Wednesday, November 4, 2026
spot_img
More
    spot_img
    HomeLatest newsಈ ಬಾರಿಯ ಅಧಿವೇಶನ ಆಪರೇಷನ್‌ ಸಿಂಧೂರ್‌ ವಿಜಯೋತ್ಸವದ ಆಚರಣೆಯಾಗಿದೆ: ನರೇಂದ್ರ ಮೋದಿ

    ಈ ಬಾರಿಯ ಅಧಿವೇಶನ ಆಪರೇಷನ್‌ ಸಿಂಧೂರ್‌ ವಿಜಯೋತ್ಸವದ ಆಚರಣೆಯಾಗಿದೆ: ನರೇಂದ್ರ ಮೋದಿ

    ನವದೆಹಲಿ: ಮುಂಗಾರು ಸಂಸತ್‌ ಅಧಿವೇಶನವು ಆಪರೇಷನ್‌ ಸಿಂಧೂರ್‌ ವಿಜಯೋತ್ಸವದ ಆಚರಣೆಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

    ಆಪರೇಷನ್‌ ಸಿಂಧೂರ್‌ ಹೆಸರಿಯಲ್ಲಿ ಭಯೋತ್ಪಾದಕರ ಅಡಗುತಾಣಗಳನ್ನು 22 ನಿಮಿಷಗಳಲ್ಲಿ ನೆಲಸಮ ಮಾಡಲಾಗಿದೆ.

    ಭಾರತದಲ್ಲಿ ತಯಾರಿಸಲಾದ ಈ ಹೊಸ ರೂಪದ ಮಿಲಿಟರಿ ಶಕ್ತಿಯತ್ತ ಜಗತ್ತು ಬಹಳ ಆಕರ್ಷಿತವಾಗಿದೆ. ಇತ್ತೀಚಿನ ದಿನಗಳಲ್ಲಿ ನಾನು ಪ್ರಪಂಚದ ಜನರನ್ನು ಭೇಟಿಯಾದಾಗಲೆಲ್ಲಾ ಭಾರತದಿಂದ ತಯಾರಿಸಲ್ಪುತ್ತಿರುವ ಭಾರತದಲ್ಲಿ ತಯಾರಿಸಲ್ಪಟ್ಟ ಶಸ್ತ್ರಾಸ್ತ್ರಗಳ ಕಡೆಗೆ ಪ್ರಪಂಚದ ಆಕರ್ಷಣೆ ಹೆಚ್ಚುತ್ತಿದೆ ಎಂದು ಹೇಳಿದ್ದಾರೆ.

    ಇನ್ನು ಈ ಮಳೆಗಾಲದ ಅಧಿವೇಶನವು ಆಪರೇಷನ್‌ ಸಿಂಧೂರ್‌ ವಿಜಯೋತ್ಸವದ ಆಚರಣೆಯಾಗಿದೆ. ಇಡೀ ಜಗತ್ತು ಭಾರತದ ಮಿಲಿಟರಿ ಶಕ್ತಿಯ ಬಲವನ್ನು ಕಂಡಿದೆ. ಆಪರೇಷನ್‌ ಸಿಂಧೂರ್‌ನಲ್ಲಿ ಭಾರತೀಯ ಸೇನೆಯು ನಿಗದಿಪಡಿಸಿದ ಗುರಿಯನ್ನು 100% ಸಾಧಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು.

    ಇನ್ನು ಇಂದಿನಿಂದ ಸಂಸತ್‌ ಮುಂಗಾರು ಅಧಿವೇಶನ ಪ್ರಾರಂಭವಾಗಲಿದ್ದು, ಒಂದು ತಿಂಗಳ ಕಾಲ ನಡೆಯಲಿದೆ.

    ಅಧಿವೇಶನದಲ್ಲಿ ಪಹಲ್ಗಾಂ ದಾಳಿ, ಆಪರೇಷನ್‌ ಸಿಂಧೂರ್‌, ಏರ್‌ ಇಂಡಿಯಾ ವಿಮಾನ ದುರಂತ, ಬಿಹಾರ ಮತದಾರರ ಪಟ್ಟಿ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳಲು ವಿಪಕ್ಷಗಳು ಸಜ್ಜಾಗಿವೆ.

    ಅಧಿವೇಶನದಲ್ಲಿ ಪ್ರಧಾನಿ ಮೋದಿ ಅವರಿಂದ ಉತ್ತರಕ್ಕೆ ವಿಪಕ್ಷಗಳು ಪಟ್ಟು ಹಿಡಿಯುವ ಸಾಧ್ಯತೆಯಿದ್ದು, ಎಲ್ಲಾ ಸಚಿವರು ಇದಕ್ಕೆ ಉತ್ತರ ನೀಡುವ ಸಾಧ್ಯತೆಯಿದೆ.

    ಮುಡಾ ಕುರಿತು ಪತ್ನಿ ಪಾರ್ವತಿ ಇಡಿ ತನಿಖೆಗೆ ಸುಪ್ರೀಂ ನಕಾರ: ಸಿಎಂ ಸಿದ್ದರಾಮಯ್ಯ ಮೊದಲ ಪ್ರತಿಕ್ರಿಯೆ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search