Friday, August 7, 2026
spot_img
More
    spot_img
    HomeTop Storyಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಕರುನಾಡನ್ನು "ಕ್ರೈಂ ಸ್ಟೇಟ್‌ ಕರ್ನಾಟಕ"ವಾಗಿ ಬದಲಾಯಿಸಿದೆ: ಬಿಜೆಪಿ ಆಕ್ರೋಶ

    ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಕರುನಾಡನ್ನು “ಕ್ರೈಂ ಸ್ಟೇಟ್‌ ಕರ್ನಾಟಕ”ವಾಗಿ ಬದಲಾಯಿಸಿದೆ: ಬಿಜೆಪಿ ಆಕ್ರೋಶ

    ಬೆಂಗಳೂರು: ಭ್ರಷ್ಟ ಸಿದ್ದರಾಮಯ್ಯ ಸರ್ಕಾರ ಕರುನಾಡನ್ನು ಕ್ರೈಂ ಸ್ಟೇಟ್‌ ಕರ್ನಾಟಕವಾಗಿ ಬದಲಾಯಿಸಿದೆ ಎಂದು ಬಿಜೆಪಿ ಕಿಡಿಕಾರಿದೆ.

    Advertisement

    ಈ ಕುರಿತು ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿಯು ರಾಜ್ಯದಲ್ಲಿ ಒಂದೇ ವಾರದಲ್ಲಿ ನಡೆದ ಭಯಾನಕ ಕೃತ್ಯಗಳ ಪಟ್ಟಿ ಬಿಡುಗಡೆ ಮಾಡಿದೆ.

    ಒಂದೇ ವಾರದಲ್ಲಿ ನಡೆದ ಭಯಾನಕ ಕೃತ್ಯಗಳ ಪಟ್ಟಿ:

    ೧) ಚಾಮರಾಜಪೇಟೆಯಲ್ಲಿ ಹಸುಗಳ ಮೇಲೆ ವಿಕೃತಿ
    ೨) ಬೀದರ್‌ನಲ್ಲಿ ಹಾಡಹಗಲೇ ಎಟಿಎಂ ದರೋಡೆ
    ೩) ಮಂಗಳೂರಿನಲ್ಲಿ‌ ಭಯಾನಕ ಬ್ಯಾಂಕ್ ರಾಬರಿ
    ೪) ಹುಬ್ಬಳ್ಳಿಯಲ್ಲಿ ಕೆನರಾ ಬ್ಯಾಂಕ್‌ ದರೋಡೆ ಯತ್ನ
    ೫) ಮೈಸೂರಿನಲ್ಲಿ ಕಾರು ಅಡ್ಡಗಟ್ಟಿ ದರೋಡೆ
    ೬) ಹೊನ್ನಾವರದಲ್ಲಿ ಹಸುವಿನ ಹೊಟ್ಟೆ ಬಗೆದು ಕೃತ್ಯ
    ೭) ವಿಜಯಪುರದಲ್ಲಿ ಇಟ್ಟಿಗೆ ಭಟ್ಟಿ ಕಾರ್ಮಿಕರ ಮೇಲೆ ಹಲ್ಲೆ
    ೮) ಬೆಂಗಳೂರಿನ ಕೆ.ಆರ್‌.ಮಾರ್ಕೆಟ್‌ನಲ್ಲಿ ಮಹಿಳೆ ಮೇಲೆ ರೇಪ್

    ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಬಂದಿದೆ ಕ್ರೈಂ ತಂದಿದೆ, ಅರಾಜಕತೆ ಸೃಷ್ಟಿಸಿದೆ. ಏನಾಗ್ತಿದೆ ರಾಜ್ಯದಲ್ಲಿ? ರಾಜ್ಯ ಪೊಲೀಸ್ ಇಲಾಖೆ ಏನ್ಮಾಡ್ತಿದೆ? ಆಕಸ್ಮಿಕ ಗೃಹ ಸಚಿವ ಜಿ.ಪರಮೇಶ್ವರ್‌ ಅವರೇ, ಮೊದಲು ರಾಜೀನಾಮೆ ನೀಡಿ ಎಂದು ಟ್ವೀಟ್‌ನಲ್ಲಿ ಆಗ್ರಹಿಸಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading