ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಹಾಗೂ ನಟನೆಯ ಯುಐ ಚಿತ್ರ ಕಳೆದ ಶುಕ್ರವಾರವಷ್ಟೇ ಬಿಡುಗಡೆ ಕಂಡು ಭರ್ಜರಿ ಓಪನಿಂಗ್ ಪಡೆದುಕೊಂಡಿದೆ.
ನಿರೀಕ್ಷೆಯಂತೆ ಉಪೇಂದ್ರ ತಮ್ಮ ವಿಭಿನ್ನ ನಿರ್ದೇಶನದ ಶೈಲಿಯನ್ನು ಈ ಚಿತ್ರದಲ್ಲಿಯೂ ಮುಂದುವರಿಸಿದ್ದು ಪ್ರೇಕ್ಷಕರ ಮನೆ ಗೆಲುವಲ್ಲಿ ಮತ್ತೊಮ್ಮೆ ಯಶಸ್ವಿಯಾಗಿದ್ದಾರೆ.
ಇನ್ನು ಬರೋಬ್ಬರಿ ನೂರು ಕೋಟಿ ಬಜೆಟ್ ನಲ್ಲಿ ತಯಾರಾಗಿರುವ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ ಎಷ್ಟು ಕೋಟಿ ಗಳಿಸಬಹುದು ಎಂಬ ಕುತೂಹಲ ಸಿನಿಕರಲ್ಲಿ ಮನೆಮಾಡಿದೆ. ಇಂದು ( ಡಿಸೆಂಬರ್ 23 ) ಯುಐ ಚಿತ್ರ ನಾಲ್ಕನೇ ದಿನದ ಯಶಸ್ವಿ ಪ್ರದರ್ಶನವನ್ನು ಕಾಣುತ್ತಿದ್ದು, ಮೊದಲ ಮೂರು ದಿನಗಳಲ್ಲಿ ಚಿತ್ರ 21.2 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಬಾಕ್ಸ್ ಆಫೀಸ್ ಟ್ರಾಕರ್ಸ್ ತಿಳಿಸಿದ್ದಾರೆ.
ಇನ್ನು ಕನ್ನಡ ಚಲನಚಿತ್ರರಂಗದ ಇತರೆ ಚಿತ್ರತಂಡಗಳ ಹಾಗೆ ಯುಐ ಚಿತ್ರತಂಡ ಸಹ ಅಧಿಕೃತವಾಗಿ ಬಾಕ್ಸಾಫೀಸ್ ಕಲೆಕ್ಷನ್ ಅನ್ನೋ ಘೋಷಣೆ ಮಾಡದೇ ಸುಮ್ಮನಿದೆ.
ಒಟ್ಟಿನಲ್ಲಿ ಚಿತ್ರ ಉತ್ತಮ ಬುಕಿಂಗ್ ಪಡೆದುಕೊಂಡಿದ್ದು ಇಂದೂ ಸಹ ಉತ್ತಮ ಗಳಿಕೆ ಮಾಡುವ ನಿರೀಕ್ಷೆ ಇದೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


