ಬೆಂಗಳೂರು: ರಾಹುಲ್‌ಗಾಂಧಿ ವಿರುದ್ಧ ಅಪಪ್ರಚಾರ ಮಾಡುತ್ತಿರುವ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಒಬ್ಬ ಕ್ರಿಮಿನಲ್ ಎಂದು ಕಾಂಗ್ರೆಸ್ ನಾಯಕ ಬಿ.ಕೆ.ಹರಿಪ್ರಸಾದ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸಚಿವ ಅಮಿತ್ ಶಾ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವಹೇಳನ ಮಾಡಿ ಸಂಸತ್‌ನಲ್ಲಿ ನೀಡಿರುವ ಹೇಳಿಕೆಯ ಚರ್ಚೆಯ ದಾರಿ ತಪ್ಪಿಸಲು ನಾನಾ ರೀತಿಯ ತಂತ್ರಗಳನ್ನು ಅನುಸರಿಸಲಾಗುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಮತ್ತು ಸಂಘ ಪರಿವಾರಕ್ಕೆ ಪರಿಶಿಷ್ಟರು, ಆದಿವಾಸಿಗಳು, ಹಿಂದುಳಿದ ವರ್ಗದವರು ನಾಯಕತ್ವ ವಹಿಸುವುದು ಇಷ್ಟವಿಲ್ಲ. ಇದಕ್ಕಾಗಿ ಅಂಬೇಡ್ಕರ್‌ರವರ ಚಿಂತನೆಗಳು ಹಾಗೂ ಸಂವಿಧಾನವನ್ನು ಅಪಮಾನಿಸುವ ಹುನ್ನಾರಗಳು ನಡೆಯುತ್ತಿವೆ. ಈ ಹಿಂದೆ ಸನಾತನ ಸಂಸ್ಕೃತಿಯಲ್ಲಿ ಶ್ರೆಣೀಕೃತ ವ್ಯವಸ್ಥೆಯಲ್ಲಿ ಗುಲಾಮಗಿರಿ ಸಂಸ್ಕೃತಿಯನ್ನು ಸಂಘ ಪರಿವಾರ ಬಯಸುತ್ತದೆ. ಸಮ ಸಮಾಜಕ್ಕಾಗಿ ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಆರ್‌ಎಸ್ಎಸ್ ಒಪ್ಪಿರಲಿಲ್ಲ. ತನ್ನ ಮುಖವಾಣಿ ಆರ್ಗನೈಸರ್‌ನಲ್ಲಿ ಸಂವಿಧಾನವನ್ನು ವಿರೋಧಿಸಿ ಸಂಪಾದಕೀಯ ಬರೆಯಲಾಗಿತ್ತು. ತ್ರಿವರ್ಣ ಧ್ವಜವನ್ನು ಅಪಶಕುನ ಎಂದು ಜರಿದಿದ್ದರು ಎಂದು ವಾಗ್ದಾಳಿ ನಡೆಸಿದರು.
ಸಂಸತ್‌ನ ಹೊರಗೆ ಗಲಭೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಸಂಸದ ಪ್ರತಾಪ್ ಸಾರಂಗಿ ಕೆಳಗೆ ಬಿದ್ದು ಗಾಯ ಮಾಡಿಕೊಂಡು ರಾಹುಲ್‌ಗಾಂಧಿ ವಿರುದ್ಧ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಾಪ್ ಸಾರಂಗಿ ೧೯೯೯ ರ ಜನವರಿ ೨೨ ರಂದು ಕೇಂಜೋರ್ ಜಿಲ್ಲೆ ಮನೋಹರ್‌ಪುರ ತಾಲ್ಲೂಕಿನಲ್ಲಿ ಗ್ರಹಂಸ್ಟೈನ್ ಅನ್ನು ಕೊಲೆ ಮಾಡಿ ಅವರ ಮಕ್ಕಳನ್ನು ಜೀವಂತವಾಗಿ ಸುಡಲಾಗಿತ್ತು. ಆ ಪ್ರಕರಣದಲ್ಲಿ ದಾರಾಸಿಂಗ್‌ಗೆ ಗಲ್ಲುಶಿಕ್ಷೆಯಾಗಿತ್ತು. ನ್ಯಾಯಾಲಯ ಅದನ್ನು ಜೀವಾವಧಿಗೆ ಪರಿವರ್ತಿಸಲಾಗಿದೆ. ಆ ವೇಳೆ ಬಿಜೆಪಿಯ ರಾಷ್ಟ್ರೀಯ ನಾಯಕ ಎಲ್.ಕೆ.ಅಡ್ವಾಣಿಯವರು ದಾರಾಸಿಂಗ್‌ನನ್ನು ನಿರಪರಾಧಿ ಎಂದಿದ್ದರು. ಘಟನೆ ನಡೆದಾಗ ಇದೇ ಪ್ರತಾಪ್ ಸಾರಂಗಿ ಅಲ್ಲಿನ ಭಜರಂಗದಳದ ಅಧ್ಯಕ್ಷರಾಗಿದ್ದರು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆತ ಜೈಲಿನಿಂದ ಹೊರಗಿದ್ದಾನೆ ಎಂದು ಹೇಳಿದರು.
ಸಾರಂಗಿ ಮಹಾಪಾಪಿ. ಸ್ವಂತ ಅಣ್ಣ-ತಮಂದಿರ ಮಕ್ಕಳ ವಿಚಾರದಲ್ಲೂ ಅನಾಚಾರ ಮಾಡಿದ್ದಾನೆ. ಈಗ ಪ್ರಚಾರಕ್ಕಾಗಿ ರಾಹುಲ್‌ಗಾಂಧಿಯ ವಿರುದ್ಧ ಆರೋಪ ಮಾಡುತ್ತಿದ್ದಾನೆ. ಮಹಾತ ಗಾಂಧಿ ಕಾಲದಿಂದ ರಾಹುಲ್‌ಗಾಂಧಿವರೆಗೆ ಅಪಪ್ರಚಾರ ಮಾಡುವುದೇ ಸಂಘಪರಿವಾರದ ಗುಣ. ಅವರು ವ್ಯಸನಿಗಳು ಹಾಗೂ ವಿಕೃತರು ಎಂದು ವಾಗ್ದಾಳಿ ನಡೆಸಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


