ಬೆಂಗಳೂರು: ಧರ್ಮಸ್ಥಳ ಸರಣಿ ಕೊಲೆ ಹಾಗೂ ಅತ್ಯಾಚಾರ ಆರೋಪಗಳನ್ನು ಮಾಡಿದ ಅನಾಮಿಕ ವ್ಯಕ್ತಿಯೊಬ್ಬ ತಾನೇ ಹೆಣಗಳನ್ನು ಹೂತಿದ್ದಾಗಿ ಹೇಳಿಕೊಂಡಿದ್ದು, ದೂರು ನೀಡಿದ್ದ. ಈ ದೂರಿನ ಆಧಾರದ ಮೇಲೆ ರಾಜ್ಯ ಸರ್ಕಾರ ಎಸ್‌ಐಟಿ ರಚಿಸಿ ತನಿಖೆಗೆ ಆದೇಶವನ್ನು ನೀಡಿತ್ತು.
ಅದರಂತೆ ಎಸ್‌ಐಟಿ ತನಿಖೆ ನಡೆಸುತ್ತಿದ್ದು, ವಿಪಕ್ಷ ನಾಯಕ ಆರ್. ಅಶೋಕ್ ಎಸ್‌ಐಟಿ ತನಿಖೆ ರಚನೆಯಾದದ್ದರ ವಿರುದ್ಧ ಗಂಭೀರ ಆರೋಪವನ್ನು ಮಾಡಿದ್ದಾರೆ. ಮಾಸ್ಕ್‌ಮ್ಯಾನ್ ಓರ್ವ ಸುಳ್ಳುಗಾರ, ಆತನಿಗೆ ಮೂವರು ಹೆಂಡತಿಯರು ಎಂಬ ಅಂಶ ಬಯಲಾಗಿದೆ ಎಂದ ಅಶೋಕ್ ಅನನ್ಯ ಭಟ್ ಎಂಬಾಕೆಯೇ ಇಲ್ಲ ಎಂದರು.
ಅಲ್ಲದೇ ಇದೆಲ್ಲ ಕಮ್ಯೂನಿಸ್ಟ್‌ಗಳು ಸೇರಿಕೊಂಡು ಮಾಡಿರುವ ಸಂಚು ಎಂದು ಆರೋಪಿಸಿದ ಅಶೋಕ್ ಇದಕ್ಕೆಲ್ಲ ಸಿಎಂ ಸಿದ್ದರಾಮಯ್ಯ ಮಾಸ್ಟರ್‌ಮೈಂಡ್ ಎಂದರು. ಸಿದ್ದರಾಮಯ್ಯನವರ ಮನೆಯಲ್ಲೇ ಎಡಪಂಥೀಯರೆಲ್ಲ ಸೇರಿ ಸಭೆ ನಡೆಸಿ ಎಸ್‌ಐಟಿ ತನಿಖೆಯಾಗುವಂತೆ ಮಾಡಿದರು, ಎಸ್‌ಐಟಿಗೆ ಮೊಹಂತಿಯವರೇ ಬೇಕು ಎಂದೂ ಸಹ ಎಡಪಂಥೀಯರೇ ಹೇಳಿದರು ಎಂದು ಅಶೋಕ್ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಖಾಲಿ ಸೈಟ್ ಇದೆಯೇ? ಎಚ್ಚರ! ಹೊಸ ನಿಯಮ ಜಾರಿಗೆ ಬಂದ್ರೆ ಭಾರೀ ದಂಡ ಕಟ್ಟೋದು ಪಕ್ಕಾ!
ಎಐ ಕನ್ನಡ ಕೃಷಿ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


