ಮುಸುಕುಧಾರಿ ಅನಾಮಿಕನ ಬಗ್ಗೆ ಆತನ ಹುಟ್ಟೂರಿನ ಗ್ರಾಮಸ್ಥರು ಸ್ಫೋಟಕ ಮಾಹಿತಿಗಳನ್ನು ಹೊರಹಾಕಿದ್ದಾರೆ.ಅನಾಮಿಕನ ಕುರಿತು ಯಾರಿಗೂ ಗೊತ್ತಿರದ ಹಲವು ವಿಷಯಗಳನ್ನು ಹೇಳಿದ್ದಾರೆ.
ಮುಸುಕುದಾರಿ ಹುಟ್ಟಿ ಬೆಳೆದಿದ್ದು ಮಂಡ್ಯ ಜಿಲ್ಲೆಯ ಒಂದು ಗ್ರಾಮದಲ್ಲಿ ಎಂದು ಗ್ರಾಮಸ್ಥರು ದೃಢಪಡಿಸಿದ್ದಾರೆ. ಆತನ ತಂದೆ ಗ್ರಾಮ ಪಂಚಾಯತಿಯಲ್ಲಿ ಕೆಲಸ ಮಾಡುತ್ತಿದ್ದು, ಅವರ ಕುಟುಂಬಕ್ಕೆ ಗ್ರಾಮದಲ್ಲಿ ಒಳ್ಳೆಯ ಹೆಸರಿತ್ತು. ಆದರೆ ತಂದೆ-ತಾಯಿ ಮರಣದ ನಂತರ ಇಡೀ ಕುಟುಂಬ ಧರ್ಮಸ್ಥಳಕ್ಕೆ ತೆರಳಿತು.
ಅವನ ತಂದೆ-ತಾಯಿ ಒಳ್ಳೆಯವರು, ಆದರೆ ಇವನು ಮಾತ್ರ ಫ್ರಾಡ್ ಎಂದು ಗ್ರಾಮಸ್ಥರು ಮುಸುಕುದಾರಿಯ ಬಗ್ಗೆ ನೇರ ಆರೋಪ ಮಾಡಿದ್ದಾರೆ. ಅಲ್ಲದೆ, ನೂರಾರು ಶವಗಳನ್ನು ಹೂತಿದ್ದೀನಿ ಎಂದು ಅನಾಮಿಕ ಹೇಳಿರುವುದು ಸುಳ್ಳು ಎಂದು ಗ್ರಾಮಸ್ಥರು ಹೇಳಿದ್ದಾರೆ.
2014ರಲ್ಲಿ ಅನಾಮಿಕ ತನ್ನ 3ನೇ ಹೆಂಡತಿಯ ಜೊತೆ ಗ್ರಾಮಕ್ಕೆ ವಾಪಸ್ಸು ಬಂದಿದ್ದ. ಸುಮಾರು ಒಂದು ವರ್ಷ ಕಾಲ ಗ್ರಾಮದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದನು. ನಂತರ ಗ್ರಾಮಸ್ಥರು ಸಹಾಯ ಮಾಡಿ ಶೀಟ್‌ನ ಮನೆ ನಿರ್ಮಿಸಿ ಕೊಟ್ಟಿದ್ದರು. ಆದರೆ, ಆ ಜಾಗವನ್ನು ತನ್ನ ಹೆಸರಿಗೆ ಮಾಡಿಕೊಡುವಂತೆ ಗ್ರಾಮಸ್ಥರೊಂದಿಗೆ ಜಗಳ ಮಾಡಿಕೊಂಡಿದ್ದನು. ಸ್ವಚ್ಛತಾ ಕಾರ್ಯದ ಜೊತೆಗೆ ಇಟ್ಟಿಗೆ ಫ್ಯಾಕ್ಟರಿಯಲ್ಲೂ ಕೆಲಸ ಮಾಡುತ್ತಿದ್ದ ಈತ, ನಂತರ ಒಂದು ದಿನ ರಾತ್ರೋರಾತ್ರಿ ಊರು ಖಾಲಿ ಮಾಡಿ ಹೋಗಿದ್ದನು ಎಂದು ಗ್ರಾಮಸ್ಥರು ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


