ದುಬೈ: 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಲೀಗ್ ಹಂತದ ಐದನೇ ಪಂದ್ಯ ಇಂದು (ಫೆಬ್ರವರಿ 23) ದುಬೈ ಕ್ರೀಡಾಂಗಣದಲ್ಲಿ ನಡೆಯುತ್ತಿದ್ದು, ಪಂದ್ಯದಲ್ಲಿ ಬದ್ಧ ವೈರಿಗಳಾದ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಬ್ಯಾಟಿಂಗ್ ಆರಿಸಿಕೊಂಡಿದೆ. ಕಳೆದ ಪಂದ್ಯದಲ್ಲಿ ಗಾಯಕ್ಕೊಳಗಾದ ಫಖರ್ ಜಮಾನ್ ಬದಲಾಗಿ ಇಮಾಮ್ ಉಲ್ ಹಕ್ ತಂಡಕ್ಕೆ ಸೇರ್ಪಡೆಯಾಗಿದ್ದು ಬಿಟ್ಟರೆ ಪಾಕ್ ತಂಡದಲ್ಲಿ ಇನ್ನೇನೂ ಬದಲಾವಣೆ ಆಗಿಲ್ಲ. ಇತ್ತ ಬಾಂಗ್ಲಾದೇಶದ ವಿರುದ್ಧ ಕಣಕ್ಕಿಳಿದಿದ್ದ ಭಾರತ ತಂಡವೇ ಈ ಪಂದ್ಯದಲ್ಲೂ ಸಹ ಸಹ ಕಣಕ್ಕಿಳಿದಿದೆ.
ಇನ್ನು ಈ ಪಂದ್ಯದಲ್ಲಿ ಟಾಸ್ ಸೋಲುವ ಮೂಲಕ ಏಕದಿನ ಪಂದ್ಯಗಳಲ್ಲಿ ಸತತವಾಗಿ ಅತಿಹೆಚ್ಚು ಬಾರಿ ಟಾಸ್ ಸೋತ ತಂಡ ಎನಿಸಿಕೊಂಡಿದೆ ಟೀಮ್ ಇಂಡಿಯಾ. ಈ ಹಿಂದೆ ನೆದರ್ಲೆಂಡ್ಸ್ ಹೆಸರಿನಲ್ಲಿದ್ದ ಈ ಬೇಡವಾದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿದೆ.
ಹೀಗೆ ಸತತವಾಗಿ ಟಾಸ್ ಸೋತ ಬೆನ್ನಲ್ಲೇ ಮಾತನಾಡಿದ ರೋಹಿತ್ ಶರ್ಮಾ ಅದೆಲ್ಲಾ ಮ್ಯಾಟರ್ ಆಗಲ್ಲ ಎಂದು ಟಾಸ್ ಸೋಲುವುದರ ಮೇಲೆ ಪಂದ್ಯ ನಿಂತಿಲ್ಲ ಎಂದಿದ್ದಾರೆ.
“ಅದೆಲ್ಲಾ ಮ್ಯಾಟರ್ ಆಗಲ್ಲ. ಅವರು ಟಾಸ್ ಗೆದ್ದಿದ್ದಾರೆ, ನಾವು ಮೊದಲು ಬೌಲಿಂಗ್ ಮಾಡುತ್ತೇವೆ ಅಷ್ಟೇ. ಕಳೆದ ಪಂದ್ಯದಂತೆಯೇ ಈ ಪಂದ್ಯದಲ್ಲಿ ಪಿಚ್ ಸ್ಲೋ ಇದ್ದು, ನಮ್ಮಲ್ಲಿ ನುರಿತ ಬ್ಯಾಟಿಂಗ್ ಬ್ಯಾಟಿಂಗ್ ವಿಭಾಗವಿರುವುದರಿಂದ ಸ್ಲೋ ಪಿಚ್‌ಗಳಲ್ಲಿ ಏನು ಮಾಡಬೇಕೆಂಬುದು ನಮಗೆ ತಿಳಿದಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಿಂದಲೂ ಉತ್ತಮ ಪ್ರದರ್ಶನ ಬೇಕು. ಕಳೆದ ಪಂದ್ಯ ನಮಗೆ ಸುಲಭವಾಗಿರಲಿಲ್ಲ ಹಾಗೂ ಅದು ಒಳ್ಳೆಯದೂ ಕೂಡ. ಒತ್ತಡದಲ್ಲಿದ್ದು ನಮ್ಮನ್ನು ನಾವೇ ಪರೀಕ್ಷಿಸಿಕೊಳ್ಳಬೇಕು” ಎಂದು ರೋಹಿತ್ ಹೇಳಿದರು.
ಕಳೆದ 2023ರ ಏಕದಿನ ವಿಶ್ವಕಪ್‌ನ ಫೈನಲ್ ಪಂದ್ಯದಿಂದ ಹಿಡಿದು ಇಲ್ಲಿಯವರೆಗೆ ಸತತವಾಗಿ ಭಾರತ ಸತತವಾಗಿ 12 ಪಂದ್ಯಗಳಲ್ಲಿ ಟಾಸ್ ಸೋತಿದೆ. ನೆದರ್ಲೆಂಡ್ಸ್ ಮಾರ್ಚ್ 2011ರಿಂದ ಆಗಸ್ಟ್ 2013ರವರೆಗೆ ಸತತವಾಗಿ 11 ಪಂದ್ಯಗಳಲ್ಲಿ ಟಾಸ್ ಸೋತಿತ್ತು.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


