ಜಮ್ಮು ಕಾಶ್ಮೀರದಲ್ಲಿ ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಶ್ರೀನಗರ ಹಾಗೂ ಪಹಲ್ಗಾಮ್ನ ಜನನಿಬಿಡ ಪ್ರದೇಶಗಳಿಗೆ ನುಗ್ಗಿದ ಉಗ್ರರು ಏಕಾಏಕಿ ಸಿಕ್ಕ ಸಿಕ್ಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಪರಿಣಾಮ 30 ಮಂದಿ ಪ್ರವಾಸಿಗರು ಮೃತಪಟ್ಟಿದ್ದಾರೆ. ಇನ್ನು ಪ್ರವಾಸಕ್ಕೆಂದು ಹೋಗಿ ಕಾಶ್ಮೀರದ ಸೌಂದರ್ಯ ಆನಂದಿಸುತ್ತಿದ್ದ ಪ್ರವಾಸಿಗರು ತಮ್ಮ ಕುಟುಂಬ ಸದಸ್ಯರು ತಮ್ಮೆದುರೇ ಜೀವ ಬಿಡುವುದನ್ನು ನೋಡಿ ಗೋಳಾಡಿದ್ದಾರೆ.
ಇನ್ನು ಕರ್ನಾಟಕ ಮೂಲದ ಇಬ್ಬರು ಈ ದಾಳಿಯಲ್ಲಿ ಮೃತಪಟ್ಟಿದ್ದು, ಶಿವಮೊಗ್ಗ ಮೂಲದ ಉದ್ಯಮಿ ಮಂಜುನಾಥ್ ಎಂಬುವವರು ಹಾಗೂ ಹಾವೇರಿ ಮೂಲದ ಭರತ್ ಭೂಷಣ್ ಎಂಬುವವರು ಉಗ್ರರ ದಾಳಿಗೆ ಬಲಿಯಾಗಿದ್ದಾರೆ.
ಈ ಪೈಕಿ ಮಂಜುನಾಥ್ ತಮ್ಮ ಪತ್ನಿ ಹಾಗೂ ಮಗನ ಜೊತೆ ಪ್ರವಾಸ ತೆರಳಿದ್ದು, ಮಂಜುನಾಥ್ ಅವರನ್ನು ಕಳೆದುಕೊಂಡ ಬೆನ್ನಲ್ಲೇ ಪತ್ನಿ ಪಲ್ಲವಿ ತನ್ನನ್ನೂ ಕೊಲ್ಲುವಂತೆ ಉಗ್ರನ ಬಳಿ ಕಣ್ಣೀರಿಡುತ್ತಾ ಕೇಳಿಕೊಂಡರಂತೆ. ಇದಕ್ಕೆ ಉತ್ತರಿಸಿದ ಆತ ʼಹೋಗಿ ಮೋದಿಗೆ ಹೇಳುʼ ಎಂದು ಅವಾಜ್ ಹಾಕಿ ಅಲ್ಲಿಂದ ತೆರಳಿದನಂತೆ. ಕೈನಲ್ಲಿ ಗನ್ ಹಿಡಿದು ಬಂದಿದ್ದ ಉಗ್ರ ತನ್ನ ಮುಂದೆಯೇ ಪತಿಯನ್ನು ಸಾಯಿಸಿದ ಬಳಿಕ ಈ ಮಾತನ್ನು ಹೇಳಿದ ಭೀಕರ ಸನ್ನಿವೇಶವನ್ನು ಪತ್ನಿ ಪಲ್ಲವಿ ಬಿಚ್ಚಿಟ್ಟಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


