ನಿನ್ನೆ ( ಜನವರಿ 21 ) ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಅಧ್ಯಕ್ಷತೆಯಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆದಿದ್ದು, ಬಿಜೆಪಿ ಕೋರ್ ಕಮಿಟಿ ಸದಸ್ಯ ಹಾಗೂ ಮಾಜಿ ಶಾಸಕ ಶ್ರೀ ರಾಮುಲು ಪಕ್ಷ ಬಿಡುತ್ತೇನೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ದಾಸ್ ಅಗರ್ವಾಲ್ ಸಂಡೂರು ಉಪ ಚುನಾವಣೆ ಕುರಿತು ಮಾತನಾಡಿ ಶ್ರೀರಾಮುಲು ಅವರು ಕೆಲಸ ಮಾಡಿಲ್ಲ ಎಂದು ದೂರು ಬಂದಿದೆ ಎಂದು ಆರೋಪಿಸಿದ್ದು, ಈ ಹೇಳಿಕೆಯ ವಿರುದ್ಧ ರಾಮುಲು ಮಾತನಾಡಿದ್ದಾರೆ.
ಈ ಆರೋಪವನ್ನು ಸಹಿಸದ ಶ್ರೀರಾಮುಲು ನಾನು ಪಕ್ಷಕ್ಕಾಗಿ ದುಡಿದಿದ್ದೇನೆ, ಕಷ್ಟಪಟ್ಟು ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದೇನೆ, ನನ್ನಿಂದ ಅಸಮಾಧಾನ ಇದ್ದರೆ ಪಕ್ಷ ಬಿಡುತ್ತೇನೆ, ನರೇಂದ್ರ ಮೋದಿ ಹಾಗೂ ಅಮಿತ್ ಶಾಗೆ ತಿಳಿಸಿ ನಂತರ ಪಕ್ಷ ಬಿಡುತ್ತೇನೆ ಎಂದು ಸಭೆಯಲ್ಲೇ ಹೇಳಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


