Wednesday, September 2, 2026
spot_img
More
    spot_img
    HomeLatest newsಆರೋಗ್ಯಕರ ಹಾಗೂ ರುಚಿಕರ:ಮಕ್ಕಳಿಂದ ವೃದ್ಧರವರೆಗೂ ಇಷ್ಟವಾಗುವ ಮಿಶ್ರಸೊಪ್ಪಿನ ತಾಲಿಪಟ್ಟು

    ಆರೋಗ್ಯಕರ ಹಾಗೂ ರುಚಿಕರ:ಮಕ್ಕಳಿಂದ ವೃದ್ಧರವರೆಗೂ ಇಷ್ಟವಾಗುವ ಮಿಶ್ರಸೊಪ್ಪಿನ ತಾಲಿಪಟ್ಟು

    ಮಕ್ಕಳ‌ ಪಾಲಿಗಂತೂ ತಿಂಡಿ ರುಚಿ, ಪೋಷಕಾಂಶದ ಜೊತೆಗೆ ನೋಡಲು ಆಕರ್ಷಕವಾಗಿರಬೇಕು,ಮುಂಜಾನೆಯ ತಿಂಡಿಯನ್ನು (Breakfast) ಟೇಸ್ಟಿ ಮಾಡೋದರ ಜೊತೆಗೆ ನಾಲಿಗೆಗೆ ರುಚಿಯಾಗುವಂತೆ ಮಾಡೋ ಸವಾಲು ಕೂಡ ಅಮ್ಮಂದಿರ ಮೇಲಿದೆ.ಈ ರೆಸಿಪಿ ಅತ್ಯಂತ ಕಡಿಮೆ ಸಮಯದಲ್ಲಿ ರುಚಿಯಾಗಿ, ಪೋಷಕಾಂಶ‌ಭರಿತವಾಗಿ ಹಾಗೂ ನೋಡಲು ಆಕರ್ಷಕವಾಗಿ ಹಾಗೂ ನಾಲಿಗೆಯಲ್ಲಿ ನೀರೂರಿಸುವಂತೆ ಸಿದ್ಧವಾಗುತ್ತದೆ,ಮನೆಗಳಲ್ಲಿ ಮಕ್ಕಳು ತರಕಾರಿ ಅಂದ್ರೆ ದೂರ ಓಡಿ ಹೋಗುತ್ತಾರೆ. ಕೆಲ ಮಕ್ಕಳಂತೂ ಊಟದಲ್ಲಿ ತರಕಾರಿ ತೆಗೆದು ಊಟ ಮಾಡುತ್ತಾರೆ. ಹಾಗಾಗಿ ತರಕಾರಿ ಬೇಡ ಅಂತ ಹೇಳುವ ಮಕ್ಕಳು, ಬಾಯಿಗೆ ರುಚಿ ಇಲ್ಲ ಎಂದು ಗೊಣಗುವ ವೃದ್ಧರಿಗೆ ಇಷ್ಟವಾಗುವಂತಹ ಪೌಷ್ಠಿಕಾಂಶನಿಂದ ಕೂಡಿದ ತಾಲಿಪಟ್ಟು ಮಾಡಿ. ಇದು ಆರೋಗ್ಯ ಮತ್ತು ರುಚಿಕರವಾಗಿರುತ್ತದೆ.ಜೊತೆಗೆ ತರಕಾರಿ ತಿನ್ನಲು ಇಷ್ಟಪಡದ ಮಕ್ಕಳಿಗೆ ತರಕಾರಿಯನ್ನು ತಿನ್ನಿಸಬಹುದು.ಬೆಳಿಗ್ಗಿನ ತಿಂಡಿಗೆ ದಿನಾ ಇಡ್ಲಿ, ದೋಸೆ, ಉಪ್ಪಿಟ್ಟು ತಿಂದು ಬೇಜಾರಾದವರು ಒಮ್ಮೆ ರುಚಿಕರವಾದ ಹಿಟ್ಟು,ತರಕಾರಿ ಮಿಶ್ರಿತ ತಾಲಿಪಟ್ಟು ಮಾಡಿ ಸವಿಯಿರಿ. ಮಾಡುವುದಕ್ಕೂ ಅಷ್ಟೇನೂ ಕಷ್ಟವಿಲ್ಲ. ಜತೆಗೆ ತಿನ್ನುವುದಕ್ಕೆ ರುಚಿಕರ ಹಾಗೂ ಆರೋಗ್ಯಕರವಾಗಿರುತ್ತದೆ. ಅಂತಹ ಈಸಿ ಹಾಗೂ ಹೆಲ್ದಿ ರೆಸಿಪಿ(Healthy recipe) ಇಲ್ಲಿದೆ ನೋಡಿ..

    Advertisement

    ಮಿಶ್ರಸೊಪ್ಪಿನ ತಾಲಿಪಟ್ಟು ಮಾಡಲು ಬೇಕಾಗುವ ಸಾಮಾಗ್ರಿಗಳು

    ಅಕ್ಕಿಹಿಟ್ಟು – 2 ಬೌಲ್/ 1/2 ಕಪ್ ಗೋಧಿ ಹಿಟ್ಟು , 1/2 ಕಪ್ ಕಡಲೇ ಹಿಟ್ಟು, 1/2 ಕಪ್ ರಾಗಿ ಹಿಟ್ಟು

    ಚಿಕ್ಕದಾಗಿ ಹೆಚ್ಚಿದ ಈರುಳ್ಳಿ – 1 ಸಣ್ಣ ಬೌಲ್

    ತುರಿದ ಸೌತೆಕಾಯಿ – 1 ಸಣ್ಣ ಬೌಲ್

    ತುರಿದ ಕ್ಯಾರೆಟ್ – 1 ಸಣ್ಣ ಬೌಲ್

    ತೆಂಗಿನತುರಿ – 4-5 ಸ್ಪೂನ್

    ಪಾಲಾಕ್ ಸೊಪ್ಪು 1 ಕಪ್ ಸಣ್ಣಗೆ ಹಚ್ಚಿಟ್ಟುಕೊಂಡಿದ್ದು,

    ಮೆಂತೆ ಸೊಪ್ಪು 1 ಕಪ್ ಸಣ್ಣಗೆ ಹಚ್ಚಿಟ್ಟುಕೊಂಡಿದ್ದು,

    ಕೊತ್ತಂಬರಿ ಸೊಪ್ಪು-1/4 ಕಪ್,

    ಹಸಿಮೆಣಸಿನಕಾಯಿ+ ಶುಂಠಿ ಪೇಸ್ಟ್ – 2 ಸ್ಪೂನ್

    ಉಪ್ಪು – ರುಚಿಗೆ ತಕ್ಕಷ್ಟು

    ಎಣ್ಣೆ – ಅಗತ್ಯಕ್ಕೆ ತಕ್ಕಷ್ಟು

    ಮಿಶ್ರಸೊಪ್ಪಿನ ತಾಲಿಪಟ್ಟು ಮಾಡುವ ವಿಧಾನ:

    ಅಕ್ಕಿಹಿಟ್ಟಿಗೆ ಈರುಳ್ಳಿ,ಗೋಧಿ ಹಿಟ್ಟು ಕಡಲೇ ಹಿಟ್ಟು ರಾಗಿ ಹಿಟ್ಟು ಸವತೆಕಾಯಿ,ಕ್ಯಾರೇಟ್,ಉಪ್ಪು,ಹಸಿಮೆಣಸು+ಶುಂಠಿ ಪೇಸ್ಟ್ ,ತೆಂಗಿನತುರಿ,ಪಾಲಾಕ್ ಸೊಪ್ಪು,ಮೆಂತೆ ಸೊಪ್ಪು, ಕೊತ್ತಂಬರಿ ಸೊಪ್ಪು ಹಸಿಮೆಣಸಿನಕಾಯಿ+ ಶುಂಠಿ ಪೇಸ್ಟ್ಹಾಕಿ ಚೆನ್ನಾಗಿ ಕಲೆಸಿ.‌ಜಾಸ್ತಿ‌ನೀರು ಬೆರೆಸುವುದು ಬೇಡ. ಈರುಳ್ಳಿ ಮತ್ತು ಸವತೆಕಾಯಿಯಲ್ಲಿರೋ ನೀರಿನಂಶ ಹಿಟ್ಟಿನ ಜೊತೆ ಬೆರೆತುಕೊಳ್ಳುವುದರಿಂದ ಹಿಟ್ಟು ಮೃದುವಾಗುತ್ತದೆ.ಬಳಿಕ ಲಿಂಬೆ ಗಾತ್ರದ ಉಂಡೆ ಮಾಡಿಕೊಂಡು ಇದನ್ನು ಬಾಳೆ ಎಲೆ ಅಥವಾ ರೊಟ್ಟಿ ತಟ್ಟುವ ಪ್ಲಾಸ್ಟಿಕ್ ಹಾಳೆಯ ಮೇಲೆ ತೆಳ್ಳಗೆ ತಟ್ಟಿ ಸಣ್ಣ ಉರಿಯಲ್ಲಿ ಬೇಯಿಸಿಕೊಳ್ಳಬೇಕು.ಈ ವೇಳೆ ಎಣ್ಣೆ ಅಥವಾ ತುಪ್ಪ ಹಚ್ಚಿದ್ರೆ ತಾಲಿಪಟ್ಟು ಮತ್ತಷ್ಟು ಗರಿ ಗರಿ ಆಗಿರುತ್ತದೆ ಈಗ ಹಿಟ್ಟು,ತರಕಾರಿ ಮಿಶ್ರಿತ ತಾಲಿಪಟ್ಟು ಸಿದ್ಧವಾಗುತ್ತದೆ. ಮೊಸರು ಅಥವಾ ಕಾಯಿ ಚಟ್ನಿ ಜೊತೆ ಸವಿದರೆ ತಾಲಿಪಟ್ಟಿನ ರುಚಿ ಹೆಚ್ಚಾಗುತ್ತದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading