Tuesday, August 4, 2026
spot_img
More
    spot_img
    HomeSportsCricketಕ್ರಿಕೆಟ್‌ ಆಡಲ್ಲ ಎಂದ ಭಾರತೀಯ ಆಟಗಾರರ ವಿರುದ್ಧ ಅಫ್ರಿದಿ ಕಿಡಿ

    ಕ್ರಿಕೆಟ್‌ ಆಡಲ್ಲ ಎಂದ ಭಾರತೀಯ ಆಟಗಾರರ ವಿರುದ್ಧ ಅಫ್ರಿದಿ ಕಿಡಿ

    ವಿಶ್ವ ಚಾಂಪಿಯನ್ಷಿಪ್ ಆಫ್ ಲೆಜೆಂಡ್ಸ್ (WCL) 2025ರಲ್ಲಿ ಭಾರತ ಮತ್ತು ಪಾಕಿಸ್ತಾನ ಚಾಂಪಿಯನ್ಸ್ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿದ್ದು, ಇದು ಕ್ರಿಕೆಟ್ ಮತ್ತು ರಾಜಕೀಯಗಳ ನಡುವಿನ ವಿವಾದವನ್ನು ಮತ್ತೆ ಮುನ್ನೆಲೆಗೆ ತಂದಿದೆ.

    Advertisement

    ಈ ಪಂದ್ಯವನ್ನು ಆಡಲು ಭಾರತೀಯ ತಂಡವು ನಿರಾಕರಿಸಿದ್ದಾರೆ. ಪಾಕಿಸ್ತಾನದ ತಂಡದಲ್ಲಿರುವ ಶಹೀದ್ ಅಫ್ರಿದಿ ಶಿಖರ್ ಧವನ್ ಮತ್ತು ಯುವರಾಜ್ ಸಿಂಗ್ ಸೇರಿದಂತೆ ಹಲವು ಭಾರತೀಯ ಆಟಗಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಈ ಹಿಂದೆ ಪಹಲ್ಗಾಮ್‌ನ ಭಯೋತ್ಪಾದನಾ ದಾಳಿಯ ಬಗ್ಗೆ ಅಫ್ರಿದಿ ನೀಡಿದ್ದ ವಿವಾದಾತ್ಮಕ ಹೇಳಿಕೆಗಳು ಭಾರತೀಯ ಆಟಗಾರರ ಮನಸ್ಸನ್ನು ಬಹಳಷ್ಟು ಬಾಧಿಸಿದ್ದವು. ಈ ಸನ್ನಿವೇಶದಲ್ಲಿ ಶಹೀದ್ ಅಫ್ರಿದಿ ಕ್ರಿಕೆಟ್ ಮತ್ತು ರಾಜಕೀಯವನ್ನು ಪ್ರತ್ಯೇಕವಾಗಿರಬೇಕೆಂದು ಕರೆ ನೀಡಿದ್ದಾರೆ, ಆದರೆ ಇದು ವಿವಾದಕ್ಕೆ ಕಾರಣವಾಗಿದೆ. “ಕ್ರೀಡೆ ರಾಷ್ಟ್ರಗಳನ್ನು ಸಮೀಪಗೊಳ್ಳುವಂತೆ ಮಾಡುತ್ತದೆ. ಕ್ರೀಡೆಗೂ ರಾಜಕೀಯ ಬಂದರೆ ಸಂವಹನ ಕಷ್ಟ” ಎಂದು ಅಫ್ರಿದಿ ಹೇಳಿದ್ದಾರೆ.

    ಅಲ್ಲದೇ ನಮ್ಮ ಜತೆ ಕ್ರಿಕೆಟ್‌ ಆಡುವುದಿಲ್ಲ ಎಂಬ ವಿಷಯವನ್ನು ಭಾರತೀಯ ಆಟಗಾರರು ಮುಂಚೆಯೇ ಹೇಳಬೇಕಿತ್ತು, ಪಂದ್ಯದ ದಿನ ಬೆಳಗ್ಗೆ ಹೇಳುವುದು ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.

    ದಿನದಿಂದ ದಿನಕ್ಕೆ ಇಳಿಕೆಯಾದ ಅಮರನಾಥ ಯಾತ್ರಿಕರ ಸಂಖ್ಯೆ

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading