ಬೆಂಗಳೂರು: ಹೈಕೋರ್ಟ್‌ಗೆ ಡಿಸೆಂಬರ್.20ರಿಂದ 31ರವರೆಗೆ ಎರಡು ವಾರ ಚಳಿಗಾಲದ ರಜೆ ಇರುತ್ತದೆ. ಹೊಸ ವರ್ಷದ ಮೊದಲ ದಿನ ರಜೆ ಇರಲಿದ್ದು, ಜನವರಿ.20ರಂದು ಘೋಷಿತ ರಜೆ ನೀಡಲಾಗಿದೆ. ಶನಿವಾರ, ಭಾನುವಾರ ವಾರಾಂತ್ಯ ರಜೆ ಇದ್ದು, ಅಧಿಕೃತವಾಗಿ ಜನವರಿ.5ರಿಂದ ಹೈಕೋರ್ಟ್ ಕಲಾಪ ಪುನರಾರಂಭಲಾಗಲಿದೆ.
ಡಿಸೆಂಬರ್.23, 26 ಹಾಗೂ 30ರಂದು ರಜಾ ಕಾಲದ ನ್ಯಾಯ ಪೀಠಗಳು ಕಾರ್ಯನಿರ್ವಹಿಸಲಿದೆ. ತುರ್ತು ಪ್ರಕರಣಗಳ ವಿಚಾರಣೆ ನಡೆಸಲಾಗುವುದು. ತುರ್ತು ಆದೇಶಗಳು, ತಡೆ ಆದೇಶಗಳು, ಮಧ್ಯಂತರ ನಿರ್ದೇಶನ ಮತ್ತಿತರ ಪ್ರಕರಣಗಳ ವಿಚಾರಣೆಯನ್ನು ಮಾತ್ರ ರಜಾಕಾಲೀನ ಪೀಠಗಳು ನಡೆಸಲಿವೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


