Saturday, September 19, 2026
spot_img
More
    spot_img
    HomeLatest newsಕಾಂಗ್ರೆಸ್‌ ಸರ್ಕಾರಕ್ಕೆ ತಲೆನೋವು ತಂದಿಟ್ಟ ಪಕ್ಷದ ಒಳಬೇಗುದಿ

    ಕಾಂಗ್ರೆಸ್‌ ಸರ್ಕಾರಕ್ಕೆ ತಲೆನೋವು ತಂದಿಟ್ಟ ಪಕ್ಷದ ಒಳಬೇಗುದಿ

    ಬೆಂಗಳೂರು: ವಿಧಾನ ಮಂಡಲದಲ್ಲಿ ವಿರೋಧ ಪಕ್ಷಗಳನ್ನು ಸಮರ್ಥವಾಗಿ ನಿಭಾಯಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಪಕ್ಷದ ಒಳಬೇಗುದಿ ತೀವ್ರ ತಲೆ ನೋವು ತಂದಿಟ್ಟಿದೆ.

    Advertisement

    4 ವಿಧಾನಪರಿಷತ್ ಸದಸ್ಯರ ನೇಮಕ ಬಾಕಿಯಿರುವ ನಿಗಮ ಮಂಡಳಿಗಳಿಗೆ ಹಾಗೂ ಪ್ರಾಧಿಕಾರಗಳಿಗೆ ಅಧ್ಯಕ್ಷರ ನಿಯೋಜನೆ ಇಂತಹ ವಿಚಾರಗಳಲ್ಲಿ ಒಮ್ಮತಕ್ಕೆ ಬರಲಾಗದೆ ವಿಧಾನಮಂಡಲದ ಅಧಿವೇಶನದ ಬಳಿಕ ದೆಹಲಿ ಯಾತ್ರೆಗಳು ಶುರುವಾಗಲಿವೆ.

    ಸಚಿವ ಸಂಪುಟದಿಂದ ವಜಾಗೊಂಡಿರುವ ಕೆ.ಎನ್.ರಾಜಣ್ಣ ಅವರ ಕಾರಣವೂ ಸೇರಿದಂತೆ ಖಾಲಿಯಿರುವ ಎರಡು ಸಚಿವರ ಹುದ್ದೆಗಳಿಗೆ ಭರ್ತಿ ಮಾಡುವ ವಿಚಾರದಲ್ಲೂ ಕಾಂಗ್ರೆಸ್ ಹೊರ ಹೊಲಯದಲ್ಲೂ ಭಾರಿ ಪೈಪೋಟಿ ಕಂಡುಬರುತ್ತಿದೆ.

    ಒಂದು ಹಂತದಲ್ಲಿ ಹೈಕಮಾಂಡ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕೈ ಕಟ್ಟಿಹಾಕಿದ್ದು, ಒಳ ಬೇಗುದಿಗಳ ವಿಷಯದಲ್ಲಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಒಮ್ಮತದ ನಿರ್ಣಯ ಕೈಗೊಳ್ಳಲು ಮುಖ್ಯಮಂತ್ರಿ ಸಿದ್ದರಾಮಯ್ಯ ಪರದಾಡುತ್ತಿದ್ದಾರೆ.

    ಧರ್ಮಸ್ಥಳದ ಪ್ರಕರಣಗಳ ಎಸ್‍ಐಟಿ ತನಿಖೆ, ಶಾಸಕರಿಗೆ ಅನುಧಾನ ಹಂಚಿಕೆಯಲ್ಲಿನ ತಾರತಮ್ಯ, ಗ್ರೇಟರ್ ಬೆಂಗಳೂರು ವಿವಾದ, ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಕಾಲ್ತುಳಿತ ಪ್ರಕರಣ, ಪ್ರಮುಖವಾಗಿ ಪರಿಶಿಷ್ಟ ಜಾತಿಗಳಲ್ಲಿನ ಒಳ ಮೀಸಲಾತಿಗೆ ಸಂಬಂಧಿಸಿದ ವಿವಾದಗಳನ್ನು ಒಗ್ಗಟ್ಟಿನಿಂದ ಸಮರ್ಥವಾಗಿ ನಿಭಾಯಿಸಿದ ಕಾಂಗ್ರೆಸ್ ಪಕ್ಷಕ್ಕೆ ಒಳಗಿನ ಬಣ ರಾಜಕೀಯಗಳನ್ನು ಜೀರ್ಣಿಸಿಕೊಳ್ಳಲಾಗುತ್ತಿಲ್ಲ. ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಉಚ್ಚಾಟನೆಗೊಳಿಸಿದ ಬಳಿಕ ಶಿಸ್ತು, ಸಂಯಮ ಮರುಸ್ಥಾಪನೆಯಾಗಬಹುದು ಎಂಬ ಅಂದಾಜುಗಳಿದ್ದವು. ಅದಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್‍ನಲ್ಲಿ ಮುಸುಕಿನ ಗುದ್ದಾಟ ಹೆಚ್ಚಾಗುತ್ತಿದೆ.

    ವಿಧಾನಪರಿಷತ್ ಸದಸ್ಯರ ನೇಮಕಾತಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವೆ ಒಮತ ಸಾಧ್ಯವಾಗಿಲ್ಲ. ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಸಹೋದರ ಡಿ.ಕೆ.ಸುರೇಶ್ ಅವರನ್ನು ಪ್ರತಿಷ್ಠಾಪಿಸುವ ಮೂಲಕ ಡಿ.ಕೆ. ಶಿವಕುಮಾರ್ ವಿಧಾನಪರಿಷತ್ ಸದಸ್ಯರ ಆಯ್ಕೆಗೆ ಸಮ್ಮತಿಸಲಿದ್ದಾರೆ ಎಂಬ ಚರ್ಚೆಗಳಿವೆ. ಆದರೆ ಕೆಎಂಎಫ್‍ನ ಅಧ್ಯಕ್ಷರ ಚುನಾವಣೆ ಇನ್ನೂ ದೂರ ಇರುವುದರಿಂದ ವಿಧಾನಮಂಡಲದ ಅಧಿವೇಶನದ ಬಳಿಕ ವಿಧಾನ ಪರಿಷತ್ತಿನ ಸದಸ್ಯರ ನೇಮಕವಾಗಬೇಕು ಎಂಬ ಒತ್ತಡಗಳು ಕೇಳಿ ಬರುತ್ತಿವೆ.

    ಖಾಲಿ ಇರುವ ನಿಗಮ-ಮಂಡಳಿಗೆ ಅಧ್ಯಕ್ಷರ ಪಟ್ಟಿಯನ್ನು ಈಗಾಗಲೇ ಸಿದ್ಧಪಡಿಸಲಾಗಿದ್ದು, ಅಧಿವೇಶನದ ಬಳಿಕ ನೇಮಕಾತಿಯಾಗುವ ಸಾಧ್ಯತೆಗಳಿವೆ. ನಿಗಮ ಮಂಡಳಿಗಳಿಗೆ ಸದಸ್ಯರು ಮತ್ತು ನಿರ್ದೇಶಕರ ನೇಮಕಾತಿ ಈವರೆಗೂ ಸಾಧ್ಯವಾಗಿಲ್ಲ. ಮೊದಲ ಅವಧಿಯ ಅಧ್ಯಕ್ಷರುಗಳ ಅವಧಿ ಮುಕ್ತಾಯವಾಗುತ್ತಾ ಬಂದಿದ್ದು, ಎರಡನೇ ಅವಧಿಗೆ ಅಧ್ಯಕ್ಷರನ್ನು ನೇಮಿಸಿದಾಗ ಅದರ ಜೊತೆಯಲ್ಲೇ ಸದಸ್ಯರು ಹಾಗೂ ನಿರ್ದೇಶಕರನ್ನು ನೇಮಿಸಬಹುದು ಎಂಬ ವದಂತಿಗಳಿವೆ.

    ಸಚಿವ ಸಂಪುಟದಿಂದ ವಜಾಗೊಂಡ ಬಳಿಕ ಸಚಿವ ರಾಜಣ್ಣ ಪೆಟ್ಟುತಿಂದ ಹುಲಿಯಂತಾಗಿದ್ದು, ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಎದುರು ತಮ್ಮ ವಿರುದ್ಧ ನಡೆದಿರುವ ಷಡ್ಯಂತ್ರ ಕುರಿತು ದೂರು ನೀಡಲಿದ್ದಾರೆ ಎಂದು ಹೇಳಲಾಗಿದೆ.

    ಧರ್ಮಸ್ಥಳದ ವಿಚಾರವಾಗಿ ಕಾಂಗ್ರೆಸ್‍ನಲ್ಲಿನ ಒಂದು ಬಣ ಅಷ್ಟೇ ತನಿಖೆ ನಡೆಸಬೇಕು ಎಂದು ಪಟ್ಟು ಹಿಡಿದಿದೆ. ತನಿಖೆ ನಡೆಯುತ್ತಿರುವುದು ಅಲ್ಲಿನ ಅಸಹಜ ಸಾವುಗಳ ಬಗ್ಗೆ ವಿರೋಧ ಪಕ್ಷಗಳು, ಧರ್ಮಸ್ಥಳ ವಿರುದ್ಧ ತನಿಖೆ ಎಂಬ ಅಭಿಪ್ರಾಯ ಮೂಡಿಸಲು ಯತ್ನಿಸುತ್ತಿವೆ, ಇದು ಕಾಂಗ್ರೆಸ್ ಪಕ್ಷಕ್ಕೆ ಹಾನಿಯಾಗಲಿದೆ. ಹೀಗಾಗಿ ಪಕ್ಷದ ವತಿಯಿಂದಲೇ ಪ್ರತ್ಯೇಕವಾದ ಜಾಥಾ ನಡೆಸಿ ಎಸ್‍ಐಟಿ ತನಿಖೆಗೂ, ಧರ್ಮಸ್ಥಳಕ್ಕೂ, ಧರ್ಮಾಧಿಕಾರಿಗೂ ಯಾವುದೇ ಸಂಬಂಧವಿಲ್ಲ ಎಂದು ಘಂಟಾಗೋಷವಾಗಿ ಹೇಳಬೇಕು.

    ಈ ಮೂಲಕ ಶ್ರೀ ಸಾಮಾನ್ಯರಲ್ಲಿರುವ ಅನುಮಾನಗಳಿಗೆ ಉತ್ತರ ನೀಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಸರ್ಕಾರವೇ ಒಂದು ಕಡೆ ತನಿಖೆ ನಡೆಸಿ, ಮತ್ತೊಂದು ಕಡೆ ರ್ಯಾಲಿಯನ್ನು ಮಾಡಿದರೆ ಅದು ಅತ್ಯಂತ ಹಾಸ್ಯಾಸ್ಪದವಾಗುತ್ತದೆ. ಈ ರೀತಿಯ ವರ್ತನೆ ಬೇಡ ಎಂದು ಪ್ರಮುಖ ನಾಯಕರು ತಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

    ಇನ್ನೂ ಒಳಮೀಸಲಾತಿಗೆ ಸಂಬಂಧಪಟ್ಟಂತಹ ವಿಚಾರದಲ್ಲಿ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳ ಬಗ್ಗೆ ನಿನ್ನೆ ವಿಧಾನ ಮಂಡಲದ ಉಭಯ ಸದನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿವರಣೆ ನೀಡಿದ್ದಾರೆ.

    ಒಳಮೀಸಲಾತಿಯಲ್ಲಿ ಸರ್ಕಾರ ತೆಗೆದುಕೊಂಡಿರುವ ತೀರ್ಮಾಣಕ್ಕೆ ಪರಿಶಿಷ್ಟರಲ್ಲಿನ ಎಲ್ಲಾ ಜಾತಿಗಳು ಸಹಮತ ವ್ಯಕ್ತಪಡಿಸಿವೆ ಎಂದು ಬಿಂಬಿಸಲಾಗಿದೆ. ಅದರೆ ಪರಿಶಿಷ್ಟ ಜಾತಿಯ ಲಂಬಾಣಿ, ಬೋವಿ ಸಮುದಾಯಗಳು ಸರ್ಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ್ದು ಪ್ರತಿಭಟನೆಯ ಮಾರ್ಗ ಹಿಡಿದಿವೆ. ಎಡಗೈ ಸಮುದಾಯ ಕೂಡ ತಮಗೆ ಸಿಕ್ಕಿರುವ ಪಾಲಿನಲ್ಲಿ ಕಡಿಮೆಯಾಗಿದೆ ಎಂದು ಅಸಹನೆ ವ್ಯಕ್ತಪಡಿಸುತ್ತಿದೆ.

    ರಾಜಣ್ಣ ಅವರನ್ನು ಸಂಪುಟದಿಂದ ಕೈ ಬಿಟ್ಟ ಬಳಿಕ ಪರಿಶಿಷ್ಟ ಪಂಗಡಗಳ ಮತದಾರರರು ಕಾಂಗ್ರೆಸ್‍ನಿಂದ ವಿಮುಖರಾಗುವ ಸಾಧ್ಯತೆಯಿದೆ. ಒಳಮೀಸಲಾತಿಯ ನಿರ್ಧಾರದಿಂದ ಲಂಬಾಣಿ. ಬೋವಿ, ಎಡಗೈ ಸಮುದಾಯಗಳು ಕಾಂಗ್ರೆಸ್‍ನಿಂದ ಮತ್ತಷ್ಟು ದೂರವಾಗುವ ಸನ್ನಿವೇಶ ಕಂಡುಬರುತ್ತಿದೆ. ಈ ಎಲ್ಲಾ ಗೊಂದಲಗಳು ಕಾಂಗ್ರೆಸ್‍ನಲ್ಲಿ ಗೋಜಲಿನ ವಾತಾವರಣ ನಿರ್ಮಿಸಿವೆ.

    ವಿರೋಧ ಪಕ್ಷಗಳನ್ನು ಸಮರ್ಥವಾಗಿ ನಿಭಾಯಿಸಿದ ಕಾಂಗ್ರೆಸ್ ಸರ್ಕಾರಕ್ಕೆ ಪಕ್ಷದ ಒಳವಲಯದಲ್ಲಿನ ಬೇಗುದಿಯನ್ನು ಬಗೆಹರಿಸಿ ಒಮ್ಮತ ಮೂಡಿಸಲು ಸಾಧ್ಯವಾಗುತ್ತಿಲ್ಲ. ವಿಧಾನ ಮಂಡಲದ ಅಧಿವೇಶನದ ಬಳಿಕ ಆಂತರಿಕ ಅಸಮಾಧಾನದ ಹೊಗೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಗಳಿವೆ.

    ಧರ್ಮಸ್ಥಳ: ಯೂಟ್ಯೂಬರ್ ಸಮೀರ್ ಎಂಡಿಗೆ ಜಾಮೀನು ನೀಡಿದ ಕೋರ್ಟ್

    ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್‌ ಮಾಡಿ


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading