ಇತ್ತೀಚಿನ ದಿನಗಳಲ್ಲಿ ಜಂಕ್ ಫುಡ್ ಮತ್ತು ಪಾಸ್ಟ್ ಪುಢ್ ಸೇವನೆಯಿಂದ ಹೊಟ್ಟೆ ಹಾಳಾಗುತ್ತಿರುವುದು ಸಾಮಾನ್ಯವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮನೆಯಲ್ಲೇ ಆರೋಗ್ಯಕರ ಮತ್ತು ಬಾಯಿ ಚಪ್ಪರಿಸುವಂತಹ ವಿಶೇಷ ಬೆಂಡೆಕಾಯಿ ಪಾಪ್‌ಕಾರ್ನ್ ತಯಾರಿಸಿ ಸವಿಯಿರಿ. ಬೆಂಡೆಕಾಯಿ ಆರೋಗ್ಯಕ್ಕೆ ಬಹುಮುಖ್ಯವಾದ ತರಕಾರಿ ಇದು ದೇಹದಲ್ಲಿರುವ ಕೆಟ್ಟ ಕೊಬ್ಬಿನಾಂಶವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಬೆಂಡೆಕಾಯಿಯಲ್ಲಿ ಇರುವ ಪೆಕ್ಟಿನ್ ಎಂಬ ಫೈಬರ್ ಅಂಶವು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಸಹಾಯಕವಾಗಿದೆ. ಅನೇಕರಿಗೆ ಸಂಜೆ ಸ್ನಾಕ್ಸ್ ತಿನ್ನುವುದು ಒಂದು ಅಭ್ಯಾಸವಾಗಿದ್ದು, ಇಂತಹ ಸಮಯದಲ್ಲಿ ಆರೋಗ್ಯಕರ ಮತ್ತು ರುಚಿಕರವಾದ ಉಪಹಾರಗಳು ಬೇಕಾಗುತ್ತವೆ. ಇಂದಿನ ಸೋಷಿಯಲ್ ಮೀಡಿಯಾ ಯುಗದಲ್ಲಿ, ಜನರು ಯೂಟ್ಯೂಬ್ ಮತ್ತು ಇತರ ವೇದಿಕೆಗಳಿಂದ ಹೊಸ ಪಾಕವಿಧಾನಗಳನ್ನು ಕಲಿತು, ಮನೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಹಾಗಾಗಿ, ಇಂದು ನಾವು ಈ ಪೋಷಕಾಂಶಯುತ ಹಾಗೂ ರುಚಿಕರವಾದ,ಆರೋಗ್ಯಕರ ಚಾಟ್ ಶೈಲಿಯ ಬೆಂಡೆಕಾಯಿ ಪಾಪ್‌ಕಾರ್ನ್‌ನ್ನು ಹೇಗೆ ತಯಾರಿಸಬಹುದು ಎಂಬುದನ್ನು ವಿವರಿಸುತ್ತೇವೆ. ಮನೆಯಲ್ಲೇ ಮಾಡಿ, ಸಂಜೆ ಸ್ನಾಕ್ಸ್ ಆಗಿ ಸವಿಯಿರಿ!

ಬೇಕಾಗುವ ಪದಾರ್ಥಗಳು.
ಬೆಂಡೆಕಾಯಿ- 15-20
ಅರಿಶಿಣದ ಪುಡಿ- ಅರ್ಧ ಚಮಚ
ಅಚ್ಚ ಖಾರದಪುಡಿ- 2 ಚಮಚ
ಆಮ್ಚೂರ್ ಪುಡಿ- 1 ಚಮಚ
ಗರಂ ಮಸಾಲೆ ಪುಡಿ- ಅರ್ಧ ಚಮಚ
ಉಪ್ಪು- ರುಚಿಗೆ ತಕ್ಕಷ್ಟು
ಕಾರ್ನ್ ಫ್ಲೋರ್- 1 ಚಮಚ
ಮೈದಾ ಹಿಟ್ಟು- 1 ಬಟ್ಟಲು
ಬ್ರೆಡ್ ಕ್ರಂಬ್ಸ್- 1-2 ಬಟ್ಟಲು
ಎಣ್ಣೆ- ಕರಿಯಲು ಅಗತ್ಯವಿದ್ದಷ್ಟು

ಬೆಂಡೆಕಾಯಿ ಪಾಪ್‌ಕಾರ್ನ್ ತಯಾರಿಸುವ ವಿಧಾನ:
ಮೊದಲು ಬೆಂಡೆಕಾಯಿಗಳನ್ನು ಸುಮಾರು 1 ಇಂಚು ಉದ್ದಕ್ಕೆ ಕತ್ತರಿಸಿ. ನಂತರ ಅದು ಹಿಗೆಯಾಗದಂತೆ ಚೆನ್ನಾಗಿ ಒರೆಸಿಕೊಂಡು ಒಣಗಿಸಿಕೊಳ್ಳಿ.
ಈ ಬೆಂಡೆಕಾಯಿಗೆ ಅರಿಶಿನ, 1 ಚಮಚ ಮೆಣಸಿನ ಪುಡಿ, ಸ್ವಲ್ಪ ಗರಂ ಮಸಾಲಾ, ರುಚಿಗೆ ತಕ್ಕಷ್ಟು ಉಪ್ಪು ಮತ್ತು 2 ಚಮಚ ಕಾರ್ನ್ ಫ್ಲೋರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಇದನ್ನು 15 ನಿಮಿಷ ಮಸಾಲೆ ಸೇರಿಕೊಳ್ಳುವಂತೆ ಬದಿಗಿಟ್ಟು ಬಿಡಿ.
ಇನ್ನೊಂದು ಪಾತ್ರೆಯಲ್ಲಿ 1 ಕಪ್ ಮೈದಾ, ¾ ಕಪ್ ಕಾರ್ನ್ ಫ್ಲೋರ್, 1 ಚಮಚ ಖಾರದ ಪುಡಿ, ಉಪ್ಪು ಹಾಗೂ ನೀರು ಸೇರಿಸಿ ಉಂಡೆಗಳಿಲ್ಲದ ಮೃದುವಾದ ಹಿಟ್ಟನ್ನು ತಯಾರಿಸಿ.
ಈಗ ಮಸಾಲೆ ಮಿಶ್ರಿತ ಬೆಂಡೆಕಾಯಿಗಳನ್ನು ತಯಾರಿಸಿದ ಹಿಟ್ಟಿನಲ್ಲಿ ಅದ್ದಿ ತೆಗೆದು, ಬ್ರೆಡ್ ಕ್ರಂಪ್ಸ್‌ನಲ್ಲಿ ಚೆನ್ನಾಗಿ ರೋಲ್ ಮಾಡಿ.ಈಗ ಈ ಬೆಂಡೆಕಾಯಿಗಳನ್ನು ಬಿಸಿಯ ಎಣ್ಣೆಯಲ್ಲಿ ಹಾಕಿ, ಚಿನ್ನದ ಬಣ್ಣ ಬರುತ್ತಿರುವವರೆಗೆ ಕರಿಯಿರಿ.
ಕ್ರಿಸ್ಪಿಯಾಗಿ ಕರಿದು ಬಂದ ಮೇಲೆ, ಟಿಶ್ಯೂ ಪೇಪರ್‌ನಲ್ಲಿ ಎಣ್ಣೆ ಹಾಕಿ. ಬಿಸಿ ಬಿಸಿ, ಬಾಯಿಯಲ್ಲಿ ಕರಗುವ ಸ್ಪೆಷಲ್ ಬೆಂಡೆಕಾಯಿ ಪಾಪ್‌ಕಾರ್ನ್ ಸವಿಯಲು ಸಿದ್ಧ!
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


