Wednesday, November 4, 2026
spot_img
More
    spot_img
    HomeChampions Trophy 2025Champions Trophy 2025: ಆ ಇಬ್ಬರು ನಮ್ಮಿಂದ ಪಂದ್ಯವನ್ನು ಕಿತ್ತುಕೊಂಡರು; ಭಾರತ ವಿರುದ್ಧದ ಸೋಲಿಗೆ ಕಾರಣ...

    Champions Trophy 2025: ಆ ಇಬ್ಬರು ನಮ್ಮಿಂದ ಪಂದ್ಯವನ್ನು ಕಿತ್ತುಕೊಂಡರು; ಭಾರತ ವಿರುದ್ಧದ ಸೋಲಿಗೆ ಕಾರಣ ತಿಳಿಸಿದ ರಿಜ್ವಾನ್

    ದುಬೈ: ನಿನ್ನೆ (ಫೆಬ್ರವರಿ 23) ನಡೆದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಐದನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವನ್ನು ಕಂಡಿದೆ. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ ಭಾರತ ಟೂರ್ನಿಯಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿತು.

    ಈ ಬದ್ಧ ವೈರಿಗಳ ಕಾಳಗದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲ್‌ಔಟ್ ಆಗಿ ಭಾರತಕ್ಕೆ 242 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ವಿರಾಟ್ ಕೊಹ್ಲಿ ಶತಕದ ನೆರವಿನಿಂದ 42.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 244 ರನ್‌ ಕಲೆಹಾಕಿತು.

    ಈ ಗೆಲುವಿನೊಂದಿಗೆ ಭಾರತ ತನ್ನ ಸೆಮಿಫೈನಲ್ ಪ್ರವೇಶವನ್ನು ಬಹುತೇಕ ಖಚಿತಪಡಿಸಿಕೊಂಡರೆ, ಅತ್ತ ಪಾಕ್ ಸೆಮಿಫೈನಲ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ.

    ಮಾಡು ಇಲ್ಲವೇ ಮಡಿ ಪಂದ್ಯವನ್ನು ಸೋತ ಬಳಿಕ ಪಂದ್ಯದ ಕುರಿತು ಮಾತನಾಡಿರುವ ಮೊಹಮ್ಮದ್ ರಿಜ್ವಾನ್ “ನಾವು ಟಾಸ್ ಗೆದ್ದವಾದರೂ ಅದರಿಂದ ಏನೂ ಉಪಯೋಗ ಪಡೆಯಲಿಲ್ಲ. 280 ರನ್ ಕಲೆಹಾಕಿದರೆ ಒಳ್ಳೆಯ ಮೊತ್ತ ಎಂದುಕೊಂಡಿದ್ದೆವು. ಆದರೆ ಇನ್ನಿಂಗ್ಸ್ ಮಧ್ಯದ ಓವರ್‌ಗಳಲ್ಲಿ ಭಾರತದ ಬೌಲರ್‌ಗಳು ಉತ್ತಮ ಬೌಲಿಂಗ್ ಮಾಡಿ ನಮ್ಮ ವಿಕೆಟ್ ಪಡೆದರು. ನಾನು ಹಾಗೂ ಶಕೀಲ್ ಹೊಂದಿಕೊಳ್ಳಲು ತುಂಬಾ ಸಮಯ ತೆಗೆದುಕೊಂಡೆವು. ಆನಂತರ ತಪ್ಪಾದ ಹಾಗೂ ಕಳಪೆ ಶಾಟ್ ಆಯ್ಕೆ ಮಾಡಿದೆವು. ಅವರು ನಮ್ಮನ್ನು ಒತ್ತಡಕ್ಕೆ ಸಿಲುಕಿಸಿದರು. ಅದಕ್ಕೆ ನಾವು 240ಕ್ಕೆ ಸೀಮಿತವಾದೆವು. ನಾವು ಸೋತಿದ್ದೇವೆ ಎಂದರೆ ಎಲ್ಲಾ ವಿಭಾಗಗಳಲ್ಲೂ ಸೋತಿದ್ದೇವೆ ಎಂದರ್ಥ. ಆರಂಭದಲ್ಲಿ ನಾವು ಅವರ ಮೇಲೆ ಆಕ್ರಮಣ ಮಾಡಿದೆವು. ಬಳಿಕ ಅವರು ನಮ್ಮ ಮೇಲೆ ಆಕ್ರಮಣ ಮಾಡಿದರು. ಅವರನ್ನು ಒತ್ತಡಕ್ಕೆ ಸಿಲುಕಿಸಬೇಕು ಎಂದುಕೊಂಡೆವು. ಆದರೆ ಆಗಲೇ ಇಲ್ಲ. ಅಬ್ರಾರ್ ಒಂದು ವಿಕೆಟ್ ಪಡೆದು ಬ್ರೇಕ್ ಕೊಟ್ಟರಾದರೂ ಅವರು ಚೆನ್ನಾಗಿ ಆಡಿದರು. ಕೊಹ್ಲಿ ಹಾಗೂ ಗಿಲ್ ನಮ್ಮಿಂದ ಆಟವನ್ನು ಕಿತ್ತುಕೊಂಡರು. ನಾವು ಫೀಲ್ಡಿಂಗ್‌ನಲ್ಲೂ ಸಹ ಇನ್ನೂ ಸುಧಾರಿಸಿಕೊಳ್ಳಬೇಕಿದೆ. ನಾವು ಇಂದಿನ ಹಾಗೂ ಕಳೆದ ಪಂದ್ಯಗಳೆರಡರಲ್ಲೂ ತುಂಬಾ ತಪ್ಪುಗಳನ್ನು ಮಾಡಿದ್ದು, ಮುಂದಿನ ದಿನಗಳಲ್ಲಿ ಅವುಗಳನ್ನು ತಿದ್ದುಕೊಳ್ಳುವ ಪ್ರಯತ್ನ ಮಾಡುತ್ತೇವೆ” ಎಂದರು.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search