Thursday, November 5, 2026
spot_img
More
    spot_img
    HomeBreaking Newsಬಿಹಾರ ಚುನಾವಣೆ: ಮಹಾಘಟಬಂಧನ್ ಸಿಎಂ, ಡಿಸಿಎಂ ಘೋಷಣೆ

    ಬಿಹಾರ ಚುನಾವಣೆ: ಮಹಾಘಟಬಂಧನ್ ಸಿಎಂ, ಡಿಸಿಎಂ ಘೋಷಣೆ

    ಬಿಹಾರ ಚುನಾವಣೆ 2025ಕ್ಕೆ ಮಹಾಘಟಬಂಧನ್ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಮಾಡಲಾಗಿದೆ. ಕಾಂಗ್ರೆಸ್, ಆರ್‌ಜೆಡಿ, ಎಡಪಕ್ಷಗಳ ಮೈತ್ರಿಕೂಟ ಮಹಾಘಟಬಂಧನ್ ಈ ಮೂಲಕ ಚುನಾವಣೆಗೂ ಮೊದಲೇ ಸಿಎಂ ಅಭ್ಯರ್ಥಿ ಘೋಷಣೆ ಮಾಡಿದೆ.

    ಗುರುವಾರ ಪಾಟ್ನಾದಲ್ಲಿ ಮಹಾಘಟಬಂಧನ್ ಮೈತ್ರಿಕೂಟದ ಪಕ್ಷಗಳ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರ್‌ಜೆಡಿ ನಾಯಕ ತೇಜಸ್ವಿ ಯಾದವ್‌ ಮೈತ್ರಿಕೂಟದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಮಾಡಲಾಯಿತು.

    ಕಾಂಗ್ರೆಸ್‌ನ ಹಿರಿಯ ನಾಯಕ ಅಶೋಕ್ ಗೆಹ್ಲೋಟ್, ತೇಜಸ್ವಿ ಯಾದವ್ ಸೇರಿದಂತೆ ಇತರರು ಪತ್ರಿಕಾಗೋಷ್ಠಿಯಲ್ಲಿದ್ದರು. ಇದೇ ಸಂದರ್ಭದಲ್ಲಿ ಮೈತ್ರಿಕೂಟದ ಪಕ್ಷವಾದ ವಿಐಪಿಯ ಮುಖೇಶ್ ಸಾಹಾನಿ ಉಪಮುಖ್ಯಮಂತ್ತಿ ಅಭ್ಯರ್ಥಿ ಎಂದು ಸಹ ಘೋಷಿಸಲಾಯಿತು.

    ಬಿಹಾರದ 243 ಸ್ಥಾನಗಳಿಗೆ ನವೆಂಬರ್ 6, 11ರಂದು ಎರಡು ಹಂತದಲ್ಲಿ ಮತದಾನ ನಡೆಯಲಿದೆ. ನವೆಂಬರ್ 14ರಂದು ಫಲಿತಾಂಶ ಪ್ರಕಟವಾಗಲಿದೆ. ಮಹಾಘಟಬಂಧನ್ ಮತ್ತು ಎನ್‌ಡಿಎ ಮೈತ್ರಿಕೂಟ ಚುನಾವಣೆಯಲ್ಲಿ ಎದುರಾಳಿಗಳು.

    ಸೀಟು ಹಂಚಿಕೆ ಕಗ್ಗಂಟು: ಮಹಾಘಟಬಂಧನ್ ಮೈತ್ರಿಕೂಟ ಬಿಹಾರದ 243 ವಿಧಾನಸಭಾ ಕ್ಷೇತ್ರಗಳಿಗೆ 253 ಅಭ್ಯರ್ಥಿಗಳನ್ನು ಘೋಷಣೆ ಮಾಡಿದೆ. ಮೈತ್ರಿಕೂಟದ ಪಕ್ಷಗಳ ನಡುವಿನ ಸೀಟು ಹಂಚಿಕೆ ಗೊಂದಲದ ಹಿನ್ನಲೆಯಲ್ಲಿ ಹೀಗಾಗಿದೆ. ಸೀಟು ಹಂಚಿಕೆ ಅಂತಿಮಗೊಂಡರೆ ಹಲವು ಅಭ್ಯರ್ಥಿಗಳ ನಾಮಪತ್ರ ವಾಪಸ್ ಪಡೆಯುವ ನಿರೀಕ್ಷೆ ಇದೆ.

    ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಪುತ್ರ ತೇಜಸ್ವಿ ಯಾದವ್ ಬಿಹಾರ ಚುನಾವಣೆ 2025ಕ್ಕೆ ಮುಖ್ಯಮಂತ್ರಿ ಅಭ್ಯರ್ಥಿ. ಚುನಾವಣೆಯಲ್ಲಿ ಅವರು ರಘೋಪುರ ಕ್ಷೇತ್ರದ ಅಭ್ಯರ್ಥಿ. ವಿಕಾಸಶೀಲ ಇನ್ಸಾನ್ ಪಕ್ಷಕ್ಕೆ ಮೈತ್ರಿಕೂಟದಲ್ಲಿ ಕಡಿಮೆ ಸೀಟು ನೀಡಲಾಗಿದೆ. ಆದರೆ ಪಕ್ಷದ ಮುಖೇಶ್ ಸಾಹನಿ ಉಪಮುಖ್ಯಮಂತ್ರಿ ಅಭ್ಯರ್ಥಿ.

    ಮುಖೇಶ್ ಸಾಹನಿ ಮಾತನಾಡಿ, “ಈ ಕ್ಷಣಕ್ಕಾಗಿ ನಾನು ಮತ್ತು ಬಿಹಾರದ ಲಕ್ಷಾಂತರ ಜನರು ಕಳೆದ ಮೂರು ವರ್ಷಕ್ಕಿಂತ ಹೆಚ್ಚು ಕಾಲದಿಂದ ಕಾಯುತ್ತಿದ್ದೆವು. ಇದು ಕೇವಲ ವಿಐಪಿ ಅಥವಾ ಮುಖೇಶ್ ಸಾಹನಿಯ ಕಾಯುವಿಕೆ ಅಲ್ಲ. ಪಕ್ಷದ ಲಕ್ಷಾಂತರ ಕಾರ್ಯಕರ್ತರು ಈ ಕ್ಷಣಕ್ಕಾಗಿ ಕಾಯುತ್ತಿದ್ದರು. ಬಿಜೆಪಿ ನಮ್ಮ ಪಕ್ಷವನ್ನು ಒಡೆದು, ನಮ್ಮ ಶಾಸಕರನ್ನು ಸೆಳೆಯಿತು. ಆ ಸಮಯದಲ್ಲಿ ನಾವು ನಮ್ಮ ಕೈಯಲ್ಲಿ ಗಂಗಾಜಲ ಹಿಡಿದು ಶಪಥ ಮಾಡಿದೆವು ಬಿಜೆಪಿಯನ್ನು ಅಧಿಕಾರದಿಂದ ದೂರ ಮಾಡುವ ತನಕ ಬಿಡುವುದಿಲ್ಲ ಎಂದು. ಆ ಕ್ಷಣ ಈಗ ಬಂದಿದೆ” ಎಂದರು.

    ತೇಜಸ್ವಿ ಯಾದವ್ ಸಿಎಂ ಅಭ್ಯರ್ಥಿ ಎಂದು ಘೋಷಣೆ ಮಾಡಿದ ಮಹಾಘಟಬಂಧನ್ ಮೈತ್ರಿಕೂಟ, ಎನ್‌ಡಿಎ ವಿರುದ್ಧ ‘ಬದ್ಲೋ ಸರ್ಕಾರ, ಬಚಾವೋ ಬಿಹಾರ’ ಎಂದು ಚುನಾವಣಾ ಪ್ರಚಾರ ಘೋಷವಾಕ್ಯ ಬಿಡುಗಡೆ ಮಾಡಿದೆ. ಮತದಾರ ಪಟ್ಟಿ ಪರಿಷ್ಕರಣೆ ವೇಳೆ ನಡೆದ ಅಕ್ರಮದ ಹಿನ್ನೆಲೆಯಲ್ಲಿ ಈ ಘೋಷಣೆ ಮಾಡಲಾಗಿದೆ ಎಂದು ನಾಯಕರು ಹೇಳಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search