ಬೆಂಗಳೂರು: ಧರ್ಮಸ್ಥಳದಲ್ಲಿ ನಡೆಯುತ್ತಿರುವ ಎಸ್‌ಐಟಿ ತನಿಖೆ ಕುರಿತು ಸುದ್ದಿ ಮಾಡುವ ವಿಚಾರವಾಗಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪಗಳು ಕೇಳಿಬಂದಿದ್ದವು. ಸಮೀರ್ ಎಂಡಿ, ಯುನೈಟೆಡ್ ಮೀಡಿಯಾ ಸೇರಿದಂತೆ ಹಲವು ಚಾನೆಲ್‌ಗಳ ವಿರುದ್ಧ ಹಣ ಪಡೆದು ಧರ್ಮಸ್ಥಳದ ವಿರುದ್ಧ ವಿಡಿಯೊ ಮಾಡುತ್ತಿರುವುದಾಗಿ ಆರೋಪಗಳು ಬಂದಿದ್ದವು.
ಅದರಲ್ಲೂ ನಾನೊಬ್ಬ ಯುಟ್ಯೂಬರ್ ಎಂದು ಹೇಳಿಕೊಂಡು ಮುಂದೆ ಬಂದಿದ್ದ ಸುಮತ್ ಎಂಬಾತ ಯಟ್ಯೂಬರ್ ಚಂದನ್ ಗೌಡ ವಿರುದ್ಧ ಧರ್ಮಸ್ಥಳ ಅಪಪ್ರಚಾರಕ್ಕೆ 50 ಲಕ್ಷ ಹಣ ಪಡೆದಿದ್ದಾರೆ ಎಂದು ಗಂಭೀರ ಆರೋಪವನ್ನು ಮಾಡಿದ್ದ.
ಆದರೆ ಈ ರೀತಿ ಆರೋಪ ಮಾಡಿದ ಈತನೇ ಜನರ ಎದುರು ಬೆತ್ತಲಾಗಿ ಹೋಗಿದ್ದ. ತನ್ನ ಸ್ನೇಹಿತ ಚೇತನ್ ಎಂಬಾತನ ಜತೆ ಮೊಬೈಲ್ ಕರೆಯಲ್ಲಿ ಮಾತನಾಡುವ ವೇಳೆ ಸುಮಂತ್ ಚಂದನ್ ಗೌಡ ಹೆಸರನ್ನು ತಾನೇ ಬೇಕಂತಲೇ ಸೇರಿಸಿದೆ ಎಂದು ಹೇಳುವ ಮೂಲಕ ತಾನು ಮಾಡಿದ ಷಡ್ಯಂತ್ರವನ್ನು ಬಿಚ್ಚಿಟ್ಟದ್ದ.
ಈ ಆಡಿಯೊ ಲೀಕ್ ಆದ ಬೆನ್ನಲ್ಲೇ ಸುಮಂತ್ ಓರ್ವ ಸುಳ್ಳುಗಾರ ಹಾಗೂ ಮೋಸಗಾರ ಎಂದು ಜನರು ನಿರ್ಧರಿಸಿಬಿಟ್ಟರು. ಅಲ್ಲದೇ ಈತನ ಇನ್ನಷ್ಟು ಆಡಿಯೊಗಳು ವೈರಲ್ ಆಗಿ ಮೂರ್ನಾಲ್ಕು ದಿನಗಳ ಖ್ಯಾತಿಯ ಬಳಿಕ ನೆಲಕಚ್ಚಿದ್ದ.
ಹೀಗೆ ತನ್ನ ವಿರುದ್ಧ ಆರೋಪ ಮಾಡಿದ ಸುಮಂತ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದ ಚಂದನ್ ಗೌಡ ಈ ಎಲ್ಲ ಘಟನೆಗಳ ಬಳಿಕ ಯಾವುದೇ ವಿಡಿಯೊ ಮಾಡದೇ ಸುಮ್ಮನಿದ್ದರು. ಆದರೆ ಇದೀಗ ಈ ಕುರಿತು ಮತ್ತೊಂದು ವಿಡಿಯೊವನ್ನು ಹಂಚಿಕೊಂಡಿದ್ದು, ಸುಮಂತ್‌ಗೆ ಟಾಂಗ್ ಕೊಟ್ಟಿದ್ದಾರೆ.
ಧರ್ಮಸ್ಥಳದ ವಿರುದ್ಧ ಮಾತನಾಡುವುದಕ್ಕೆ 50 ಲಕ್ಷ ಹಣ ಎಂದೆಲ್ಲ ಕೇಳಿಬಂದ ಗಂಭೀರ ಆರೋಪಗಳೆಲ್ಲ ಗಾಳಿಯಲ್ಲಿ ಹುಳಗಳು ಹಾರಿಹೋದ ಹಾಗೆ ಹಾರಿಹೋದವು ಎಂದ ಚಂದನ್ ಗೌಡ ಯಾರು ನನ್ನನ್ನು 15 ದಿನಗಳಲ್ಲಿ ಬಟ್ಟೆ ಬಿಚ್ಚಿ ಬೆತ್ತಲೆ ಮಾಡಿ ನಿಲ್ಲಿಸುತ್ತೇವೆ ಎಂದುಕೊಂಡರು, ಭಾವಿಸಿದರು, ಭ್ರಮೆಯಲ್ಲಿ ಬದುಕಿದರು ಅವರೆಲ್ಲ ಇಂದು ಏನಾದರು ಎಂದು ನಾನು ಹೇಳಬೇಕಿಲ್ಲ, ನಿಮ್ಮ ಕಣ್ಣ ಮುಂದೆಯೇ ಇದೆ ಎಂದು ಸುಮಂತ್‌ಗೆ ಮತ್ತೊಮ್ಮೆ ಟಾಂಗ್ ಕೊಟ್ಟರು. ಆತನ ಇನ್ನಷ್ಟು ಆಡಿಯೊಗಳನ್ನು ನನ್ನ ಚಾನೆಲ್‌ನಲ್ಲೇ ಬಿಡಬಹುದಿತ್ತು, ಆತ ಕುಡಿದು ಹೊರಳಾಡಿದ ವಿಡಿಯೊ ಸಹ ನನಗೆ ಸಿಕ್ಕಿತ್ತು, ಅದನ್ನೂ ಸಹ ಬಿಡಬಹುದಿತ್ತು, ಆದರೆ ಆ ಕೆಲಸ ನಾನು ಮಾಡಲಿಲ್ಲ. ಅದು ಅವರ ವೈಯಕ್ತಿಕ ವಿಚಾರ, ಕುಡಿದು ತೂರಾಡುವ ವಿಡಿಯೊ ಹಂಚಿಕೊಂಡಿದ್ದರೆ ನನಗೂ ಆತನಿಗೂ ಏನು ವ್ಯತ್ಯಾಸ? ನಾನು ನನ್ನ ವಿರುದ್ಧ ಕೇಳಿಬಂದಿರುವ ಆರೋಪಗಳ ವಿರುದ್ಧ ಮಾತ್ರ ವಿಡಿಯೊ ಮಾಡುತ್ತೇನೆ ಎಂದರು.
ಅಲ್ಲದೇ ಸುಮಂತ್ ತನ್ನ ವಿರುದ್ಧ ಮಾಡಿದ ಆರೋಪವನ್ನು ಪ್ರಸಾರ ಮಾಡಿದ ಸುದ್ದಿ ಮಾಧ್ಯಮಗಳು ಸುಮಂತ್‌ನ ಆಡಿಯೊ ಲೀಕ್ ಆದಾಗಲೂ ಸಹ ಸುದ್ದಿಗಳನ್ನು ಮಾಡಬೇಕಿತ್ತು ಎಂದು ಪತ್ರಿಕಾಧರ್ಮದ ಪಾಠವನ್ನೂ ಸಹ ಮಾಡಿದರು.
ಗ್ರಾಚ್ಯುಟಿ ಎಂದರೇನು? ಲೆಕ್ಕ ಹಾಕುವ ವಿಧಾನ ಮತ್ತು ಪಡೆಯಲು ಬೇಕಾದ ಸೇವಾ ಅವಧಿ
ಎಐ ಅಡ್ವೋಕೇಟ್ ಅಸಿಸ್ಟೆಂಟ್ ವೆಬ್‌ಸೈಟ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


