ದೇಶಿಯ ಮಿನಿ ಚುಟುಕು ಕ್ರಿಕೆಟ್ ಟೂರ್ನಿಗಳಲ್ಲಿ ಯಶಸ್ಸು ಕಂಡಿರುವ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್), ಸೀಸನ್ 18ರ ಆರಂಭಕ್ಕೆ ದಿನಾಂಕ ನಿಗದಿಯಾಗಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಈ ಟೂರ್ನಿ ಆರಂಭವಾಗಲಿದೆ.
ಮಾರ್ಚ್.14ರಿಂದ ಈ ಟೂರ್ನಿ ಆರಂಭವಾಗಲಿದ್ದು, ಮೇ ತಿಂಗಳ ಕೊನೆಯಲ್ಲಿ ಫೈನಲ್ ನಡೆಸಲು ಬಿಸಿಸಿಐ ತೀರ್ಮಾನಿಸಿದೆ. ಒಂದು ವೇಳೆ ಭಾರತ ತಂಡವು ವಿಶ್ವ ಚಾಂಪಿಯನ್ನ ಶಿಪ್ನಲ್ಲಿ ಫೈನಲ್ ತಲುಪಿದರೆ, ಇಂಡಿಯನ್ ಪ್ರೀಮಿಯರ್ ಲೀಗ್ ಫೈನಲ್ ಪಂದ್ಯವು ಮೇ.25ರಂದು ನಡೆಯಲಿದೆ ಎಂದು ಮಾಹಿತಿ ನೀಡಿದೆ.
ಜೂನ್.11ರಂದು ವಿಶ್ವ ಚಾಂಪಿಯನ್ ಶಿಪ್ನ ಫೈನಲ್ ಪಂದ್ಯ ನಡೆಯುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ. ಒಂದು ವೇಳೆ ಫೈನಲ್ ತಲುಪಲು ಭಾರತ ವಿಫಲವಾದರೆ ನಿಗದಿಯ ದಿನಾಂಕದಲ್ಲೇ ಐಪಿಎಲ್ ಪಂದ್ಯಗಳು ನಡೆಯಲಿವೆ.
ಇದಕ್ಕೂ ಮುನ್ನ ವುಮೆನ್ಸ್ ಪ್ರೀಮಿಯರ್ ಲೀಗ್ (WPL) ನಡೆಯಲಿದೆ. ಈ ಟೂರ್ನಿಯೂ ಫೆಬ್ರವರಿ.6ರಿಂದ ಶುರುವಾಗಲಿದ್ದು, ಮಾರ್ಚ್.9ರಂದು ಮುಗಿಯಲಿದೆ. ನಂತರ ಐಪಿಎಲ್ ಆರಂಭವಾಗಲಿದೆ.
ಈ ಬಾರಿಯ ಐಪಿಎಲ್ ಆರಂಭದ ಮೊದಲ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಗಳ ನಡುವೆ ನಡೆಯಲಿದೆ.
ಈ ವರ್ಷದ ಫೆಬ್ರವರಿ ತಿಂಗಳಿಂದ ಭಾರತದಲ್ಲಿ ಮಿನಿ ಚುಟುಕು ಕ್ರಿಕೆಟ್ ಹಬ್ಬ ರಂಗೇರಲಿದ್ದು, 10 ಟೀಮ್ಗಳ ನಡುವಿನ ಜಿದ್ದಾಜಿದ್ದಿನ ಕಾದಾಟ ಮೇ ಅಂತ್ಯದವರೆಗೆ ನಡೆಯಲಿದೆ.
ಈ ಬಾರಿ ವುಮೆನ್ಸ್ ಪ್ರೀಮೀಯರ್ ಲೀಗ್ ಹಾಗೂ ಇಂಡಿಯನ್ ಪ್ರೀಮಿಯರ್ ಲೀಗ್ ಒಂದರ ನಂತರ ಒಂದು ನಡೆಯಲಿದ್ದು, ಕ್ರಿಕೆಟ್ ಪ್ರೇಮಿಗಳಿಗೆ ಮನರಂಜನೆಯ ರಸದೌತಣ ಸಿಗಲಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


