ಜಮ್ಮು ಕಾಶ್ಮೀರದ ಪ್ರವಾಸಿ ತಾಣಗಳಲ್ಲಿ ಒಂದಾದ ಪಹಲ್ಗಾಮ್ನಲ್ಲಿ ಏಕಾಏಕಿ ಜನನಿಬಿಡ ಪ್ರದೇಶಗಳಿಗೆ ನುಗ್ಗಿದ ಉಗ್ರರು ಸಿಕ್ಕ ಸಿಕ್ಕ ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಕುಟುಂಬಸ್ಥರು ಎಷ್ಟೇ ಬೇಡಿಕೊಂಡರೂ ಕಿವಿಗೊಡದ ಉಗ್ರರು ಅವರ ಕಣ್ಣೆದುರೇ ಗುಂಡಿಕ್ಕಿ ಅಟ್ಟಹಾಸ ಮೆರೆದಿದ್ದಾರೆ. ದಾಳಿಯಲ್ಲಿ ಇಲ್ಲಿಯವರೆಗೂ 27 ಮಂದಿ ಮೃತಪಟ್ಟಿದ್ದಾರೆ ಎನ್ನಲಾಗುತ್ತಿದ್ದು, ಕರ್ನಾಟಕ ಮೂಲದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಮೊದಲಿಗೆ ಶಿವಮೊಗ್ಗದ ಮಂಜುನಾಥ್ ಎಂಬ ಉದ್ಯಮಿ ಬಲಿಯಾದ ಸುದ್ದಿ ಬಂದಿತ್ತು. ಇದೀಗ ಹಾವೇರಿ ಮೂಲದ ಭರತ್ ಭೂಷಣ್ ಸಹ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಹಾವೇರಿ ಮೂಲದವರಾದರೂ ಬೆಂಗಳೂರಿನಲ್ಲಿ ಭರತ್ ಭೂಷಣ್ ವಾಸವಿದ್ದರು. ಇವರು ಕಾಂಗ್ರೆಸ್ ನಾಯಕ ಹಾಗೂ ವಿಧಾನಸಭೆಯ ಮಾಜಿ ಸ್ಪೀಕರ್ ಕೆ. ಬಿ ಕೋಳಿವಾಡ ಅವರ ಸಂಬಂಧಿ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


