ಈ ವರ್ಷದ ಎರಡನೇ ತಿಂಗಳು ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದು, ಇಲ್ಲಿಯವರೆಗೂ ಇಡೀ ದಕ್ಷಿಣ ಭಾರತದಾದ್ಯಂತ ಸಂಚಲನ ಸೃಷ್ಟಿಸಿದಂತಹ ಯಾವೊಂದು ಚಿತ್ರವೂ ಸಹ ಬಿಡುಗಡೆಗೊಂಡಿಲ್ಲ.
ಕೆಲವು ಚಿತ್ರಗಳು ಸಿನಿ ರಸಿಕರಿಂದ ಮೆಚ್ಚುಗೆ ಪಡೆದುಕೊಂಡವಾದರೂ ಈ ಚಿತ್ರವನ್ನು ನೋಡಿ ಮಿಸ್ ಮಾಡಿಕೊಳ್ಳಬೇಡಿ ಎನ್ನುವ ಮಟ್ಟಕ್ಕೆ ಯಾವ ಚಿತ್ರವೂ ಗೆಲ್ಲಲಿಲ್ಲ. ಆದರೆ ಮೊನ್ನೆ (ಫೆಬ್ರವರಿ 21) ಬಿಡುಗಡೆಯಾದ ತಮಿಳಿನ ಈ ಚಿತ್ರ ಆ ಕೆಲಸ ಮಾಡುವತ್ತ ಕಾಲಿಟ್ಟಿದೆ.
ಚಿತ್ರದ ಮೊದಲ ಪ್ರದರ್ಶನ ಮುಗಿಯುತ್ತಿದ್ದಂತೆ ಚಿತ್ರ ನೋಡಿ ಹೊರಬಂದು ನೀಡಿದ ಸಹಸ್ರಾರು ಮೆಚ್ಚುಗೆಯ ವಿಮರ್ಶೆಗಳು ಚಿತ್ರವನ್ನು ಈ ಮಟ್ಟಕ್ಕೆ ಗೆಲ್ಲಿಸಿವೆ. ಚಿತ್ರ ಒಂದೊಳ್ಳೆ ಯೂತ್ ಕಾಮಿಡಿ ಎಂಟರ್‌ಟೈನರ್, ಇಂತಹ ಚಿತ್ರಗಳು ಇನ್ನಷ್ಟು ಬರಬೇಕು, ಇದು ಅಪರೂಪದ ಸಿನಿಮಾ ಎಂದು ಎಕ್ಸ್ ಖಾತೆಯಲ್ಲಿ ಹಾಗೂ ಬುಕ್‌ಮೈಶೋನಲ್ಲಿ ವಿಮರ್ಶೆಗಳನ್ನು ಹಂಚಿಕೊಳ್ಳುತ್ತಿದ್ದಾರೆ ಪ್ರೇಕ್ಷಕರು.
ಇನ್ನು ಸ್ಯಾಕ್‌ನಿಕ್ ವೆಬ್‌ಸೈಟ್ ಪ್ರಕಾರ ಚಿತ್ರ ಮೊದಲ ದಿನ ರಾಜ್ಯಾದ್ಯಂತ 6.15 ಕೋಟಿ ನೆಟ್ ಕಲೆಕ್ಷನ್ ಹಾಗೂ ಎರಡನೇ ದಿನ 10.25 ಕೋಟಿ ರೂ ನೆಟ್ ಕಲೆಕ್ಷನ್ ಸೇರಿದಂತೆ ಒಟ್ಟು ಎರಡು ದಿನಕ್ಕೆ 16.75 ಕೋಟಿ ರೂಪಾಯಿ ನೆಟ್ ಕಲೆಕ್ಷನ್ ಅನ್ನು ಮಾಡಿದೆ.
ಚಿತ್ರದಲ್ಲಿ ನಾಯಕನಾಗಿ ಕೋಮಾಲಿ ಹಾಗೂ ಲವ್ ಟುಡೇ ಚಿತ್ರದ ನಿರ್ದೇಶಕ ಪ್ರದೀಪ್ ರಂಗನಾಥನ್ ಹಾಗೂ ನಾಯಕಿಯಾಗಿ ಅನುಪಮಾ ಪರಮೇಶ್ವರನ್ ನಟಿಸಿದ್ದಾರೆ. ಚಿತ್ರಕ್ಕೆ ಅಶ್ವತ್ಥ್ ಮಾರಿಮುತ್ತು ಕಥೆ ಬರೆದು ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ನಾಯಕ ಪ್ರದೀಪ್ ರಂಗನಾಥನ್ ಆರ್‌ಸಿಬಿ ಅಭಿಮಾನಿಯಾಗಿ ಕಾಣಿಸಿಕೊಂಡಿದ್ದಾರೆ. ಹೌದು, ಚಿತ್ರದ ದೃಶ್ಯವೊಂದು ಎಕ್ಸ್‌ನಲ್ಲಿ ಭಾರೀ ವೈರಲ್ ಆಗುತ್ತಿದ್ದು, ಈ ದೃಶ್ಯದಲ್ಲಿ ಸಿಎಸ್‌ಕೆ ವಿರುದ್ಧ ಆರ್‌ಬಿ ಪಂದ್ಯವನ್ನು ಸೋತಿರುತ್ತದೆ. ಸುತ್ತಲೂ ಸಿಎಸ್‌ಕೆ ಅಭಿಮಾನಿಗಳು ಸಂಭ್ರಮಿಸುತ್ತಿರುವಾಗ ನಾಯಕನ ಬಳಿ ಬರುವ ನಾಯಕಿ ‘ನೀನು ಆರ್‌ಸಿಬಿ ಫ್ಯಾನಾ? ಹೇಗೆ?’ ಎಂದು ಪ್ರಶ್ನೆ ಕೇಳುತ್ತಾಳೆ. ಈ ಪ್ರಶ್ನೆಗೆ ಉತ್ತರಿಸುವ ನಾಯಕ ‘ಸೋಲುತ್ತಾರೆ ಎನ್ನುವ ಕಾರಣಕ್ಕೆ ಹೇಗೆ ತಂಡವನ್ನು ಬಿಟ್ಟುಕೊಡಲು ಆಗುತ್ತೆ?’ ಎನ್ನುತ್ತಾನೆ. ಸದ್ಯ ಈ ದೃಶ್ಯವನ್ನು ಹಂಚಿಕೊಳ್ಳುತ್ತಿರುವ ಆರ್‌ಸಿಬಿ ಅಭಿಮಾನಿಗಳು ವೈರಲ್ ಮಾಡುತ್ತಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


