ್ಲಿ ಎಷ್ಟು ಗಳಿಕೆ ಮಾಡಿತು ಎಂದು ಅಭಿಮಾನಿಗಳು ಕಾತರರಾಗಿ ಇಂಟರ್ನೆಟ್ನಲ್ಲಿ ಹುಡುಕಲಾರಂಭಿಸಿದ್ದಾರೆ. ಇನ್ನು ಸಿನಿ ರಸಿಕರ ನೆಚ್ಚಿನ ಹಾಗೂ ನಂಬುಗೆಯ ಬಾಕ್ಸ್ ಆಫೀಸ್ ವೆಬ್ಸೈಟ್ ಸ್ಯಾಕ್ನಿಕ್ನಲ್ಲಿ ಎಕ್ಕ ಚಿತ್ರದ ಮೂರು ದಿನಗಳ ಕಲೆಕ್ಷನ್ ರಿಪೋರ್ಟ್ ವರದಿಯಾಗಿದ್ದು, ಸದ್ಯ ಈ ಅಂಕಿಗಳು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿವೆ.
ಹೌದು, ಸ್ಯಾಕ್ನಿಕ್ ಪ್ರಕಾರ ಎಕ್ಕ ಮೊದಲ ದಿನ 1.70 ಕೋಟಿ, ಎರಡನೇ ದಿನ 1.60 ಕೋಟಿ ಹಾಗೂ ಮೂರನೇ ದಿನ 1.95 ಕೋಟಿ ಗಳಿಕೆ ಮಾಡಿ ಮೂರು ದಿನಕ್ಕೆ ಒಟ್ಟು 5.25 ಕೋಟಿ ಗಳಿಕೆ ಮಾಡಿದೆ. ಹೀಗೆ ವೆಬ್ಸೈಟ್ನಲ್ಲಿ ವರದಿ ಮಾಡಲಾಗಿದ್ದು, ಮೊದಲ ದಿನ 1.70 ಕೋಟಿ ಗಳಿಸಿದ್ದ ಚಿತ್ರ ಭರ್ಜರಿ ರೆಸ್ಪಾನ್ಸ್ ಪಡೆದು ಎರಡನೇ ದಿನ ಹಾಗೂ ಮೂರನೇ ದಿನ ಇನ್ನೂ ಹೆಚ್ಚು ಜನರಿಂದ ವೀಕ್ಷಿಸಲ್ಪಟ್ಟಿತ್ತು.
ಹೀಗಿದ್ದರೂ ಎರಡನೇ ದಿನದ ಕಲೆಕ್ಷನ್ ಮೂರನೇ ದಿನಕ್ಕಿಂತ ಕಡಿಮೆ ಎನ್ನಲಾಗಿದ್ದು, ಭಾನುವಾರ ರಜಾ ದಿನ ಕೇವಲ 1.95 ಕೋಟಿ ಗಳಿಕೆ ಮಾಡಿದೆ ಎಂಬ ವರದಿ ಅನುಮಾನಗಳನ್ನು ಹುಟ್ಟುಹಾಕಿದೆ. ಸದ್ಯ ಈ ನಂಬರ್ಗಳು ಗೊಂದಲ ಹುಟ್ಟುಹಾಕಿದ್ದು, ಪರಿಹಾರವಾಗಿ ಎಕ್ಕ ಚಿತ್ರದ ನಿರ್ಮಾಪಕರು ಪಕ್ಕಾ ಲೆಕ್ಕ ಹೇಳಬೇಕಿದೆ.
ಸರ್ಕಾರಿ ಕಾರ್ಯಕ್ರಮದ ವೇದಿಕೆ ಮೇಲೆ ಗೃಹ ಸಚಿವ ಪರಮೇಶ್ವರ್ ತೆಲುಗು ಭಾಷಣ; ಇದೆಲ್ಲ ಬೇಕಿತ್ತಾ?
ಎಐ ಕನ್ನಡ ಕೃಷಿ ವೆಬ್ಸೈಟ್ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


