ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಬಹು ನಿರೀಕ್ಷಿತ ಯುಐ ಸಿನಿಮಾ ನಿನ್ನೆಯಷ್ಟೇ ಬಿಡುಗಡೆಯಾಗಿದೆ. ಚಿತ್ರ ನೋಡಿದ ಸಿನಿ ರಸಿಕ ಚಿತ್ರಕ್ಕೆ ಫುಲ್ ಮಾರ್ಕ್ಸ್ ಕೊಟ್ಟಿದ್ದು, ಚಿತ್ರದ ಕೈ ಹಿಡಿದಿದ್ದಾನೆ. 9 ವರ್ಷಗಳ ಬಳಿಕ ಡೈರೆಕ್ಟರ್ ಹ್ಯಾಟ್ ತೊಟ್ಟಿರುವ ಉಪೇಂದ್ರ ಗೆಲುವು ಕಂಡಿದ್ದಾರೆ.
ಹೀಗೆ ಪ್ರೇಕ್ಷಕನಿಗೆ ಸಿನಿಮಾ ಇಷ್ಟವಾಗುವಂತೆ ಚಿತ್ರ ಕಟ್ಟಿಕೊಡುವದಲ್ಲಿ ಗೆದ್ದಿರುವ ಯುಐ ಚಿತ್ರತಂಡ ಬಾಕ್ಸ್ ಆಫೀಸ್‌ನಲ್ಲಿ ಗೆಲ್ಲುತ್ತಾ ಎಂಬ ಪ್ರಶ್ನೆ ಎದ್ದಿತ್ತು. ಬಿಡುಗಡೆಗೂ ಮುನ್ನ ಭರ್ಜರಿ ಮುಂಗಡ ಬುಕಿಂಗ್ ಅನ್ನೂ ಸಹ ಪಡೆದುಕೊಂಡಿದ್ದ ಯುಐ ಮೊದಲ ದಿನದುದ್ದಕ್ಕೂ ಹಲವೆಡೆ ಹೌಸ್‌ಫುಲ್ ಪ್ರದರ್ಶನಗಳನ್ನು ಕಂಡಿದೆ.
ಚಿತ್ರವನ್ನು ಮೊದಲ ಪ್ರದರ್ಶನ ವೀಕ್ಷಿಸಿ ಹೊರಬಂದ ಸಿನಿ ರಸಿಕರು ಚಿತ್ರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕಾರಣ ನಂತರದ ಪ್ರದರ್ಶನಗಳ ಬುಕಿಂಗ್ ಭರ್ಜರಿಯಾಗಿದ್ದು, ಮೊದಲ ದಿನ ಚಿತ್ರ ಎಷ್ಟು ಗಳಿಸಿರಬಹುದು ಎಂಬ ಲೆಕ್ಕಾಚಾರಗಳು ನಡೆಯುತ್ತಿವೆ. ಇನ್ನು ಯುಐ ಚಿತ್ರತಂಡ ಮೊದಲ ದಿನದ ಗಳಿಕೆಯ ವಿವರವನ್ನು ಅಧಿಕೃತವಾಗಿ ಇನ್ನೂ ಘೋಷಿಸಿಲ್ಲ. ಆದರೆ ʼಸ್ಯಾಕ್‌ನಿಲ್ಕ್ʼ ಎಂಬ ಬಾಕ್ಸ್ ಆಫೀಸ್ ಟ್ರ್ಯಾಕಿಂಗ್ ವೆಬ್‌ಸೈಟ್ ಯುಐ ಚಿತ್ರದ ಮೊದಲ ದಿನದ ಗಳಿಕೆಯ ಮಾಹಿತಿಯನ್ನು ಹಂಚಿಕೊಂಡಿದೆ.
ಈ ವೆಬ್‌ಸೈಟ್ ಪ್ರಕಾರ ಯುಐ ಮೊದಲ ದಿನ 6.75 ಕೋಟಿ ನೆಟ್ ಕಲೆಕ್ಷನ್ ಗಳಿಕೆ ಮಾಡಿದೆ ಎನ್ನಲಾಗಿದೆ. ಹೌದು, ಭಾರತದಾದ್ಯಂತ ಮೊದಲ ದಿನ ಯುಐ 6.75 ಕೋಟಿ ನೆಟ್ ಕಲೆಕ್ಷನ್ ಮಾಡಿದೆ ಎನ್ನಲಾಗಿದ್ದು, ಇದರ ಗ್ರಾಸ್ ಕಲೆಕ್ಷನ್ ಸುಮಾರು 10 ಕೋಟಿಯಷ್ಟಾಗಲಿದೆ. ಹೀಗಾಗಿ ಯುಐ ಮೊದಲ ದಿನ 10 ಕೋಟಿ ಗ್ರಾಸ್ ಕಲೆಕ್ಷನ್ ಮಾಡಿರುವ ಸಾಧ್ಯತೆಯಿದ್ದು, ಈ ವರ್ಷ ಬಿಡುಗಡೆಯಾದ ಕನ್ನಡ ಸಿನಿಮಾಗಳ ಪಾಲಿಗೆ ಇದು ಗರಿಷ್ಟ ಕಲೆಕ್ಷನ್ ಎನಿಸಿಕೊಂಡಿದೆ.
ಸ್ಯಾಕ್‌ನಿಲ್ಕ್ ಹಂಚಿಕೊಂಡಿರುವ ಯುಐ ಚಿತ್ರದ ನೆಟ್ ಕಲೆಕ್ಷನ್ 6.75 ಕೋಟಿ ರೂಪಾಯಿಗಳಾಗಿದ್ದು ಈ ಪೈಕಿ ಕರ್ನಾಟಕದಲ್ಲಿ 6 ಕೋಟಿ, ತೆಲುಗು 70 ಲಕ್ಷ, ತಮಿಳು 4 ಲಕ್ಷ ಹಾಗೂ ಹಿಂದಿ 1 ಲಕ್ಷ ಎನ್ನಲಾಗಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


