Monday, November 2, 2026
spot_img
More
    spot_img
    HomeLatest newsಖಾತೆ ಹಂಚಿಕೆ ಮಾಡಿದ ನಿತೀಶ್ ಕುಮಾರ್: ಬಿಜೆಪಿಗೆ ಯಾವ ಖಾತೆಗಳು?

    ಖಾತೆ ಹಂಚಿಕೆ ಮಾಡಿದ ನಿತೀಶ್ ಕುಮಾರ್: ಬಿಜೆಪಿಗೆ ಯಾವ ಖಾತೆಗಳು?

    ಬಿಹಾರ ವಿಧಾನಸಭೆ ಚುನಾವಣೆ 2025ರಲ್ಲಿ 202 ಸೀಟುಗಳಲ್ಲಿ ಗೆಲುವು ದಾಖಲಿಸಿರುವ ಎನ್‌ಡಿಎ ಮೈತ್ರಿಕೂಟ ಹೊಸ ಸರ್ಕಾರ ರಚನೆ ಮಾಡಿದೆ. ಬಿಹಾರ ಮುಖ್ಯಮಂತ್ರಿಯಾಗಿ 10ನೇ ಬಾರಿಗೆ ನಿತೀಶ್ ಕುಮಾರ್ ಅಧಿಕಾರವಹಿಸಿಕೊಂಡಿದ್ದಾರೆ. ತಮ್ಮ ಸಂಪುಟದ 26 ಸಚಿವರಿಗೆ ಅವರು ಖಾತೆ ಹಂಚಿಕೆ ಮಾಡಿದ್ದಾರೆ.

    ಬಿಹಾರದ ನಿತೀಶ್ ಕುಮಾರ್ ಸರ್ಕಾರದಲ್ಲಿ 26 ಸಚಿವರಿದ್ದಾರೆ. ಚುನಾವಣೆಯಲ್ಲಿ 89 ಸೀಟು ಗೆದ್ದಿರುವ ಬಿಜೆಪಿಗೆ ಎರಡು ಉಪಮುಖ್ಯಮಂತ್ರಿ ಸ್ಥಾನ ನೀಡಲಾಗಿದ್ದು, ಪ್ರಬಲ ಖಾತೆಗಳು ಅತಿ ದೊಡ್ಡ ಪಕ್ಷದ ಪಾಲಾಗಿವೆ.

    ಸಿಎಂ ನಿತೀಶ್ ಕುಮಾರ್ ಸಾಮಾನ್ಯ ಆಡಳಿತ, ಸಂಪುಟ ಸಚಿವಾಲಯ, ಮೇಲ್ವಿಚಾರಣೆ ಮತ್ತು ಯಾರಿಗೂ ಹಂಚಿಕೆಯಾಗದ ಎಲ್ಲಾ ಇಲಾಖೆಗಳನ್ನು ತಮ್ಮಲ್ಲಿಯೇ ಉಳಿಸಿಕೊಂಡಿದ್ದಾರೆ. ನಿತೀಶ್ ಹೊಸ ಸರ್ಕಾರದಲ್ಲಿ ಅವರನ್ನು ಹೊರತುಪಡಿಸಿ ಜೆಡಿಯುನ 7 ಸಚಿವರಿದ್ದಾರೆ.

    ಬಿಜೆಪಿಗೆ ಪ್ರಬಲ ಖಾತೆ: ಚುನಾವಣೆಯಲ್ಲಿ 89 ಸೀಟು ಗೆದ್ದು ಅತಿ ದೊಡ್ಡ ಪಕ್ಷವಾದ ಬಿಜೆಪಿ 85 ಸೀಟು ಗೆದ್ದ ಜೆಡಿಯು ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಟ್ಟಿದೆ. ನಿತೀಶ್ ಕುಮಾರ್ ಸಿಎಂ ಆಗಿದ್ದಾರೆ. ಬಿಜೆಪಿಗೆ 2 ಉಪಮುಖ್ಯಮಂತ್ರಿ ಸ್ಥಾನ ಸಿಕ್ಕಿದೆ.

    ಬಿಜೆಪಿಯ ಸಾಮ್ರಾಟ್ ಚೌಧರಿ ನಿತೀಶ್ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದು ಅವರಿಗೆ ಗೃಹ ಖಾತೆಯನ್ನು ನೀಡಲಾಗಿದೆ. ಇನ್ನೊಬ್ಬ ಉಪಮುಖ್ಯಮಂತ್ರಿ ವಿಜಯ್ ಸಿನ್ಹಾ ಭೂಮಿ ಮತ್ತು ಕಂದಾಯ ಹಾಗೂ ಗಣಿ ಮತ್ತು ಭೂ ವಿಜ್ಞಾನ ಖಾತೆಯನ್ನು ಪಡೆದಿದ್ದಾರೆ.

    ರಾಜ್ಯ ಖಾತೆ ಸಚಿವ ಮಂಗಲ್ ಪಾಂಡೆ ಆರೋಗ್ಯ ಇಲಾಖೆ ಮತ್ತು ಕಾನೂನು ಇಲಾಖೆಯ ಸಚಿವರಾಗಿದ್ದಾರೆ. ಬಿಹಾರ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಜೈಸ್ವಾಲ್ ಸಹ ಸಂಪುಟ ಸೇರಿದ್ದು, ಅವರಿಗೆ ಕೈಗಾರಿಕಾ ಖಾತೆಯನ್ನು ಹಂಚಿಕೆ ಮಾಡಲಾಗಿದೆ.

    ನಿತೀಶ್ ಕುಮಾರ್ ಸಂಪುಟ ಸೇರಿದ ಅಚ್ಚರಿಯ ವ್ಯಕ್ತಿ ದೀಪಕ್ ಪ್ರಕಾಶ್. ರಾಷ್ಟ್ರೀಯ ಲೋಕಮೋರ್ಚಾ (ಆರ್‌ಎಲ್‌ಎಂ) ಪಕ್ಷ ಚುನಾವಣೆಯಲ್ಲಿ 4 ಸೀಟು ಗೆದ್ದಿದ್ದು, ಪಕ್ಷದ ನಾಯಕ ಉಪೇಂದ್ರ ಕುಶ್ವಾ ಪುತ್ರ ದೀಪಕ್ ಪ್ರಕಾಶ್ ಸಚಿವರಾಗಿದ್ದಾರೆ.

    ಶಾಸಕರು ಅಲ್ಲದ, ವಿಧಾನ ಪರಿಷತ್ ಸದಸ್ಯರು ಅಲ್ಲದ ದೀಪಕ್ ಪ್ರಕಾಶ್‌ಗೆ ಪಂಚಾಯತ್ ರಾಜ್ ಖಾತೆಯನ್ನು ನೀಡಲಾಗಿದೆ. 6 ತಿಂಗಳಿನಲ್ಲಿ ದೀಪಕ್ ಪ್ರಕಾಶ್ ಶಾಸಕರು ಅಥವ ವಿಧಾನ ಪರಿಷತ್ ಸದಸ್ಯರಾಗಬೇಕು. ಇಲ್ಲವಾದಲ್ಲಿ ಅವರ ಸಚಿವ ಸ್ಥಾನ ಕೈತಪ್ಪಲಿದೆ.

    ದೀಪಕ್ ಪ್ರಮುಖ ರಾಜಕೀಯ ಕುಟುಂಬದಿಂದ ಬಂದಿದ್ದಾರೆ. ತಂದೆ ಉಪೇಂದ್ರ ಕುಶ್ವಾ ರಾಜ್ಯಸಭಾ ಸದಸ್ಯರು, ಕೇಂದ್ರದ ಮಾಜಿ ಸಚಿವರು ಮತ್ತು ಬಿಹಾರ ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕರು.

    ತಾಯಿ ಸ್ನೇಹಲತಾ ಕುಶ್ವಾ ಅವರು ಸಾಸಾರಾಮ ವಿಧಾನಸಭಾ ಕ್ಷೇತ್ರದಲ್ಲಿ 25,000ಕ್ಕೂ ಹೆಚ್ಚು ಮತಗಳ ಅಂತರದಿಂದ ಆರ್‌ಜೆಡಿ ಅಭ್ಯರ್ಥಿ ಸತೇಂದ್ರ ಸಾಹ ವಿರುದ್ಧ ಗೆದ್ದು ಶಾಸಕಿಯಾಗಿ ಆಯ್ಕೆಯಾಗಿದ್ದಾರೆ.

    ಶಾಸಕಿಯಾಗಿರುವ ಸ್ನೇಹಲತಾ ಕುಶ್ವಾ ಅವರನ್ನು ಸಚಿವರಾಗಿ ಸಂಪುಟಕ್ಕೆ ಸೇರಿಸಿಕೊಳ್ಳಲಾಗುತ್ತದೆ ಎಂದು ಅಂದಾಜಿಸಲಾಗಿತ್ತು. ಆದರೆ ಎನ್‌ಡಿಎ ನಾಯಕರ ಜೊತೆ ಮಾತುಕತೆ ನಡೆಸಿದ ಉಪೇಂದ್ರ ಕುಶ್ವಾ ಪುತ್ರ ದೀಪಕ್ ಪ್ರಕಾಶ್ ಚುನಾವಣೆಗೆ ನಿಂತು ಗೆಲ್ಲದಿದ್ದರೂ ಅವರನ್ನು ಸಚಿವರನ್ನಾಗಿ ಮಾಡಿ, ರಾಜಕೀಯಕ್ಕೆ ಎಂಟ್ರಿ ಕೊಡಿಸಿದ್ದಾರೆ.

    ಸದ್ಯದ ಮಾಹಿತಿ ಪ್ರಕಾರ ಬಿಹಾರ ವಿಧಾನ ಪರಿಷತ್‌ಗೆ ಕೆಲವೇ ದಿನಗಳಲ್ಲಿ ದೀಪಕ್ ಪ್ರಕಾಶ್ ಅವರನ್ನು ನಾಮ ನಿರ್ದೇಶನ ಮಾಡಲಾಗುತ್ತದೆ. ಸಿಎಂ ನಿತೀಶ್ ಕುಮಾರ್ ಸಹ ವಿಧಾನ ಪರಿಷತ್‌ನ ಸದಸ್ಯರು.

    ಬಿಹಾರದಲ್ಲಿ ಕುಶ್ವಾ ಸಮುದಾಯ ಮೊದಲಿನಿಂದಲೂ ಎನ್‌ಡಿಎ ಮೈತ್ರಿಕೂಟವನ್ನು ಬೆಂಬಲಿಸುತ್ತಿದೆ. ಆದ್ದರಿಂದ ಆ ಸಮುದಾಯದ ನಾಯಕನಿಗೆ ಸಚಿವ ಸ್ಥಾನವನ್ನು ಮೈತ್ರಿಕೂಟ ನೀಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search