Tuesday, November 3, 2026
spot_img
More
    spot_img
    HomeChampions Trophy 2025Champions Trophy 2025: ಕೊಹ್ಲಿ ಶತಕ ತಡೆಯಲೆಂದೇ ವೈಡ್ ಮೇಲೆ ವೈಡ್ ಎಸೆದ ಅಫ್ರಿದಿ; ಕ್ಯಾಕರಿಸಿ...

    Champions Trophy 2025: ಕೊಹ್ಲಿ ಶತಕ ತಡೆಯಲೆಂದೇ ವೈಡ್ ಮೇಲೆ ವೈಡ್ ಎಸೆದ ಅಫ್ರಿದಿ; ಕ್ಯಾಕರಿಸಿ ಉಗಿದ ಕ್ರಿಕೆಟ್ ಪ್ರೇಮಿಗಳು

    ದುಬೈ: ನಿನ್ನೆ (ಫೆಬ್ರವರಿ 23) ಇಲ್ಲಿನ ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ಐದನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ 6 ವಿಕೆಟ್‌ಗಳ ಭರ್ಜರಿ ಗೆಲುವನ್ನು ಕಂಡಿತು. ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿದ ಭಾರತ ಟೂರ್ನಿಯಲ್ಲಿ ತನ್ನ ಎರಡನೇ ಗೆಲುವು ದಾಖಲಿಸಿತು.

    ಈ ಬದ್ಧ ವೈರಿಗಳ ಕಾಳಗದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ 49.4 ಓವರ್‌ಗಳಲ್ಲಿ 241 ರನ್‌ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಆಲ್‌ಔಟ್ ಆಗಿ ಭಾರತಕ್ಕೆ 242 ರನ್‌ಗಳ ಗುರಿಯನ್ನು ನೀಡಿತ್ತು. ಈ ಗುರಿಯನ್ನು ಬೆನ್ನಟ್ಟಿದ ವಿರಾಟ್ ಕೊಹ್ಲಿ ಶತಕದ ನೆರವಿನಿಂದ 42.3 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 244 ರನ್‌ ಕಲೆಹಾಕಿತು.

    ಇನ್ನು ವಿರಾಟ್ ಕೊಹ್ಲಿ ತಮ್ಮ ಶತಕವನ್ನು ಪಂದ್ಯದ ಕೊನೆಯ ಎಸೆತದಲ್ಲಿ ಬಾರಿಸಿದರು. ಭಾರತಕ್ಕೆ ಗೆಲ್ಲಲು 2 ರನ್ ಬೇಕಿದ್ದರೆ, ಕೊಹ್ಲಿ ಶತಕಕ್ಕೆ 4 ರನ್ ಬೇಕಿತ್ತು. ಅದೂ ಸಹ ಅಕ್ಷರ್ ಪಟೇಲ್ ಎರಡು ರನ್ ಓಡುವ ಜಾಗದಲ್ಲಿ ಕೊಹ್ಲಿ ಶತಕ ಬಾರಿಸುವ ಸಲುವಾಗಿ ಕೇವಲ ಒಂದು ರನ್ ಓಡಿದ ಕಾಣದಿಂದಾಗಿ. ಹೀಗೆ ಅಂತಿಮವಾಗಿ ಕೊನೆಯ ಎಸೆತದಲ್ಲಿ ಶತಕಕ್ಕೆ ಬೇಕಾಗಿದ್ದ ಬೌಂಡರಿ ಬಾರಿಸಿದ ಕೊಹ್ಲಿ ಏಕದಿನ ಕ್ರಿಕೆಟ್ ಜೆರ್ಸಿ ತೊಟ್ಟು 51ನೇ ಬಾರಿಗೆ ಬ್ಯಾಟ್ ಪ್ರದರ್ಶಿಸಿದರು.

    ಈ ಶತಕ ಇಷ್ಟು ಕಷ್ಟಕರವಾಗಲು ಕಾರಣ ಪಾಕ್‌ ಬೌಲರ್ ಶಾಹಿನ್ ಶಾ ಅಫ್ರಿದಿ. ಹೌದು, ವಿರಾಟ್ ಕೊಹ್ಲಿ ಶತಕಕ್ಕೆ 13 ರನ್ ಬೇಕಿದ್ದಾಗ ಹಾಗೂ ಭಾರತದ ಗೆಲುವಿಗೆ 17 ರನ್ ಬೇಕಿದ್ದಾಗ 42ನೇ ಓವರ್ ಬೌಲಿಂಗ್ ಮಾಡಿದ ಶಾಹಿನ್ ಅಫ್ರಿದಿ ಬೇಕಂತಲೇ ಅಕ್ಷರ್ ಪಟೇಲ್ ಎದುರಿಸಿದ ಮೂರನೇ ಎಸೆತವನ್ನು ವೈಡ್ ಹಾಕಿದರು. ಚೆಂಡು ಕೀಪರ್ ಕೈಗೆ ಸಿಗದ ಕಾರಣ ಅಕ್ಷರ್ ಹಾಗೂ ಕೊಹ್ಲಿ ಒಂದು ರನ್ ಓಡಿದರು. ಬಳಿಕ ಅಫ್ರಿದಿ ಮತ್ತೊಂದು ವೈಡ್ ಎಸೆದರು. ಅಲ್ಲದೇ ಅದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮತ್ತೊಮ್ಮೆ ವೈಡ್ ಹಾಕಿದರು. ಹೀಗೆ ಓವರ್‌ ಒಂದರಲ್ಲಿಯೇ ಶಾಹಿನ್ ಅಫ್ರಿದಿ 3 ವೈಡ್ ಬಾಲ್‌ ಹಾಕುವ ಮೂಲಕ ಕೊಹ್ಲಿ ಶತಕ ತಪ್ಪಿಸಲು ಯತ್ನಿಸಿದರು.

    ಇನ್ನು ಶಾಹಿನ್ ಅಫ್ರಿದಿಯ ಈ ಯತ್ನಕ್ಕೆ ನೆಟ್ಟಿಗರು ಕಿಡಿಕಾರಿದ್ದು, ಹಲವಾರು ಮೀಮ್‌ಗಳನ್ನು ಮಾಡಿ ಹೀನಾಯವಾಗಿ ಟೀಕೆ ಮಾಡುತ್ತಿದ್ದಾರೆ.


    Discover more from ಕರುನಾಡ ಸುದ್ದಿ - ಅತ್ಯುತ್ತಮ ಕನ್ನಡ ಸುದ್ದಿಗಳಿಗಾಗಿ

    Subscribe to get the latest posts sent to your email.

    LEAVE A REPLY

    Related News

    ಮಹಾಲಯ ಅಮಾವಾಸ್ಯೆ 2026: ಅಕ್ಟೋಬರ್ 10ರಂದು ಆಚರಣೆ; ಪಿತೃಪೂಜೆಯ ಮಹತ್ವವೇನು?

    ಹಿಂದೂ ಧರ್ಮದಲ್ಲಿ ಮಹಾಲಯ ಅಮಾವಾಸ್ಯೆಗೆ ವಿಶೇಷ ಸ್ಥಾನವಿದೆ. ಪಿತೃಪಕ್ಷದ ಕೊನೆಯ ದಿನವಾದ ಈ ಸಂದರ್ಭದಲ್ಲಿ ಪೂರ್ವಜರನ್ನು ಸ್ಮರಿಸಿ, ಅವರ ಆತ್ಮಕ್ಕೆ ಶಾಂತಿ ಕೋರಿ ವಿವಿಧ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಈ ದಿನ ಶ್ರಾದ್ಧ,...

    ಕರ್ನಾಟಕಕ್ಕೆ ಗುಡ್‌ನ್ಯೂಸ್: ಯುಬಿಯಿಂದ ₹4,500 ಕೋಟಿ ಕೊಡುಗೆ, 36 ಸಾವಿರಕ್ಕೂ ಹೆಚ್ಚು ಉದ್ಯೋಗ

    ಬೆಂಗಳೂರು: ದೇಶದ ಅತಿದೊಡ್ಡ ಬಿಯರ್ ಉತ್ಪಾದನಾ ಸಂಸ್ಥೆ ಹಾಗೂ ಹೈನೆಕನ್‌ ಕಂಪನಿಯ ಭಾಗವಾಗಿರುವ ಬೆಂಗಳೂರು ಮೂಲದ 'ಯುನೈಟೆಡ್ ಬ್ರೂವರೀಸ್ ಲಿಮಿಟೆಡ್' (ಯುಬಿಎಲ್‌), ಕರ್ನಾಟಕದ ಆರ್ಥಿಕತೆ ಮತ್ತು ಉದ್ಯೋಗ ಸೃಷ್ಟಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ...

    Most Popular

    Recent Comments

    Home
    Play
    Notification
    Search