Friday, August 7, 2026
spot_img
More
    spot_img
    HomeLatest news12 ವಿದೇಶಿ ಡಿಗ್ರಿ ಜೊತೆ ಪೋಸ್ ಕೊಟ್ಟ 'ಚಪ್ಪಾಳೆ ತಟ್ಟಿದ್ರೆ ಕೊರೊನಾ ವೈರಸ್ ಓಡಿ ಹೋಗುತ್ತೆ'...

    12 ವಿದೇಶಿ ಡಿಗ್ರಿ ಜೊತೆ ಪೋಸ್ ಕೊಟ್ಟ ‘ಚಪ್ಪಾಳೆ ತಟ್ಟಿದ್ರೆ ಕೊರೊನಾ ವೈರಸ್ ಓಡಿ ಹೋಗುತ್ತೆ’ ಎಂದಿದ್ದ ಯುವತಿ; ಎದ್ದು ಬಿದ್ದು ನಕ್ಕ ನೆಟ್ಟಿಗರು

    ಸಾಮಾಜಿಕ ಜಾಲತಾಣ ರಾಜ್ಯದಲ್ಲಿ ಜನಪ್ರಿಯತೆ ಗಳಿಸಿದಾಗಿನಿಂದ ಇಲ್ಲಿಯವರೆಗೂ ಹಲವಾರು ಮಂದಿ ಭಿನ್ನ ವಿಭಿನ್ನ ಕಾರಣಗಳಿಗೆ ಟ್ರೋಲ್ ಆಗಿದ್ದಾರೆ.

    Advertisement

    ಈ ಪೈಕಿ ಕೆಲವರು ಅರಿವಿಲ್ಲದೆ ಮಾಡಿದ ತಪ್ಪುಗಳಿಂದ ಹಾಗೂ ಗೊತ್ತಿಲ್ಲದೇ ನೀಡಿದ ಹೇಳಿಕೆಗಳಿಂದ ಟ್ರೋಲ್ ಆದರೆ, ಇನ್ನೂ ಕೆಲವರು ಕೆಲವು ವಿಷಯಗಳ ಬಗ್ಗೆ ತಪ್ಪಾದ ಮಾಹಿತಿ ಎಂದು ತಿಳಿದಿದ್ದರೂ ಸಹ ಸಾಲು ಸಾಲು ಸುಳ್ಳುಗಳನ್ನು ಹೇಳಿ ನಂತರ ಸಿಕ್ಕಿ ಬಿದ್ದು ಟ್ರೋಲ್ ಆದ ಪ್ರಸಂಗಗಳಿವೆ. ಅಂತಹ ವ್ಯಕ್ತಿಗಳ ಪೈಕಿ ಕೊರೊನಾ ವೈರಸ್ ಸಂದರ್ಭದಲ್ಲಿ ಚಪ್ಪಾಳೆ ತಟ್ಟುವುದರಿಂದ ವೈರಸ್ ಓಡಿ ಹೋಗುತ್ತೆ ಎಂದು ಮೂರ್ಖ ಹೇಳಿಕೆ ನೀಡಿದ್ದ ಯುವತಿ ಸಹ ಒಬ್ಬಳು.

    ಅದೇ ಯುವತಿ ಇದೀಗ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಮತ್ತೊಮ್ಮೆ ಟ್ರೋಲ್ ಆಗುತ್ತಿದ್ದು, ಈ ಬಾರಿ ಡಿಗ್ರಿ ಕುರಿತಾಗಿ ನೆಟ್ಟಿಗರ ಬಾಯಿಗೆ ಆಹಾರವಾಗಿದ್ದಾಳೆ. ಹೌದು, ಹಾರಿಕಾ ಮಂಜುನಾಥ್ ಎಂಬ ಯುವತಿ ವಿಭಿನ್ನ ದೇಶಗಳ ಬರೋಬ್ಬರಿ 12 ಡಿಗ್ರಿ ಸರ್ಟಿಫಿಕೇಟ್ ಜೊತೆ ಪೋಸ್ ನೀಡಿದ್ದು, ಆ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾಳೆ.

    ಆದರೆ ಕೊರೊನಾ ಸಮಯದಲ್ಲಿ ‘ಚಪ್ಪಾಳೆ ತಟ್ಟುವುದರಿಂದ, ಗಂಟೆ – ಜಾಗಟೆ ಬಾರಿಸುವುದರಿಂದ, ಶಂಖ ಊದುವುದರಿಂದ ವೈಬ್ರೇಶನ್ ಉಂಟಾಗಲಿದ್ದು, ಇದರಿಂದಾಗಿ ನಮ್ಮ ಸುತ್ತ ಮುತ್ತ ಇರುವ ವೈರಸ್ ಸಾಯುತ್ತೆ’ ಎಂಬ ಅವೈಜ್ಞಾನಿಕ ಹೇಳಿಕೆ ನೀಡಿದ್ದ ಈಕೆಗೆ ಅಮೆರಿಕಾದ ಯಾಲೆ ವಿಶ್ವ ವಿದ್ಯಾನಿಲಯ ‘ರಾಕೆಟ್ ಸೈನ್ಸ್’ ವಿಷಯಕ್ಕೆ ಡಿಗ್ರಿ ನೀಡಿತಾ ಎಂದು ಅನುಮಾನಗೊಂಡಿರುವ ನೆಟ್ಟಿಗರು ಆಕೆಯ ಪೋಸ್ಟ್ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಇದೆಲ್ಲಾ ಫೇಕ್ ಎಂದು ಕೆಲವರು ನೇರ ಆರೋಪ ಮಾಡಿದ್ದರೆ, ಇನ್ನೂ ಕೆಲವರು ಕಲರ್ ಜೆರಾಕ್ಸ್ ಎಂದು ಟೀಕೆ ಮಾಡಿದ್ದಾರೆ. ಇನ್ನೂ ಕೆಲವರು ಇದೆಲ್ಲಾ ಆನ್ಲೈನ್ ಕೋರ್ಸ್ ಗಳಾಗಿದ್ದು ಯಾರು ಬೇಕಾದರೂ ಈ ಸರ್ಟಿಫಿಕೇಟ್ ಗಳನ್ನು ಪಡೆದುಕೊಳ್ಳಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

    ಹೀಗೆ ಮತ್ತೊಮ್ಮೆ ಟ್ರೋಲ್ ಆಗಿರುವ ಹಾರಿಕಾ ಮಂಜುನಾಥ್ ಡ್ರೋನ್ ಪ್ರತಾಪ್ ರೀತಿ ‘ಮೇಲ್ ಮಾಡ್ತೀನಿ, ಐ ಕಾಂಟ್ ಡಿಸ್ಕ್ಲೋಸ್ ಇಟ್’ ಎಂಬ ಹೇಳಿಕೆಗಳನ್ನು ನೀಡಿ ಜಾರಿಕೊಳ್ಳದೇ ತಮಗೆ ಬಂದಿರುವ ಡಿಗ್ರಿಗಳು ಎಷ್ಟು ನಿಜ ಎಂಬುದನ್ನು ಸಾಬೀತುಪಡಿಸಿಕೊಳ್ಳಬೇಕಿದೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    Leave a Reply

    Related News

    ಎಸ್‌ಐಆರ್ ಅಕ್ರಮ: ಎನ್‌ಡಿಎ ನಿಯೋಗ ಮುಖ್ಯ ಚುನಾವಣಾ ಆಯುಕ್ತರಿಗೆ ದೂರು

    ಕರ್ನಾಟಕದಲ್ಲಿ ಎಸ್‌ಐಆರ್ ಪ್ರಕ್ರಿಯೆ ದುರುಪಯೋಗದ ಆರೋಪದೊಂದಿಗೆ ಕುಮಾರಸ್ವಾಮಿ ಮತ್ತು ಪ್ರಲ್ಹಾದ ಜೋಶಿ ನೇತೃತ್ವದ ಎನ್‌ಡಿಎ ನಿಯೋಗ ನವದೆಹಲಿಯಲ್ಲಿ ಮುಖ್ಯ ಚುನಾವಣಾ ಆಯುಕ್ತರಿಗೆ ದಾಖಲೆ ಸಮೇತ ದೂರು ಸಲ್ಲಿಸಿತು.

    ಮಾದಪಟ್ಟಣ ಕ್ವಾರಿ ದುರಂತ: ಅಶೋಕ ತಲಾ ₹50 ಲಕ್ಷ ಪರಿಹಾರ ಆಗ್ರಹ

    ಬೆಂಗಳೂರು ಮಾದಪಟ್ಟಣ ಕ್ವಾರಿಯಲ್ಲಿ ಬಂಡೆ ಬಿದ್ದು 7 ಕಾರ್ಮಿಕರು ಮೃತಪಟ್ಟ ಘಟನೆಗೆ ಪ್ರತಿಪಕ್ಷ ನಾಯಕ ಆರ್.ಅಶೋಕ ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ದೂರಿ ತಲಾ ₹50 ಲಕ್ಷ ಪರಿಹಾರ ಒತ್ತಾಯಿಸಿದ್ದಾರೆ.

    Most Popular

    Recent Comments

    Home
    Play
    Notification
    Search

    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe now to keep reading and get access to the full archive.

    Continue reading