ಈ ಬಾರಿಯ ಬಿಗ್‌ಬಾಸ್‌ನಲ್ಲಿ ಸ್ಪರ್ಧಿಯಾಗಿ ಕೆಲ ದಿನಗಳು ಮಾತ್ರವಿದ್ದರೂ ಸಹ ಸಾಕಷ್ಟು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ ಲಾಯರ್ ಜಗದೀಶ್ ಈ ಹಿಂದಿನಿಂದಲೂ ಸಹ ಸಾಮಾಜಿಕ ಜಾಲತಾಣ ಉಪಯೋಗಿಸುವವರಿಗೆ ಪರಿಚಿತರು.
ಸಾಮಾಜಿಕ ಜಾಲತಾಣದಲ್ಲಿ ಭಿನ್ನ ವಿಭಿನ್ನ ವಿಷಯಗಳ ಬಗ್ಗೆ ತಮ್ಮ ಪಾಲಿನ ಅಭಿಪ್ರಾಯ ತಿಳಿಸುತ್ತಾ ಹಲವಾರು ವಿಡಿಯೊಗಳನ್ನು ಮಾಡಿರುವ ಲಾಯರ್ ಜಗದೀಶ್ ಸದ್ಯ ʼವಕೀಲ್ ಸಾಬ್ʼ ಎಂದೇ ಬಿರುದನ್ನು ಪಡೆದುಕೊಂಡಿದ್ದಾರೆ.
ಇನ್ನು ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ವಿವಾದ ಮಾಡಿಕೊಂಡು ಹೊರಬಂದ ಲಾಯರ್ ಜಗದೀಶ್ ಈ ಹಿಂದಿನಂತೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊಗಳನ್ನು ಹಂಚಿಕೊಳ್ಳುವುದನ್ನು ಮುಂದುವರಿಸಿದ್ದು, ರಾಜಕಾರಣಿಗಳು ಹಾಗೂ ನಟ, ನಟಿಯರ ವಿರುದ್ಧವೂ ಸಹ ಮಾತನ್ನಾಡಿದ್ದಾರೆ.
ಹೀಗೆ ವಿಡಿಯೊ ಮಾಡಿಕೊಂಡಿರುವ ಲಾಯರ್ ಜಗದೀಶ್ ಮೇಲೆ ನಾಲ್ಕೈದು ಜನರ ಯುವಕರ ಗುಂಪೊಂದು ರಸ್ತೆಯಲ್ಲೇ ನಡೆಸಿದ್ದು, ವ್ಯಕ್ತಿಯೋರ್ವ ಜಗದೀಶ್ ತಲೆ ಮೇಲೆ ಎರಡು ಬಾರಿಸಿದ್ದೂ ಸಹ ವಿಡಿಯೊದಲ್ಲಿ ರೆಕಾರ್ಡ್ ಆಗಿದೆ.
ಇನ್ನು ಈ ಪರಿ ರಸ್ತೆಯಲ್ಲೇ ಹೊಡೆಯುವಂತಹ ದ್ವೇಷ ಜಗದೀಶ್ ಮೇಲೆ ಯಾರಿಗಿದೆ ಎಂಬ ಪ್ರಶ್ನೆಗಳು ಸಹಜವಾಗಿಯೇ ಮೂಡಿದವು. ಇತ್ತೀಚೆಗಷ್ಟೆ ನಟ ದರ್ಶನ್ ಜೈಲಿನಲ್ಲಿದ್ದಾಗ ಜಗದೀಶ್ ವಿಡಿಯೊ ಹಂಚಿಕೊಂಡಿದ್ದರು. ಹೀಗಾಗಿ ದರ್ಶನ್ ಅಭಿಮಾನಿಗಳೇ ಈ ಕೆಲಸವನ್ನು ಮಾಡಿರಬೇಕು ಎಂದೆಲ್ಲಾ ಪೋಸ್ಟ್‌ಗಳು ಹರಿದಾಡಿದವು.
ಇದೀಗ ಈ ಘಟನೆಯ ಕುರಿತು ಮಾತನಾಡಿರುವ ಲಾಯರ್ ಜಗದೀಶ್ ಅದು ನಮ್ಮ ಕಾಂಪ್ಲೆಂಕ್ಸ್, ಅದರ ಮುಂದೆ ರಸ್ಗೆ ಬ್ಲಾಕ್ ಮಾಡಿಕೊಂಡು ಅಣ್ಣಮ್ಮ ಕೂರಿಸಿರುವುದರಿಂದ ತೊಂದರೆಯಾಗುತ್ತಿತ್ತು. ಹೀಗಾಗಿ ಅದರ ವಿರುದ್ಧ ದೂರು ನೀಡಿದ್ದೆ. ಅದಕ್ಕೆ ಇಷ್ಟೆಲ್ಲಾ ಆಗಿದೆ ಎಂದು ಸ್ಪಷ್ಟನೆ ನೀಡಿದರು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


