Tuesday, November 10, 2026
spot_img
More
    spot_img
    HomeSportsCricketIPL 2025: ಅಭಿಷೇಕ್‌ ಪೊರೆಲ್‌, ರಾಹುಲ್‌ ಅರ್ಧಶತಕ; ಲಕ್ನೋ ವಿರುದ್ಧ ಡೆಲ್ಲಿಗೆ ಸುಲಭ ಜಯ

    IPL 2025: ಅಭಿಷೇಕ್‌ ಪೊರೆಲ್‌, ರಾಹುಲ್‌ ಅರ್ಧಶತಕ; ಲಕ್ನೋ ವಿರುದ್ಧ ಡೆಲ್ಲಿಗೆ ಸುಲಭ ಜಯ

    ಲಕ್ನೋ: ಏಕನ ಕ್ರೀಡಾಂಗಣದಲ್ಲಿ ನಡೆದ ಲಕ್ನೋ ಸೂಪರ್‌ ಜೈಂಟ್ಸ್‌ ಹಾಗೂ ಡೆಲ್ಲಿ ಕ್ಯಾಪಿಟಲ್ಸ್‌ ತಂಡಗಳ ನಡುವಿನ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ 8 ವಿಕೆಟ್‌ಗಳ ಸುಲಭ ಜಯ ಸಾಧಿಸಿದೆ.

    ಮೊದಲು ಬ್ಯಾಟಿಂಗ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 159 ರನ್ ಕಲೆಹಾಕಿದ್ದು ಎದುರಾಳಿ ಡೆಲ್ಲಿ ಕ್ಯಾಪಿಟಲ್ಸ್‌ ತಂಡಕ್ಕೆ 160 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್‌ 17.5 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 161 ರನ್‌ ಕಲೆಹಾಕಿದೆ.

    ಲಕ್ನೋ ಸೂಪರ್‌ ಜೈಂಟ್ಸ್‌ ಇನ್ನಿಂಗ್ಸ್:‌ ಲಕ್ನೋ ಪರ ಆರಂಭಿಕರಾಗಿ ಕಣಕ್ಕಿಳಿದ ಏಡನ್ ಮಾರ್ಕ್ರಮ್ ಹಾಗೂ ಮಿಚೆಲ್ ಮಾರ್ಷ್ 87 ರನ್‌ಗಳ ಜತೆಯಾಟವನ್ನಾಡಿ ಅಬ್ಬರವಿಲ್ಲದ ಆರಂಭ ಮಾಡಿದರು. ಮಾರ್ಕ್ರಮ್ 52 (33) ಹಾಗೂ ಮಾರ್ಷ್‌ 46 (36) ರನ್‌ ಕಲೆಹಾಕಿದರು. ಇನ್ನುಳಿದಂತೆ ನಿಕೋಲಸ್‌ ಪೂರನ್ ಕೇವಲ 9 (5), ಅಬ್ದುಲ್‌ ಸಮದ್‌ 2 (8), ಆಯುಷ್‌ ಬದೋನಿ 36 (21) ಡೇವಿಡ್‌ ಮಿಲ್ಲರ್‌ ಅಜೇಯ 14 (15) ರನ್‌ ಹಾಗೂ ಯಾವುದೇ ರನ್‌ ಗಳಿಸದ ಪಂತ್‌ ಅಜೇಯರಾಗಿ ಉಳಿದರು.

    ಡೆಲ್ಲಿ ಕ್ಯಾಪಿಟಲ್ಸ್ ಪರ ಮುಕೇಶ್ ಕುಮಾರ್ 4 ವಿಕೆಟ್, ದುಷ್ಮಂತ ಚಮೀರ ಹಾಗೂ ಮಿಚೆಲ್ ಸ್ಟಾರ್ಕ್ ತಲಾ ಒಂದೊಂದು ವಿಕೆಟ್ ಪಡೆದರು.

    ಡೆಲ್ಲಿ ಕ್ಯಾಪಿಟಲ್ಸ್‌ ಇನ್ನಿಂಗ್ಸ್:‌ ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್‌ ಪೊರೆಲ್‌ 51 (36) ಹಾಗೂ ಕರುಣ್‌ ನಾಯರ್‌ 15 (9) ರನ್‌ ಕಲೆಹಾಕಿದರು. ಕೆಎಲ್‌ ರಾಹುಲ್‌ ಅಜೇಯ 57 (42) ರನ್‌ ಹಾಗೂ ಅಕ್ಸರ್ ಪಟೇಲ್‌ ಅಜೇಯ 34 (20) ರನ್‌ ಬಾರಿಸಿದರು.

    ಲಕ್ನೋ ಸೂಪರ್‌ಜೈಂಟ್ಸ್‌ ಪರ ಏಡನ್‌ ಮಾರ್ಕ್ರಮ್‌ ಎರಡು ವಿಕೆಟ್‌ ಪಡೆದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search