Tuesday, September 22, 2026
spot_img
More
    spot_img
    HomeLatest newsಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಆದ ಅಪಮಾನದ ಬಗ್ಗೆ ಯಾರೂ ಮಾತನಾಡುತ್ತಿಲ್ಲ: ಡಿಕೆ ಸುರೇಶ್ ಬೇಸರ

    ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಆದ ಅಪಮಾನದ ಬಗ್ಗೆ ಯಾರೂ ಮಾತನಾಡುತ್ತಿಲ್ಲ: ಡಿಕೆ ಸುರೇಶ್ ಬೇಸರ

    ಬೆಂಗಳೂರು: ವಿಧಾನ ಪರಿಷತ್‌ನಲ್ಲಿ ನಡೆದಿರುವ ಘಟನೆ ಸಮರ್ಥಿಸಿಕೊಳ್ಳುತ್ತಿರುವುದು ಬಿಜೆಪಿಗೆ ಶೋಭೆಯಲ್ಲ ಎಂದು ಮಾಜಿ ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿ.ಟಿ.ರವಿಯಿಂದ ಹೊರಬಂದಿರುವ ಅಶ್ಲೀಲ ಹಾಗೂ ಅವಾಚ್ಯ ಶಬ್ದಗಳ ಬಗ್ಗೆ ಕನಿಷ್ಠ ಪಕ್ಷ ಒಂದು ಕ್ಷಮೆಯನ್ನೂ ಕೇಳದ ಬಿಜೆಪಿ ನಾಯಕರು, ಅದೇ ಸಿ.ಟಿ.ರವಿಯವರ ಬಂಧನವನ್ನು ವೈಭವೀಕರಿಸುತ್ತಿದ್ದಾರೆ ಎಂದು ಆರೋಪಿಸಿದರು.

    ಬಿಜೆಪಿಯ ನಾಯಕರು ಪದೇಪದೇ ಈ ರೀತಿಯ ಮಾತುಗಳನ್ನಾಡುತ್ತಾರೆ. ಹೆಣ್ಣುಮಕ್ಕಳ ಬಗ್ಗೆ ಅಸಭ್ಯವಾಗಿ ವರ್ತಿಸುತ್ತಾರೆ ಎಂಬುದು ಸಾರ್ವಜನಿಕರಿಗೆ ಅರ್ಥವಾಗಬೇಕು. ಒಂದಲ್ಲಾ, ಎರಡರಲ್ಲ ಸರಣಿ ಘಟನೆಗಳು ನಡೆಯುತ್ತಲೇ ಇವೆ. ಹೆಣ್ಣುಮಕ್ಕಳ ವಿಚಾರದಲ್ಲಿ ಬಿಜೆಪಿಯವರ ನಡವಳಿಕೆಗಳನ್ನು ನೋಡಿದರೆ ಅವರ ಮನೆಯಲ್ಲಿ ತಾಯಿಗೆ, ಪತ್ನಿಗೆ, ಹೆಣ್ಣು ಮಕ್ಕಳಿಗೆ ಗೌರವ ನೀಡುವುದಿಲ್ಲ ಎನ್ನಿಸುತ್ತದೆ. ಆರ್‌ಎಸ್ ಎಸ್ ಬಹುಶಃ ಇದೇ ರೀತಿಯ ಪಾಠ ಹೇಳಕೊಡಬಹುದು ಎಂದರು.
    ಈವರೆಗೂ ಒಬ್ಬ ನಾಯಕರೂ ಸಿ.ಟಿ.ರವಿ ಹೇಳಿಕೆಯನ್ನು ಖಂಡಿಸಿಲ್ಲ. ಬದಲಾಗಿ ಆ ರೀತಿ ಹೇಳೇ ಇಲ್ಲ ಎಂದು ತಿರುಚುವ ಪ್ರಯತ್ನ ಮಾಡಿದ್ದಾರೆ. ಮಾಧ್ಯಮಗಳ ದೃಶ್ಯಾವಳಿಗಳಲ್ಲಿ ಸ್ಪಷ್ಟವಾಗಿದ್ದರೂ ಕೂಡ ಅದನ್ನು ಉದ್ಧಟತನದಿಂದ ಸಮರ್ಥಿಸಿಕೊಳ್ಳಲಾಗುತ್ತಿದೆ. ಈ ಮೂಲಕ ಮಹಿಳೆಗಾದ ಅವಮಾನವನ್ನು ಸರಿ ಎಂಬಂತೆ ಬಿಂಬಿಸುತ್ತಿರುವುದು ದುರಂತ ಎಂದರು.


    ಸಮಾಜ ಮತ್ತು ಮಾಧ್ಯಮವು ಸಿ.ಟಿ.ರವಿ ಬಂಧನವನ್ನೇ ದೊಡ್ಡದು ಮಾಡಿ ಪ್ರಚಾರ ಮಾಡುತ್ತದೆ.

    ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗಾದ ಅಪಮಾನದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಇದು ಕರ್ನಾಟಕದ ಗೌರವವನ್ನು ರಾಷ್ಟ್ರಮಟ್ಟದಲ್ಲಿ ಕಡಿಮೆಯಾಗುವಂತೆ ಮಾಡುತ್ತದೆ. ಕನ್ನಡಿಗರು ಸುಸಂಸ್ಕೃತರು ಎಂಬ ಖ್ಯಾತಿಗೆ ಅಪವಾದವಾಗುತ್ತದೆ ಎಂದು ವಿಷಾದಿಸಿದರು.
    ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹೆಣ್ಣುಮಕ್ಕಳ ವಿಚಾರದಲ್ಲಿ ಆ ಪಕ್ಷದ ನಾಯಕರು ಬಳಸುವ ಶಬ್ದಗಳು, ನಡವಳಿಕೆಗಳು ಸಮಾಜದಲ್ಲಿ ಮೌಲ್ಯಗಳನ್ನು ಕುಸಿಯುವಂತೆ ಮಾಡುತ್ತಿವೆ. ಓಲೈಕೆ ರಾಜಕಾರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿರುವ ಬಿಜೆಪಿ ಜನಪ್ರತಿನಿಧಿಗಳನ್ನು ಅಪಹಾಸ್ಯಕ್ಕೀಡುಮಾಡುತ್ತಿದೆ ಎಂದು ತಿರುಗೇಟು ನೀಡಿದರು.

    ರಾಹುಲ್‌ಗಾಂಧಿ ರಾಷ್ಟ್ರೀಯ ನಾಯಕರು. ಅವರನ್ನು ಸಿ.ಟಿ.ರವಿ ಒಬ್ಬ ಮಾದಕವ್ಯಸನಿ ಎನ್ನುವುದಾದರೆ ಅದಕ್ಕೆ ಸಚಿವೆಯಾಗಿ ಲಕ್ಷೀ ಹೆಬ್ಬಾಳ್ಕರ್ ಪ್ರತಿಕ್ರಿಯಿಸಿದ್ದಾರೆ. ಕ್ರಿಯೆಗೆ ಪ್ರತಿಕ್ರಿಯೆ ಎಂಬAತೆ ಸಿ.ಟಿ.ರವಿ ಟೀಕೆಗೆ ಆಕ್ಷೆ?ಪಗಳು ವ್ಯಕ್ತವಾಗಿವೆ. ಅಷ್ಟು ಮಾತ್ರಕ್ಕೆ ತುಚ್ಛವಾದ ಪದವನ್ನು ಬಳಸುವುದು ಸಮರ್ಥನೀಯವೇ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ತಾಯಿ ಜನ ಕೊಡದೇ ಇದ್ದರೆ ಸಿ.ಟಿ.ರವಿ ಸೇರಿದಂತೆ ಯಾರೂ ಕೂಡ ಈ ಭೂಮಿಯ ಮೇಲಿರಲು ಸಾಧ್ಯವಾಗುತ್ತಿರಲಿಲ್ಲ. ಕಳೆದ ಹತ್ತು ವರ್ಷಗಳಲ್ಲಿ ಬಿಜೆಪಿಯವರು ಜನನ ಪ್ರಕ್ರಿಯೆಗಳಿಗೆ ಜೈವಿಕ ಮಾರ್ಗ ಹೊರತುಪಡಿಸಿ ಬೇರೆ ಹೊಸದೇನಾದರೂ ಕಂಡುಕೊಂಡಿದ್ದಾರೆಯೋ ಗೊತ್ತಿಲ್ಲ. ಅದಕ್ಕಾಗಿಯೇ ಅಗೌರವದಿಂದ ಕಾಣುತ್ತಿರುವಂತಿದೆ ಎಂದು ಹೇಳಿದರು.
    ಪ್ರಧಾನಮಂತ್ರಿ ನರೇಂದ್ರಮೋದಿಯವರೇ ಖುದ್ದಾಗಿ ತಾವು ಜೈವಿಕ ಶಿಶುವಲ್ಲ. ದೈವಾಂಶ ಸಂಭೂತ ಎಂದಿದ್ದಾರೆ. ಅದಕ್ಕಾಗಿಯೇ ಬಿಜೆಪಿಯ ನಾಯಕರು ಹೆಣ್ಣುಮಕ್ಕಳನ್ನು ನಗಣ್ಯ ಮಾಡುವ ಪ್ರವೃತ್ತಿಗೆ ಇಳಿದಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿಯ ನಾಯಕರಲ್ಲಿ ಯಾರ್ಯಾರು ಹೆಣ್ಣು ಮಕ್ಕಳ ಬಗ್ಗೆ ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಪಟ್ಟಿ ಮಾಡಿದರೆ ಯಾರ ಯೋಗ್ಯತೆ ಏನು ಎಂಬುದು ಗೊತ್ತಾಗಲಿದೆ ಎಂದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading