ಕಳೆದ ಎರಡು ದಿನಗಳಿಂದ ಸ್ಥಿರವಾಗಿದ್ದ ಚಿನ್ನ ಮತ್ತು ಬೆಳ್ಳಿ ದರಗಳು ಇಂದು ಸೋಮವಾರ ಮತ್ತೆ ನಾಗಾಲೋಟ ಆರಂಭಿಸಿದ್ದು, ಹೊಸ ದಾಖಲೆಯ ಮಟ್ಟ ತಲುಪಿವೆ.ಅಂತಾರಾಷ್ಟ್ರೀಯ ಮಾರುಕಟ್ಟೆಯ ಏರಿಳಿತದ ಪರಿಣಾಮವಾಗಿ ಭಾರತದಲ್ಲಿ ಇಂದು ಚಿನ್ನದ ಬೆಲೆ ಭಾರಿ ಜಿಗಿತ ಕಂಡಿದೆ.
24 ಕ್ಯಾರೆಟ್ (ಅಪರಂಜಿ) 10 ಗ್ರಾಮ್ ಚಿನ್ನದ ಬೆಲೆ ಬರೋಬ್ಬರಿ ₹1,100 ಏರಿಕೆಯಾಗಿ ಈಗ ₹1,35,280 ಕ್ಕೆ ತಲುಪಿದೆ.22 ಕ್ಯಾರೆಟ್ (ಆಭರಣ ಚಿನ್ನ) ಪ್ರತಿ 10 ಗ್ರಾಮ್‌ಗೆ ₹1,000 ಹೆಚ್ಚಳವಾಗಿದ್ದು, ಸದ್ಯ ₹1,24,000 ದಲ್ಲಿ ವಹಿವಾಟು ನಡೆಸುತ್ತಿದೆ,ಚಿನ್ನಕ್ಕಿಂತಲೂ ವೇಗವಾಗಿ ಬೆಳ್ಳಿ ಬೆಲೆ ಏರುತ್ತಿರುವುದು ಹೂಡಿಕೆದಾರರನ್ನು ಬೆಚ್ಚಿಬೀಳಿಸಿದೆ.
ಇಂದು ಒಂದೇ ದಿನ ಪ್ರತಿ ಕೆಜಿ ಬೆಳ್ಳಿಯ ಮೇಲೆ ₹5,000 ಏರಿಕೆಯಾಗಿದೆ,ಪ್ರತಿ ಕೆಜಿ ಬೆಳ್ಳಿ ಬೆಲೆ ₹2.19 ಲಕ್ಷ ತಲುಪಿದೆ.ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಬದಲಾವಣೆಗಳೇ ಈ ಬೆಲೆ ಏರಿಕೆಗೆ ಮುಖ್ಯ ಕಾರಣ ಎನ್ನಲಾಗಿದೆ.ಭಾರತೀಯ ರಿಸರ್ವ್ ಬ್ಯಾಂಕ್ (RBI) ಕೂಡ ಟನ್‌ಗಟ್ಟಲೆ ಚಿನ್ನವನ್ನು ಖರೀದಿಸುತ್ತಿರುವುದು ಮಾರುಕಟ್ಟೆಯ ಮೇಲೆ ಪ್ರಭಾವ ಬೀರಿದೆ.
ಇಂದಿನ ದರ ಪಟ್ಟಿ (ಬೆಂಗಳೂರು):
22 ಕ್ಯಾರೆಟ್ ಚಿನ್ನ10 ಗ್ರಾಮ್₹1,24,000
24 ಕ್ಯಾರೆಟ್ ಚಿನ್ನ10 ಗ್ರಾಮ್₹1,35,280
ಬೆಳ್ಳಿ1 ಕೆಜಿ₹2,19,000
ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ
24 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 13,528 ರೂ
22 ಕ್ಯಾರಟ್ನ 1 ಗ್ರಾಂ ಚಿನ್ನದ ಬೆಲೆ: 12,400 ರೂ
ಬೆಳ್ಳಿ ಬೆಲೆ 1 ಗ್ರಾಂಗೆ: 219 ರೂ
| ನಗರ | 24K (ಅಪರಂಜಿ) | 22K (ಆಭರಣ) | 18K |
| ಚೆನ್ನೈ | ₹13,528 | ₹12,400 | ₹10,350 |
| ಬೆಂಗಳೂರು | ₹13,451 | ₹12,330 | ₹10,088 |
| ಹೈದರಾಬಾದ್ | ₹13,451 | ₹12,330 | ₹10,088 |
| ಮುಂಬೈ | ₹13,451 | ₹12,330 | ₹10,088 |
| ದೆಹಲಿ | ₹13,466 | ₹12,345 | ₹10,103 |
| ಅಹಮದಾಬಾದ್ | ₹13,456 | ₹12,335 | ₹10,093 |
| ಕೇರಳ | ₹13,451 | ₹12,330 | ₹10,088 |
| ಪುಣೆ | ₹13,451 | ₹12,330 | ₹10,088 |
ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್‌ನಲ್ಲಿ ಐಟಿಐ ಪಾಸಾದವರಿಗೆ 156 ಆಪರೇಟರ್ ಹುದ್ದೆಗಳಿಗೆ ನೇಮಕಾತಿ
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


