ಇಂದಿನಿಂದ ( ನವೆಂಬರ್ 22) ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 5 ಪಂದ್ಯಗಳ ಬಾರ್ಡರ್ – ಗವಾಸ್ಕರ್ ಟ್ರೋಫಿಯಲ್ಲಿ ಭಾಗವಹಿಸುತ್ತಿದ್ದು, ಟೂರ್ನಿಯ ಪ್ರಥಮ ಪಂದ್ಯ ಪರ್ತ್ ಕ್ರೀಡಾಂಗಣದಲ್ಲಿ ನಡೆಯುತ್ತಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಬೌಲಿಂಗ್ ದಾಳಿಗೆ ತತ್ತರಿಸಿದ್ದು, 49.4 ಓವರ್‌ಗಳಲ್ಲಿ 150 ರನ್ ಕಲೆಹಾಕಿ ಆಲ್‌ಔಟ್ ಆಗಿದೆ.
ತಂಡದ ಪರ ರಿಷಭ್ ಪಂತ್, ಕೆಎಲ್ ರಾಹುಲ್ ಹಾಗೂ ನಿತಿಶ್ ರೆಡ್ಡಿ ಹೊರತುಪಡಿಸಿ ಉಳಿದ ಯಾವ ಆಟಗಾರನೂ ಸಹ ಇಪ್ಪತ್ತರ ಗಡಿ ದಾಟುವಲ್ಲಿ ಯಶಸ್ವಿಯಾಗಲಿಲ್ಲ.
ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್: ಯಶಸ್ವಿ ಜೈಸ್ವಾಲ್ 0, ಕೆಎಲ್ ರಾಹುಲ್ 26, ದೇವದತ್ ಪಡಿಕ್ಕಲ್ 0, ವಿರಾಟ್ ಕೊಹ್ಲಿ 5, ರಿಷಭ್ ಪಂತ್ 37, ಧ್ರುವ್ ಜುರೆಲ್ 11, ವಾಷಿಂಗ್ಟನ್ ಸುಂದರ್ 4, ನಿತಿಶ್ ರೆಡ್ಡಿ 41, ಹರ್ಷಿತ್ ರಾಣಾ 7, ಜಸ್‌ಪ್ರೀತ್ ಬುಮ್ರಾ 8 ರನ್ ಕಲೆಹಾಕಿದರು ಮತ್ತು ಯಾವುದೇ ರನ್ ಗಳಿಸದ ಮೊಹಮ್ಮದ್ ಸಿರಾಜ್ ಅಜೇಯರಾಗಿ ಉಳಿದರು.
ಆಸ್ಟ್ರೇಲಿಯಾ ಪರ ಜೋಶ್ ಹೇಜಲ್‌ವುಡ್ 4 ವಿಕೆಟ್, ಮಿಚೆಲ್ ಸ್ಟಾರ್ಕ್, ನಾಯಕ ಪ್ಯಾಟ್ ಕಮಿನ್ಸ್ ಹಾಗೂ ಮಿಚೆಲ್ ಮಾರ್ಷ್ ತಲಾ 2 ವಿಕೆಟ್ ಪಡೆದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


