ಬಂಗಾರ ದರದಲ್ಲಿ ಹಾವು ಏಣಿ ಆಟದಂತೆ ಏರಿಳಿತ ಆಗುತ್ತಲಿರುತ್ತದೆ. ಅದರಲ್ಲೂ ಶ್ರಾವಣ ಮಾಸದ ಆರಂಭದಿಂದಲೂ ಬೆಲೆ ಭರ್ಜರಿ ಇಳಿಕೆಯತ್ತ ಸಾಗುತ್ತಲೇ ಬಂದಿದೆ.ಎರಡು ವಾರಗಳ ನಂತರ ಮೊದಲ ಬಾರಿಗೆ ನಿನ್ನೆ ಏರಿಕೆಯಾದ ಚಿನ್ನದ ಬೆಲೆ (gold rates) ಇಂದು ಪುನಃ ಇಳಿಕೆಯ ಹಾದಿಗೆ ಇಳಿದಿದೆ. ಶುಕ್ರವಾರದ ಬೆಳಗಿನಲ್ಲಿ ಚಿನ್ನದ ಬೆಲೆ 10 ಗ್ರಾಮ್ 22 ಕ್ಯಾರಟ್ ಗೆ ₹92,150 ಮತ್ತು 24 ಕ್ಯಾರಟ್ ಅಪರಂಜಿ ಚಿನ್ನದ ಬೆಲೆ ₹1,00,530 ಆಗಿದೆ. ಇವತ್ತು ಚಿನ್ನದ ದರ ಗ್ರಾಮ್ಗೆ ₹15 ಮಾತ್ರವೇ ಇಳಿಕೆಯಾಗಿದೆ. ವಿದೇಶಿ ಮಾರುಕಟ್ಟೆಗಳಲ್ಲಿ ಹೆಚ್ಚಿನ ಬದಲಾವಣೆ ಕಂಡುಬಂದಿಲ್ಲ. ಸಿಂಗಾಪುರದಲ್ಲಿ ಮಾತ್ರ ತುಸು ಚಿನ್ನದ ಬೆಲೆ ಹೆಚ್ಚಿದೆ.ಆದರೆ, ಬೆಳ್ಳಿ ಬೆಲೆ ಭರ್ಜರಿ ಏರಿಕೆ ಕಂಡಿದ್ದು, ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಸಮೀಪಿಸಿದೆ. ಹಾಗಾದ್ರೆ ಇಂದು (ಆಗಸ್ಟ್ 22) ಕರ್ನಾಟಕ ರಾಜ್ಯದ ರಾಜಧಾನಿ ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ನಗರಗಳಲ್ಲಿ ಬಂಗಾರ, ಬೆಳ್ಳಿ ದರ ಎಷ್ಟಿದೆ ಎನ್ನುವ ಸಂಪೂರ್ಣ ಅಂಕಿಅಂಶಗಳ ಸಹಿತ ವಿವರವನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
ಭಾರತದಲ್ಲಿರುವ ಚಿನ್ನ ಮತ್ತು ಬೆಳ್ಳಿ ಬೆಲೆ (ಆಗಸ್ಟ್ 22ಕ್ಕೆ)
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,150 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,530 ರೂ
18 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 75,520 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,180 ರೂ
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
22 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 92,150 ರೂ
24 ಕ್ಯಾರಟ್ನ 10 ಗ್ರಾಂ ಚಿನ್ನದ ಬೆಲೆ: 1,00,530 ರೂ
ಬೆಳ್ಳಿ ಬೆಲೆ 10 ಗ್ರಾಂಗೆ: 1,180 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್ಗೆ)
ಬೆಂಗಳೂರು: 92,150 ರೂ
ಚೆನ್ನೈ: 92,150 ರೂ
ಮುಂಬೈ: 92,150 ರೂ
ದೆಹಲಿ: 92,300 ರೂ
ಕೋಲ್ಕತಾ: 92,150 ರೂ
ಕೇರಳ: 92,150 ರೂ
ಅಹ್ಮದಾಬಾದ್: 92,200 ರೂ
ಜೈಪುರ್: 92,300 ರೂ
ಲಕ್ನೋ: 92,300 ರೂ
ಭುವನೇಶ್ವರ್: 92,150 ರೂ
ಕಾಂಗ್ರೆಸ್ ನಾಯಕಿ ಕುಸುಮಾ ನಿವಾಸದ ಮೇಲೆ ಇ.ಡಿ. ದಾಳಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


