ಛಾವಾ ಸದ್ಯ ಭಾರತ ಬಾಕ್ಸ್ ಆಫೀಸ್‌ನಲ್ಲಿ ಒಳ್ಳೆಯ ಗಳಿಕೆ ಮಾಡುತ್ತಿರುವ ಸಿನಿಮಾ. ಮರಾಠ ದೊರೆ ಛತ್ರಪತಿ ಸಾಂಬಾಜಿ ಮಹಾರಾಜ್ ಜೀವನಾಧಾರಿತ ಚಿತ್ರವಾಗಿರುವ ಛಾವಾಗೆ ಹಿಂದೂ ಸಿನಿ ರಸಿಕರು ಮನ ಸೋತಿದ್ದಾರೆ.
ಹಿಂದೆಂದೂ ತೋರಿಸದ ಹಾಗೆ ಛತ್ರಪತಿ ಸಾಂಬಾಜಿ ಮಹಾರಾಜ್ ಹಾಗೂ ಮುಸ್ಲಿಂ ದೊರೆ ಔರಂಗಜೇಜ್ ನಡುವಿನ ಹೋರಾಟವನ್ನು ಚಿತ್ರದಲ್ಲಿ ತೋರಿಸಲಾಗಿದೆ ಎಂದು ಪ್ರಶಂಸೆಗಳು ವ್ಯಕ್ತವಾಗುತ್ತಿವೆ. ಶಾಲಾ ದಿನಗಳ ಪಠ್ಯ ಪುಸ್ತಕಗಳಲ್ಲಿದ್ದ ಅಂಶಗಳಿಗೂ ಚಿತ್ರದಲ್ಲಿರುವ ಅಂಶಗಳಿಗೂ ಅಪಾರ ವ್ಯತ್ಯಾಸವಿದ್ದು, ಇಷ್ಟು ದಿನಗಳ ಕಾಲ ನಮಗೆ ಈ ಸತ್ಯಗಳೆಲ್ಲಾ ತಿಳಿದಿರಲಿಲ್ಲ, ಇಂತಹ ಅದ್ಭುತ ಮಾಹಿತಿ ನೀಡಿದ ನಿರ್ದೇಶಕ ಲಕ್ಷ್ಮಣ್ ಉಠೇಕರ್ ಅವರನ್ನು ಪ್ರೇಕ್ಷಕರು ಹಾಡಿ ಹೊಗಳಿದ್ದರು.
ಹೀಗೆ ಸಾಲು ಸಾಲು ಪ್ರಶಂಸೆಗಳನ್ನು ಪಡೆದುಕೊಂಡಿದ್ದ ಛಾವಾ ಚಿತ್ರದ ನಿರ್ದೇಶಕ ಲಕ್ಷ್ಮಣ್ ಉಠೇಕರ್ ಇದೀಗ ತಪ್ಪಾಗಿ ಕಥೆಯನ್ನು ಬರೆದ ಆರೋಪಕ್ಕೆ ಗುರಿಯಾಗಿದ್ದಾರೆ. ಹೌದು, ಮರಾಠ ಯೋಧರಾದ ಗಾನೋಜಿ ಹಾಗೂ ಕಾನ್ಹೋಜಿ ಶಿಕ್ರೆ ಅವರನ್ನು ಚಿತ್ರದಲ್ಲಿ ಛತ್ರಪತಿ ಸಾಂಬಾಜಿ ಮಹಾರಾಜರ ರಾಜದ್ರೋಹಿಗಳೆಂದು ತೋರಿಸಲಾಗಿದ್ದು, ಇದು ಸುಳ್ಳು ಎಂದು 100 ಕೋಟಿ ಮಾನನಷ್ಟ ಮೊಕದ್ದೊಮೆ ಹೂಡಲು ಶಿಕ್ರೆ ಕುಟುಂಬದವರು ಮುಂದಾಗಿದ್ದಾರೆ.
ಈ ಕುರಿತು ಶಿಕ್ರೆ ಕುಟುಂಬಸ್ಥರು ನಿರ್ದೇಶಕ ಲಕ್ಷ್ಮಣ್ ಉಠೇಕರ್‌ಗೆ ನೊಟೀಸ್ ನೀಡಿದ್ದು, ಮೂಲಗಳ ಪ್ರಕಾರ “ಚಿತ್ರದಲ್ಲಿ ನಾವು ಕೇವಲ ಗಾನೋಜಿ ಹಾಗೂ ಕಾನ್ಹೋಜಿ ಎಂದಷ್ಟೇ ಬಳಸಿದ್ದೇವೆ. ಎಲ್ಲಿಯೂ ಅವರ ಉಪನಾಮವನ್ನು ಬಳಸಿಲ್ಲ. ಅವರು ಯಾವ ಹಳ್ಳಿಗೆ ಸೇರಿದವರು ಎಂದೂ ಸಹ ಬಳಸಿಲ್ಲ. ಶಿಕ್ರೆ ಕುಟುಂಬದವರನ್ನು ನೋಯಿಸುವ ಉದ್ದೇಶ ನಮಗಿಲ್ಲ. ಛಾವಾ ಅವರಿಗೇನಾದರೂ ಮುಜುಗರ ಉಂಟುಮಾಡಿದ್ದರೆ ಕ್ಷಮೆಯಾಚಿಸುತ್ತಿದ್ದೇನೆ” ಎಂದು ಉತ್ತರಿಸಿದ್ದಾರೆ ಎನ್ನಲಾಗಿದೆ.
ಸದ್ಯ ಈ ಕುರಿತು ಚರ್ಚೆಗಳು ನಡೆಯುತ್ತಿದ್ದು, ಚಿತ್ರದಲ್ಲಿ ಸಾಂಬಾಜಿ ಮಹಾರಾಜರ ಪಾತ್ರವನ್ನು ಅದ್ಭುತವಾಗಿ ತೋರಿಸುವ ಸಲುವಾಗಿ ಇಂತಹ ಇನ್ನೆಷ್ಟು ನಕಲಿ ದೃಶ್ಯಗಳನ್ನು ಬರೆದಿರಬಹುದು ಎಂದು ನೆಟ್ಟಿಗರು ಅನುಮಾವ ವ್ಯಕ್ತಿಪಡಿಸಿದ್ದಾರೆ.
Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ
Subscribe to get the latest posts sent to your email.


