Tuesday, November 10, 2026
spot_img
More
    spot_img
    HomeState2025ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ

    2025ರ ಸಾರ್ವತ್ರಿಕ ರಜಾ ದಿನಗಳ ಪಟ್ಟಿ ಬಿಡುಗಡೆಗೊಳಿಸಿದ ರಾಜ್ಯ ಸರ್ಕಾರ

    ಬೆಂಗಳೂರು: ರಾಜ್ಯ ಸರ್ಕಾರ 2025ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಬಿಡುಗಡೆ ಮಾಡಿದೆ.

    ನಾನಾ ಹಬ್ಬಗಳು ಸೇರಿದಂತೆ 2025ರಲ್ಲಿ ಒಟ್ಟು 19 ದಿನ ರಜೆ ಘೋಷಿಸಲಾಗಿದೆ. ಇನ್ನು ಏಪ್ರಿಲ್ ಮತ್ತು ಅಕ್ಟೋಬರ್ ತಿಂಗಳುಗಳಲ್ಲಿ ಹೆಚ್ಚಿನ ರಜೆಗಳಿವೆ.

    ಭಾನುವಾರಗಳಂದು ಗಣರಾಜ್ಯೋತ್ಸವ(ಜ.26), ಯುಗಾದಿ(ಮಾ.30), ಮೊಹರಂ ಕಡೆ ದಿನ(ಜು.6), ಮಹಾಲಯ ಅಮವಾಸ್ಯೆ(ಸೆ.21) ಮತ್ತು ಎರಡನೇ ಶನಿವಾರದಂದು ಕನಕದಾಸ ಜಯಂತಿ(ನ.8) ಬರುತ್ತವೆ. ಹಾಗಾಗಿ, ಆ ರಜೆಗಳ ಬಗ್ಗೆ ಈ ಪಟ್ಟಿಯಲ್ಲಿ ನಮೂದಿಸಿಲ್ಲ.

    ರಜಾ ಪಟ್ಟಿಯಲ್ಲಿ ಸೇರಿಸಲಾಗಿರುವ ಮುಸಲಾನ ಬಾಂಧವರ ಹಬ್ಬಗಳು ನಿಗದಿತ ದಿನಾಂಕದಂದು ಬೀಳದಿದ್ದರೆ, ಸರ್ಕಾರಿ ಸೇವೆಯಲ್ಲಿರುವ ಮುಸಲ್ಮಾನ ಬಾಂಧವರಿಗೆ ನಿಗದಿತ ರಜೆಗೆ ಬದಲಾಗಿ ಹಬ್ಬದ ದಿವಸ ರಜಾ ಮಂಜೂರು ಮಾಡಬಹುದಾಗಿದೆ.

    2025ನೇ ಸಾಲಿನ ಸರ್ಕಾರಿ ರಜಾ ದಿನಗಳು

    ಜನವರಿ 14-ಮಂಗಳವಾರ ಉತ್ತರಾಯಣ ಪುಣ್ಯಕಾಲ, ಮಕರ ಸಂಕ್ರಾಂತಿ
    ಫೆಬ್ರವರಿ 26 ಬುಧವಾರ , ಮಹಾಶಿವರಾತ್ರಿ
    ಮಾರ್ಚ್ 31 ಸೋಮವಾರ, ಖುತುಬ್-ಎ-ರಂಜಾನ್
    ಏಪ್ರಿಲ್ 10 ಗುರುವಾರ, ಮಹಾವೀರ ಜಯಂತಿ
    ಏಪ್ರಿಲ್ 14 ಸೋಮವಾರ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ
    ಏಪ್ರಿಲ್ 18 ಶುಕ್ರವಾರ ಗುಡ್ ಫ್ರೈಡೆ
    ಏಪ್ರಿಲ್ 30, ಬುಧವಾರ, ಬಸವ ಜಯಂತಿ, ಅಕ್ಷಯ ತೃತೀಯ
    ಮೇ 1 ಗುರುವಾರ, ಕಾರ್ಮಿಕ ದಿನಾಚರಣೆ
    ಜೂನ್ 7 ಶನಿವಾರ, ಬಕ್ರೀದ್
    ಆಗಸ್ಟ್ 15 ಶುಕ್ರವಾರ, ಸ್ವಾತಂತ್ರ್ಯ ದಿನಾಚರಣೆ
    ಆಗಸ್ಟ್ 27 ಬುಧವಾರ, ವರಸಿದ್ಧಿ ವಿನಾಯಕ ವ್ರತ
    ಸೆಪ್ಟೆಂಬರ್ 5 ಶುಕ್ರವಾರ ಈದ್-ಮಿಲಾದ್
    ಅಕ್ಟೋಬರ್ 1 ಬುಧವಾರ ಮಹಾನವಮಿ, ಆಯುಧಪೂಜೆ, ವಿಜಯದಶಮಿ
    ಅಕ್ಟೋಬರ್ 2 ಗುರುವಾರ, ಗಾಂಧಿ ಜಯಂತಿ
    ಅಕ್ಟೋಬರ್ 7 ಮಂಗಳವಾರ, ವಾಲೀಕಿ ಜಯಂತಿ
    ಅಕ್ಟೋಬರ್ 20 ಸೋಮವಾರ, ನರಕ ಚತುದರ್ಶಿ
    ಅಕ್ಟೋಬರ್ 22 ಬುಧವಾರ, ಬಲಿಪಾಡ್ಯಮಿ, ದೀಪಾವಳಿ
    ನವೆಂಬರ್ 01 ಶನಿವಾರ, ಕನ್ನಡ ರಾಜೋತ್ಸವ
    ಡಿಸೆಂಬರ್ 25 ಗುರುವಾರ, ಕ್ರಿಸ್‍ಮಸ್


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search