ಚಾಲೆಂಜಿಂಗ್ ಸ್ಟಾರ್ ದರ್ಶನ್ ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿದ್ದು, ಸದ್ಯ ಬೆನ್ನು ನೋವಿನ ಚಿಕಿತ್ಸೆಗೆಂದು ಮಧ್ಯಂತರ ಜಾಮೀನು ಪಡೆದಿದ್ದಾರೆ.
ಆರು ವಾರಗಳ ಕಾಲ ಜಾಮೀನು ಪಡೆದಿರುವ ದರ್ಶನ್ ಆಸ್ಪತ್ರೆಯಲ್ಲಿರುವಾಗಲೇ ಪ್ರಕರಣದ ಕುರಿತು ಮಹತ್ವದ ಬೆಳವಣಿಗೆಯಾಗಿದ್ದು, ರೇಣುಕಾಸ್ವಾಮಿ ಕೊಲೆಯಾದ ಬಳಿಕ ಶವದ ಮುಂದೆ ದರ್ಶನ್ ಹಾಗೂ ಆರೋಪಿಗಳು ನಿಂತಿರುವ ಫೋಟೊ ಇದೀಗ ಪೊಲೀಸರಿಗೆ ಲಭ್ಯವಾಗಿದೆ.
ಈ ಮೂಲಕ ಕೊಲೆಯಾದಾಗ ದರ್ಶನ್ ಪಟ್ಟಣಗೆರೆ ಶೆಡ್‌ನಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತಿತ್ತು. ಆದರೆ ಈ ಫೋಟೊ ಲಭಿಸಿರುವುದು ಪ್ರಕರಣವನ್ನು ಮತ್ತಷ್ಟು ಬಲಿಷ್ಠಗೊಳಿಸಿದೆ. ಪ್ರಕರಣದ ಮತ್ತೋರ್ವ ಆರೋಪಿ ಪವನ್ ಪ್ರಕರಣ ನಡೆದ ದಿನ ಶೆಡ್‌ನಲ್ಲಿ ಎರಡು ಫೋಟೊಗಳನ್ನು ಕ್ಲಿಕ್ಕಿಸಿ ಬಳಿಕ ಡಿಲಿಟ್ ಮಾಡಿದ್ದ. ಪವನ್ ಮೊಬೈಲ್ ಅನ್ನು ರಿಟ್ರಿವ್ ಮಾಡಲು ಹೈದರಾಬಾದ್ ಎಫ್‌ಎಸ್‌ಎಲ್ ಕೇಂದ್ರಕ್ಕೆ ಕಳುಹಿಸಲಾಗಿತ್ತು.
ಅದರ ವರದಿ ಬರುವುದು ತಡವಾಗಿತ್ತು. ಆ ವರದಿ ಇದೀಗ ಬಂದಿದ್ದು, ಆ ಎರಡೂ ಫೋಟೊಗಳೂ ರಿಟ್ರಿವ್ ಆಗಿದೆ. ಇದರ ಪೈಕಿ ಒಂದು ಫೋಟೊದಲ್ಲಿ ದರ್ಶನ್ ಶವದ ಮುಂದೆ ನಿಂತಿದ್ದಾರೆ ಎನ್ನಲಾಗಿದೆ. ಇನ್ನು ಈ ಫೋಟೊಗಳನ್ನು ನ್ಯಾಯಾಲಯದ ಗಮನಕ್ಕೂ ತರಲಾಗಿದೆ ಎನ್ನಲಾಗುತ್ತಿದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


