ಲಾಹೋರ್: ನಿನ್ನೆ (ಫೆಬ್ರವರಿ 22) ಇಲ್ಲಿನ ಗಡ್ಡಾಫಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025ರ ಚಾಂಪಿಯನ್ಸ್ ಟ್ರೋಫಿಯ ಗ್ರೂಪ್ ಹಂತದ ನಾಲ್ಕನೇ ಪಂದ್ಯದಲ್ಲಿ ಆಸ್ಟ್ರೇಲಿಯಾ ಇಂಗ್ಲೆಂಡ್ ನೀಡಿದ 352 ರನ್ಗಳ ಬೃಹತ್ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟುವ ಮೂಲಕ ಐಸಿಸಿ ಟೂರ್ನಿಗಳಲ್ಲಿ ಅತಿಹೆಚ್ಚು ರನ್ ಮೊತ್ತ ಚೇಸ್ ಮಾಡಿದ ದಾಖಲೆ ಬರೆದಿದೆ.
ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಬೆನ್ ಡಕೆಟ್ ಶತಕದ ನೆರವಿನಿಂದ 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 351 ರನ್ ಕಲೆಹಾಕಿ ಆಸ್ಟ್ರೇಲಿಯಾ ಜೋಸ್ ಇಂಗ್ಲಿಸ್ ಹಾಗೂ ಅಂತಿಮ ಹಂತದಲ್ಲಿ ಮ್ಯಾಕ್ಸ್ವೆಲ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 47.3 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 356 ರನ್ ಕಲೆಹಾಕಿತು.
ಈ ಮೂಲಕ 2023ರಲ್ಲಿ ಪಾಕಿಸ್ತಾನ ಬರೆದಿದ್ದ ಐಸಿಸಿ ಟೂರ್ನಿಗಳಲ್ಲಿ ಅತಿದೊಡ್ಡ ರನ್ ಚೇಸ್ ದಾಖಲೆಯನ್ನು ಆಸ್ಟ್ರೇಲಿಯಾ ಮುರಿದುಹಾಕಿದೆ. ಈ ಹಿಂದೆ 2023ರ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ನೀಡಿದ್ದ 345 ರನ್ಗಳ ಗುರಿಯನ್ನು ಯಶಸ್ವಿಯಾಗಿ ಬಾರಿಸಿತ್ತು.
ಐಸಿಸಿ ಟೂರ್ನಿಗಳಲ್ಲಿ ಅತಿದೊಡ್ಡ ಚೇಸ್ಗಳು ( ಟಾಪ್ 3)
- ಆಸ್ಟ್ರೇಲಿಯಾ 352vs ಇಂಗ್ಲೆಂಡ್, ಲಾಹೋರ್, 2025
- ಪಾಕಿಸ್ತಾನ 345 vs ಶ್ರೀಲಂಕಾ, ಹೈದರಾಬಾದ್ 2023
- ಐರ್ಲೆಂಡ್ 329 vs ಇಂಗ್ಲೆಂಡ್, ಬೆಂಗಳೂರು, 2011
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


