ಉಡುಪಿ: ಅಡಗಿರುವ ನಕ್ಸಲರಿಗೆ ಕೂಡಲೇ ಶರಣಾಗಿ ಇಲ್ಲದಿದ್ದರೆ ಕಾರ್ಯಾಚರಣೆ ಮಾಡುತ್ತೇವೆ ಎಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಪ್ರಣಬ್ ಮೊಹಂತಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ನಿಮಗೆ ಶರಣಾಗತಿಯೊಂದೇ ದಾರಿ ಎಂಬ ಸಂದೇಶ ರವಾನಿಸಿರುವ ಪ್ರಣಬ್ ಮೊಹಂತಿ ಅವರು, ಕಾಡಿನಲ್ಲಿ ಅಡಗಿರುವ ನಕ್ಸಲರಿಗೆ ಎಚ್ಚರಿಕೆ ನೀಡಿದ್ದಾರೆ.
ಎನ್‌ಕೌಂಟರ್ ನಡೆದ ಸ್ಥಳಕ್ಕೆ ಭೇಟಿ ನೀಡಿ ಫಟನೆ ಬಗ್ಗೆ ಪೂರ್ಣ ಮಾಹಿತಿ ಪಡೆದ ಅವರು, ನೀವು ಎಲ್ಲೇ ಅಡಗಿದ್ದರೂ ನಾವು ಬಿಡಲ್ಲ. ನಾವು ನಿಮ್ಮ ವಿರುದ್ಧ ಕಾರ್ಯಾಚರಣೆ ನಡೆಸುವ ಮೊದಲು ನೀವೇ ಬಂದು ಶರಣಾಗಿ. ಇಲ್ಲದಿದ್ದರೆ ನಮಗೆ ಕಾರ್ಯಾಚರಣೆ ಹೊರತು ಬೇರೆ ದಾರಿಯಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಇನ್ನು ಪೀತಬೈಲ್, ಕಬ್ಬನಾಲೆ ಬಚ್ಚಪ್ಪು ಪರಿಸರದಲ್ಲಿ ಕೂಂಬಿಂಗ್ ಕಾರ್ಯಾಚರಣೆ ಚುರುಕುಗೊಂಡಿದ್ದು, ಡಿಜಿಪಿ ಪ್ರಣಬ್ ಮೊಹಂತಿ ಸೂಚನೆ ಮೇರೆಗೆ ಕೂಂಬಿಂಗ್ ಕಾರ್ಯಾಚರಣೆ ಮತ್ತಷ್ಟು ಚುರುಕಾಗಿದೆ ಎನ್ನಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


